Friday, September 20, 2024

ಪ್ರಾಯೋಗಿಕ ಆವೃತ್ತಿ

ಮಿಜೋರಾಂ ಮತ ಎಣಿಕೆ| ಬಹುಮತದತ್ತ ಝೆಡ್‌ಪಿಎಂ

ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಒಟ್ಟು 40 ವಿಧಾನಸಬಾ ಕ್ಷೇತ್ರಗಳ ಪೈಕಿ ಝೋರಾಮ್ ಪೀಪಲ್ಸ್ ಮೂವ್ಮೆಂಟ್ (ಝೆಡ್‌ಪಿಎಂ) 27 ಕ್ಷೇತ್ರಗಳಲ್ಲಿ ಮುಂದಿದೆ. ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) 10 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಇನ್ನುಳಿದಂತೆ ಕಾಂಗ್ರೆಸ್ 1 ಹಾಗೂ ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಚುನಾವಣಾ ಆಯೋಗದ ವರದಿಯಂತೆ, ಮಿಜೋರಾಂ ಉಪಮುಖ್ಯಮಂತ್ರಿ ಮತ್ತು ಎಂಎನ್ಎಫ್ ಅಭ್ಯರ್ಥಿ ತೌನ್ಲುಯಾ ಅವರಿಗೆ ಝೆಡ್‌ಪಿಎಂ ಅಭ್ಯರ್ಥಿ ವಿರುದ್ಧ ಟುಯಿಟಾಂಗ್ ವಿಧಾನಸಭೆ ಕ್ಷೇತ್ರದಲ್ಲಿ ಸೋಲುಂಟಾಗಿದೆ.

ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್)ನ ತೌನ್ಲುಯಾ ಅವರು 6,079 ಮತಗಳನ್ನು ಪಡೆದರೆ, ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ಝೆಡ್‌ಪಿಎಂ) ಅಭ್ಯರ್ಥಿ ಡಬ್ಲ್ಯು ಚುವಾನವ್ಮಾ ಅವರು 6,988 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.

ರಾಜ್ಯದಾದ್ಯಂತ 13 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಎಚ್. ಲಿಯಾಂಜೆಲಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಎಂಎನ್‌ಎಫ್, ಜಿಪಿಎಂ ಮತ್ತು ಕಾಂಗ್ರೆಸ್ ಎಲ್ಲ 40 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ ರಾಜ್ಯದಲ್ಲಿ ಕೇವಲ 23 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಮತದಾನ ನಡೆದಿದ್ದು, ಶೇ.80.43ರಷ್ಟು ಮತದಾನವಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!