Friday, November 20, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಗಿರಿಜಾ ಕಲ್ಯಾಣ ಮಹೋತ್ಸವ

31ನೇ ವರ್ಷದ ಗಿರಿಜಾ ಕಲ್ಯಾಣ ಮಹೋತ್ಸವ ಇಂದಿನ ಮೂರು ದಿನಗಳ ಕಾಲ ನಾಗಮಂಗಲ ಪಟ್ಟಣದ ಶ್ರೀಮದ್ ದಕ್ಷಿಣ ಕಾಳಿಕಾಂಬ ಕಮಟೇಶ್ವರ ದೇವಾಲಯದಲ್ಲಿ ಜರುಗಲಿದೆ.

ಸ್ಥಳೀಯ ವಿಶ್ವಕರ್ಮ ಜನಾಂಗದಿಂದ ಗಿರಿಜಾ ಕಲ್ಯಾಣ ಮಹೋತ್ಸವ ಗುರವಾರವಾದ ಇಂದು ಪ್ರಾರಂಭಗೊಂಡಿದ್ದು ನವಗ್ರಹ ಹೋಮ ಮತ್ತು ಕನ್ಯಾವರಣ ವೀಳ್ಯ ಶಾಸ್ತ್ರ, ಬಳೆ ಶಾಸ್ತ್ರ, ಭತ್ತದ ಶಾಸ್ತ್ರ ಜರುಗಿದವು, ಶುಕ್ರವಾರದಂದು ಗಂಗಾವರಣ, ಕಾಶಿ ಯಾತ್ರೆ,ಸಂಬಂಧ ಮಾಲೆಯ ಮೂಲಕ ಕಮಟೇಶ್ವರ ಸ್ವಾಮಿಗೆ ಗಿರೀಜೆಯೊಂದಿಗೆ ಧಾರಾಮಹೂರ್ತವನ್ನು ನಿಗದಿಪಡಿಸಲಾಗಿದೆ.

ನಾಗಮಂಗಲ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಬೆಳ್ಳಿರಥದಲ್ಲಿ ಗಿರಿಜ ಚಂದ್ರಶೇಖರ ಸ್ವಾಮಿಯ ಮೆರವಣಿಗೆ ಮಾಡಲಾಗುತ್ತದೆ, ಕಡೆಯ ದಿನವಾದ ಶನಿವಾರದಂದು ಕವಟೋದ್ಘಾಟನೆ ಮತ್ತು ರಾಜ ಬೀದಿಗಳಲ್ಲಿ ವಶಂತೋತ್ಸವ ಜರುಗಲಿದ್ದು, ಬೌವನ  ವಿಶ್ವಕರ್ಮ ವಿದ್ಯಾಪೀಠ ಬೆಂಗಳೂರಿನ ನಿರಂಜನ ಸಾಮವೇಧಿರವರ ಅಧ್ಯಕ್ಷತೆಯಲ್ಲಿ ಜರುಗಲಿವೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ