Friday, September 20, 2024

ಪ್ರಾಯೋಗಿಕ ಆವೃತ್ತಿ

ಕಂಟೆಂಟ್ ಕ್ರಿಯೇಟರ್‌ಗಳಿಗೆ ಸಿಹಿ ಸುದ್ದಿ | ನಿಯಮ ಸಡಿಲಿಸಿದ ಯೂಟ್ಯೂಬ್

ವಿಶ್ವದ ಅತಿದೊಡ್ಡ ವಿಡಿಯೋ ಪ್ಲಾಟ್​ಫಾರ್ಮ್ ಯೂಟ್ಯೂಬ್ ತನ್ನ ಕಂಟೆಂಟ್ ಕ್ರಿಯೇಟರ್‌ಗಳಿಗೆ ಹಣ ಗಳಿಕೆಯ ಕನಿಷ್ಠ ಚಂದಾದಾರಿಕೆಯ ನಿಯಮಗಳನ್ನು ಸಡಿಲಗೊಳಿಸಿದೆ. ಹೊಸ ನಿಯಮದ ಪ್ರಕಾರ ಮೊದಲಿದ್ದ ಚಂದಾದಾರಿಕೆಯ ಅರ್ಧದಷ್ಟಿದ್ದರೆ ಹಣ ಗಳಿಕೆಗೆ ಪ್ರವೇಶ ಪಡೆಯಬಹುದು.

ಈಗ ಯೂಟ್ಯೂಬ್‌ನ ಹೊಸ ಹಣ ಗಳಿಕೆಯ ನಿಯಮಗಳ ಪ್ರಕಾರ 500 ಚಂದಾದಾರರಿದ್ದರೆ ಸಾಕು. ಕಳೆದ  90 ದಿನಗಳಲ್ಲಿ ಕನಿಷ್ಠ ಮೂರು ಅಥವಾ ಹೆಚ್ಚಿನ ಸಾರ್ವಜನಿಕ ವಿಡಿಯೊಗಳನ್ನು ಅಪ್‌ಲೋಡ್‌ ಮಾಡಿರಬೇಕು. ಈ ಮೊದಲು ಕನಿಷ್ಠ 1000 ಚಂದಾದಾರರ ಅಗತ್ಯವಿತ್ತು.

ಒಂದು ವರ್ಷದಲ್ಲಿ 4000 ಗಂಟೆಗಳ ವೀಕ್ಷಣೆ ಬದಲು 3000 ಗಂಟೆಗಳ ವೀಕ್ಷಣೆ ಇದ್ದರೆ ಸಾಕು. ಹಾಗೆಯೇ, ಸಣ್ಣ ವಿಡಿಯೋಗಳ ವೀಕ್ಷಣೆ 1 ಕೋಟಿ ಬದಲು 30 ಲಕ್ಷಕ್ಕೆ ಇಳಿಸಲಾಗಿದೆ ಎಂದು ಗೂಗಲ್ ಮಾಲೀಕತ್ವದ ಯೂಟ್ಯೂಬ್ ಸಂಸ್ಥೆ ಮಾಹಿತಿ ನೀಡಿದೆ. ಆದರೆ ಯೂಟ್ಯೂಬ್ ಸಹಭಾಗಿತ್ವದ ಪ್ರೋಗ್ರಾಮ್​ಗೆ ಅರ್ಹರಾಗಲು ಬೇಕಾದ ಬೇರೆಲ್ಲಾ ಮಾನದಂಡಗಳು ಹಾಗೆಯೇ ಮುಂದುವರಿಯಲಿವೆ ಎಂದು ಯೂಟ್ಯೂಬ್ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!