ಮಂಡ್ಯದ ಯುವಕವಿ ಎಂದು ಹೆಸರಾದ ಎಂ. ಎನ್. ಶಿವಕುಮಾರ್ ಆರಾಧ್ಯ ಅವರಿಗೆ, ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯಿಂದ 2022ನೇ ಸಾಲಿನ ರಾಜ್ಯಮಟ್ಟದ ಕನ್ನಡ ವಿಕಾಸ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ಸಂಘಟನಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಶಿವಕುಮಾರ್ ಆರಾಧ್ಯ ಸಲ್ಲಿಸಿರುವ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಈ ಸಮಾರಂಭದಲ್ಲಿ ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಎಚ್ ಕೆ ರಾಮು, ವಿಧಾನ ಪರಿಷತ್ ಸದಸ್ಯರಾದ ಸಿಎನ್ ಮಂಜೇಗೌಡ, ಸಾಹಿತಿ ಡಿ ಸತೀಶ್ ಜವರೇಗೌಡ, ವೇದಿಕೆಯ ರಾಜ್ಯಾಧ್ಯಕ್ಷೆ ಎಚ್ ಎಲ್. ಯಮುನಾರವರು ಉಪಸ್ಥಿತರಿದ್ದರು.




