Thursday, September 19, 2024

ಪ್ರಾಯೋಗಿಕ ಆವೃತ್ತಿ

”ಯಡಿಯೂರಪ್ಪ ಅವರು ಬಿಜೆಪಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಆಗಿದ್ದಾರೆ” : ಕಾಂಗ್ರೆಸ್

ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರನ್ನೇ ಹೊರಗಿಟ್ಟು ಇತರೇ ರಾಜ್ಯ ನಾಯಕರೊಂದಿಗೆ ಸಭೆ ನಡೆಸಿದ್ದು ಲಿಂಗಾಯತ ಸಮುದಾಯದ ಹಿರಿಯ ನಾಯಕನಿಗೆ ಮಾಡಿದ ಘೋರ ಅವಮಾನ. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ BSY ಅವರಿಗೆ ಸಭೆಯಲ್ಲಿ ಕುರ್ಚಿ ಇರಲಿಲ್ಲವೇ ? ಟಿಕೆಟ್ ನಿರ್ಧರಿಸುವ ಸ್ವತಂತ್ರವಿಲ್ಲವೇ? BSY ಅವರು ಬಿಜೆಪಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಆಗಿದ್ದಾರೆ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಕಿಡಿಕಾರಿದೆ.

“>

ಬಿಜೆಪಿಗೆ ಯಡಿಯೂರಪ್ಪ ಬೇಕಿರುವುದು ಓಟು ಗಳಿಕೆಗೆ ಮುಖ ತೋರಿಸಲು ಮಾತ್ರ! ಟಿಕೆಟ್ ಹಂಚಿಕೆಯ ಸಭೆಗೆ ಮಾತ್ರ BSY ಹೊರಗೆ, ಪ್ರಹ್ಲಾದ್ ಜೋಶಿ, ಬಿ.ಎಲ್.ಸಂತೋಷ್, ಸಿ.ಟಿ.ರವಿ, ಕಟೀಲು ಒಳಗೆ! BSY ಅವರಿಗೆ ಈಗ ಮಾರ್ಗದರ್ಶಕ ಮಂಡಳಿಯೂ ಇಲ್ಲ, ಬಿಜೆಪಿಗೆ ಮಾರ್ಗದರ್ಶನ ಬೇಕಿಲ್ಲ. BSYರ ರಾಜಕೀಯ ಬದುಕಿಗೆ ದುರಂತ ಅಂತ್ಯ ತೋರಿಸುತ್ತಿದೆ ಬಿಜೆಪಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

BSY ಇರಬೇಕಾದ ಜಾಗದಲ್ಲಿ ಪ್ರಯತ್ನಪೂರ್ವಕವಾಗಿ ಪ್ರಹ್ಲಾದ್ ಜೋಷಿಯನ್ನು ತಂದು ಕೂರಿಸುತ್ತಿದೆ ಬಿಜೆಪಿ. ಟಿಕೆಟ್ ಹಂಚಿಕೆಯ ಸಭೆಯಲ್ಲಿ BSYರ ಮಾತಿಗೆ ಮನ್ನಣೆ ಕೊಡುವುದಿರಲಿ ಕನಿಷ್ಠ ಹಾಜರಿಗೂ ಅವಕಾಶ ಕೊಡಲಿಲ್ಲ. BSYರಿಗೆ ನಿರಂತರ ಅವಮಾನ ಮಾಡಿದ ಬಿಜೆಪಿ ಅವರನ್ನು ಡಸ್ಟ್‌ಬಿನ್‌ನಲ್ಲಿ ಬಿದ್ದಿರುವ ಕಸದಂತೆ ನಡೆಸಿಕೊಳ್ಳುತ್ತಿದೆ.

“>

 

ಅಭ್ಯರ್ಥಿಗಳ ಕನಿಷ್ಠ ಒಂದು ಪಟ್ಟಿಯನ್ನೂ ಬಿಡುಗಡೆ ಮಾಡದಷ್ಟು ಬಿಜೆಪಿ ಅಸಮರ್ಥವಾಗಿದೆ. ಪಕ್ಷದ ಅಧ್ಯಕ್ಷರನ್ನು ಬಿಟ್ಟು ಕೇಂದ್ರ ಗೃಹಸಚಿವ ಅಮಿತ್ ಶಾ ಏಕೆ ಟಿಕೆಟ್ ನೀಡುವ ಉಸಾಬರಿಗೆ ಬಂದಿದ್ದು? ಬಿಜೆಪಿಯ ರಾಷ್ಟ್ರೀಯ ನಾಮಕಾವಸ್ಥೆ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಯಾವುದೇ ಸ್ವತಂತ್ರವಿಲ್ಲದ್ದು ಬಿಜೆಪಿಯ ಸರ್ವಾಧಿಕಾರಕ್ಕೆ ನಿದರ್ಶನ ಎಂದು  ಕಾಂಗ್ರೆಸ್ ಟೀಕಿಸಿದೆ.

ಬಿಜೆಪಿ ಯಡಿಯೂರಪ್ಪನವರ ಕಣ್ತಪ್ಪಿಸಿ, ದಿಕ್ಕು ತಪ್ಪಿಸಿ ಮೀಟಿಂಗ್ ಮಾಡ್ತಿರೋದೇಕೆ? ಅವರಿಗೆ ಕೇಂದ್ರೀಯ ಸಂಸದೀಯ ಮಂಡಳಿಯ ಸ್ಥಾನ ನೀಡಿದ್ದು ನಾಮಕಾವಸ್ಥೆಗೆ ಮಾತ್ರವೇ? BSYಗಿಂತ ಸಿ.ಟಿ ರವಿ, ಸಂತೋಷ್, ಪ್ರಹ್ಲಾದ್ ಜೋಷಿಯೇ ಮುಖ್ಯವಾದರೆ? BSYಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ? ಇಂತಹ ದಯನೀಯ ಸ್ಥಿತಿ BSYರಿಗೆ ಬರಬಾರದಿತ್ತು! ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!