Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯದಲ್ಲಿ ಪ್ರತಿದಿನ1 ಕೋಟಿ ಲೀಟರ್ ಹಾಲು ಉತ್ಪಾದನೆ: ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

ಕೆಎಂಎಫ್ ವತಿಯಿಂದ ಪ್ರತಿದಿನ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕೆಎಂಎಫ್ ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು.

ಅವರು ಮಂಗಳವಾರ ಕೆಎಂಎಫ್‌ ವತಿಯಿಂದ ಒಂದು ಕೋಟಿ ಲೀಟರ್ ಹಾಲಿನ ಸಂಗ್ರಹದ ಸಂಭ್ರಮಾಚರಣೆಯ ಅಂಗವಾಗಿ ಗೋ ಮಾತೆಗೆ ಪೂಜೆ ಸಲ್ಲಿಸಿ ನಂತರ ಕಾರ್ಯಕ್ರಮ ಉದ್ದೇಶಿಸಿ ಮಾಧ್ಯಮದವರೊಂದಿಗೆ ಮಾತನಾಡಿ, “ಕರ್ನಾಟಕದಲ್ಲಿ ಹಾಲಿನ ಉತ್ಪಾದನೆ ಕಳೆದ ವರ್ಷ ಜೂನ್ ಮಾಹೆಯಲ್ಲಿ ದಿನವೊಂದಕ್ಕೆ 90 ಲಕ್ಷ ಲೀ. ಇತ್ತು” ಎಂದರು.

ಹಾಲಿನ ಸೊಸೈಟಿಗಳು ರೈತರ ಸಂಘಟನೆ

ಹಿಂದೆ ಅವರು ಪಶುಸಂಗೋಪನಾ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ ಹಾಲು ಒಕ್ಕೂಟಗಳಿಗೆ ಡೈರಿಯನ್ನು ಹಸ್ತಾಂತರ ಮಾಡಿಕೊಟ್ಟಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು ಅಲ್ಲಿಯವರೆಗೂ ಡೈರಿಗಳು ಹಾಗೂ ಹಾಲು ಒಕ್ಕೂಟಗಳು ಪ್ರತ್ಯೇಕವಾಗಿದ್ದವು. ಹಾಲಿನ ಸೊಸೈಟಿಗಳೂ ಕೂಡ ರೈತರ ಸಂಘಟನೆಗಳೇ ಆಗಿವೆ ಎಂದರು.

ರೈತರಿಗೆ ನೆರವು

“ರಾಜ್ಯದಲ್ಲಿ ಸುಮಾರು 16,000 ಸೊಸೈಟಿಗಳಿದ್ದು, 15 ಹಾಲು ಒಕ್ಕೂಟಗಳಿವೆ. ಕೆಲವೆಡೆ ಎರಡು ಮೂರು ಜಿಲ್ಲೆ ಸೇರಿ ಒಕ್ಕೂಟ ಮಾಡಿಕೊಂಡಿದ್ದಾರೆ. 15 ಮದರ್ ಡೈರಿಗಳಿವೆ. ಒಂದು ಕೋಟಿ ಹಾಲು ಉತ್ಪಾದನೆಯಾಗುತ್ತಿರುವುದರಿಂದ ಅರ್ಧ ಲೀ ಹಾಲಿನ ಪ್ಯಾಕೆಟ್ ನಲ್ಲಿ 50 ಮೀ.ಲೀ ಹಾಲು ಹೆಚ್ಚು ಮಾಡಲಾಗಿದೆ. ಇಷ್ಟು ಹಾಲನ್ನು ಮಾರಾಟ ಮಾಡಬೇಕಿದೆ. ನಾವು ರೈತರಿಗೆ ಹಾಗೂ ಸೊಸೈಟಿಗಳಿಗೆ ಹಾಲು ಬೇಡ ಎನ್ನಲಾಗುವುದಿಲ್ಲ. ರೈತರಿಗೆ ಸಹಾಯ ಮಾಡಲು ನಂದಿನಿ ಹಾಲಿನ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಹೆಚ್ಚಾಗಿರುವ ಪ್ರಮಾಣಕ್ಕೆ 2 ರೂಪಾಯಿ ಹೆಚ್ಚಿಸಲಾಗಿದೆ” ಎಂದರು.

ವಿಪಕ್ಷದ ಅಪಪ್ರಚಾರ

“ವಿರೋಧ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳದೆ ಹಾಲಿನ ಬೆಲೆ ಜಾಸ್ತಿ ಮಾಡಿದ್ದಾರೆ ಎಂದು ಹೇಳಿ ಅಪಪ್ರಚಾರ ಮಾಡುತ್ತಿದ್ದಾರೆ. ರೈತರ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎಂದು ಅನಿಸುತ್ತಿದೆ. ಹಾಲು ಉತ್ಪಾದನೆ ಹೆಚ್ಚಾದರೆ ಹೆಚ್ಚು ಆದಾಯ ಬರಲಿದೆ. ಒಂದು ಕೋಟಿ ಲೀ. ಉತ್ಪಾದನೆಯಾದರೆ ಒಂದು ದಿನಕ್ಕೆ 5 ಕೋಟಿ ಪ್ರೋತ್ಸಾಹ ಧನವನ್ನು ಸರ್ಕಾರ ಕೊಡುತ್ತದೆ. ಒಂದು ತಿಂಗಳಿಗೆ 150 ಕೋಟಿ, ವರ್ಷಕ್ಕೆ 1800ಕೋಟಿ ರೂ.ಗಳನ್ನು ನೀಡಿ ರೈತರಿಗೆ ಸಹಾಯ ಮಾಡಲಾಗುತ್ತಿದೆ” ಎಂದು ಹೇಳಿದರು.

“2 ರೂ.ಇದ್ದ ಪ್ರೋತ್ಸಾಹಧನವನ್ನು 5 ರೂ. ಮಾಡಿದವನು ನಾನು. ವಿರೋಧಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಈ ಬಗ್ಗೆ ತಿಳಿಯದೇ ಮಾತನಾಡುತ್ತಾರೆ. ಒಂದು ವೇಳೆ ಹಾಲಿನ ಬೆಲೆ ಹೆಚ್ಚಾದರೂ ಕೊಳ್ಳುವವರಿಗೆ ಅದು ಭಾರವಾಗುತ್ತದೆ. ರೈತರಿಗೆ ಭಾರವಾಗುವುದಿಲ್ಲ, ಸಹಾಯವಾಗುತ್ತದೆ. ಹಾಲಿನ ಬೆಲೆ ಹೆಚ್ಚು ಮಾಡಿಲ್ಲ” ಎಂದು ಪುನರುಚ್ಚರಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!