Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ನದಿ ನೀರಿನ ಹೋರಾಟಕ್ಕಾಗಿ 100 ದಿನದ ಧರಣಿ – 19ನೇ ದಿನದ ಉಪವಾಸ ಸತ್ಯಾಗ್ರಹ

✍️ ಜಿ.ಧನಂಜಯ ದರಸಗುಪ್ಪೆ, ಮಂಡ್ಯ

ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂಬ ಆದೇಶದಿಂದ ಆಕ್ರೋಶಗೊಂಡ “ಮಂಡ್ಯ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿ”ಯವರು, ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರಿಲ್ಲದ ಹಾಗೂ ಕುಡಿಯುವ ನೀರಿಗೂ ಹಾಹಾಕಾರವಿದ್ದು, *ಬರಗಾಲ ಬಂದೆರಗಿರುವ ಈ ಸಂದರ್ಭದಲ್ಲಿ,ಕನ್ನಂಬಾಡಿ ಕಟ್ಟೆ(ಕೃಷ್ಣರಾಜ ಸಾಗರ ಜಲಾಶಯ) ಯಲ್ಲಿಯೇ ನೀರಿನ ಮಟ್ಟ ಕಡಿಮೆ ಇರುವಾಗ, ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ, ತಕ್ಷಣವೇ ರಾಜ್ಯ ಸರ್ಕಾರ ನೀರು ಬಿಡುವುದನ್ನು ನಿಲ್ಲಿಸಬೇಕು ಹಾಗೂ ಕಾವೇರಿ ನೀರಾವರಿ ಪ್ರಾಧಿಕಾರ ತನ್ನ ಆದೇಶವನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ, ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ಪ್ರಾರಂಭಿಸಿ ನೂರು ದಿನಗಳಾಗಿವೆ.

nudikarnataka.com

ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿ ನೀರಿನ ಉಳಿವಿಗಾಗಿ ನಡೆದ ಚಳುವಳಿಗಳಲ್ಲಿ ಇದು ಭಿನ್ನ -ವಿಶಿಷ್ಟ ಹಾಗೂ ಧೀರ್ಘಕಾಲದ ಧರಣಿ ಸತ್ಯಾಗ್ರಹವಾಗಿದೆ ಎಂದರೆ ತಪ್ಪಾಗಲಾರದು, ಪ್ರಾರಂಭದಲ್ಲಿ ಜಿಲ್ಲೆಯ ಎಲ್ಲರೂ ಪಕ್ಷಾತೀತವಾಗಿ ಧರಣಿಗೆ ಬೆಂಬಲಿಸಿ ಭಾಗವಹಿಸಿದರು. ಆದರೆ ಯಾಕೋ ಏನೋ ಕೆಲವರು ಚಳುವಳಿಯಿಂದ ದೂರ ಉಳಿದರೆ, ಮತ್ತೇ ಕೆಲವರು ಹಾಗೊಮ್ಮೆ -ಹೀಗೊಮ್ಮೆ ಚಳುವಳಿಯಲ್ಲಿ ಭಾಗವಹಿಸುತ್ತಿದ್ದಾರೆ.

ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ, ಹಾಗೂ ಪ್ರಾಧಿಕಾರಗಳು, ಆದೇಶದ ಮೇಲೆ ಆದೇಶ ಮಾಡುತ್ತಾ,ಅದರಂತೆ ರಾಜ್ಯ ಸರ್ಕಾರ ತಹಲ್ ವರೆವಿಗೂ ಕೃಷ್ಣರಾಜ ಸಾಗರದಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಲೇ ಇರುವುದು ನಿಜಕ್ಕೂ ಮಂಡ್ಯ ಜಿಲ್ಲೆಯ ಜನರ ದುರಂತವೇ ಸರಿ.

ಜಿಲ್ಲೆಯ ಕನ್ನಡ ಪರ -ಹಾಗೂ ಇತರೆ ಎಲ್ಲಾ ರೀತಿಯ ಸಂಘಟನೆ -ಸಂಘ -ಸಂಸ್ಥೆಗಳ ಸದಸ್ಯರು -ಪದಾಧಿಕಾರಿಗಳು, ಶಾಲಾ -ಕಾಲೇಜು ವಿದ್ಯಾರ್ಥಿಗಳು, ವಿವಿಧ ಗ್ರಾಮದ ಗ್ರಾಮಸ್ಥರು, ಹಾಲಿ -ಮಾಜಿ ಜನಪ್ರತಿನಿದಿನಗಳು, ರಾಜ್ಯದ ಪ್ರಮುಖ ಮಠಾಧೀಶರುಗಳು, ರಾಜ್ಯದ ಮಾಜಿ -ಶಾಸಕರು ಮಂತ್ರಿ ಹಾಗೂ ಮುಖ್ಯ ಮಂತ್ರಿಗಳು, ಜಿಲ್ಲೆಯ ಮಾಜಿ -ಹಾಲಿ ಶಾಸಕರು, ಉಸ್ತುವಾರಿ ಮಂತ್ರಿಗಳು ಅಷ್ಟೇ ಏಕೇ ರಾಜ್ಯದ ಮುಖ್ಯಮಂತ್ರಿಗಳು ಧರಣಿ ಸ್ಥಳಕ್ಕೆ ಬಂದು ಭರವಸೆ ನೀಡಿ ಹೋಗಿದ್ದಾರೆ. ಆದರೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ನಿಲ್ಲಿಸದ ಕಾರಣ. ಧರಣಿ ನಿರತರು ಚಳುವಳಿಯನ್ನು ನಿಲ್ಲಿಸದೇ ಧರಣಿಯ ಜೊತೆಗೆ “ಸರಣಿ ಉಪವಾಸ ಸತ್ಯಾಗ್ರಹ” ಪ್ರಾರಂಭ ಮಾಡಿ ಅದು ಕೂಡ 19ನೇ ದಿನ ಪೂರೈಸಿದೆ.ಕೆಲವೊಮ್ಮೆ ಸ್ವಲ್ಪ ಕಡಿಮೆ ಜನರಿದ್ದರೂ ಕ್ರಮೇಣ ಚಳುವಳಿಗಾರರು ಸೇರ್ಪಡೆಗೊಳ್ಳುತ್ತಾರೆ.

ಕೆಲ ಚಳುವಳಿಗಾರರಂತೂ ಪ್ರಾರಂಭದಿಂದ ಇದುವರೆಗೂ ಒಂದು ದಿನವೂ ತಪ್ಪದೇ (ಭಾನುವಾರ -ರಜಾದಿನ -ಹಬ್ಬ ಎಲ್ಲಾ ರೀತಿಯ ಸ್ವಂತ ಕಾರ್ಯಕ್ರಮ ಏನೇ ಆಗಲಿ ಚಳುವಳಿ (ಧರಣಿ ) ನಿಂತಿಲ್ಲ ) ತಮ್ಮ ಮನೆ -ಉದ್ಯೋಗ -ವ್ಯವಹಾರ -ಅರೋಗ್ಯವನ್ನು ಲೆಕ್ಕಿಸದೇ ಚಳುವಳಿಯಲ್ಲಿ ಭಾಗವಹಿಸುತ್ತಿರುವುದು ಗಮನಿಸಿದಾಗ ಬೇಸರವಾಗುತ್ತದೆ. ಏಕೆಂದರೆ ಇದು ಅವರ ವ್ಯೆಯಕ್ತಿಕ ಹಿತಾಸಕ್ತಿಗಾಗಿ ಮಾಡುತ್ತಿರುವ ಚಳುವಳಿಯಲ್ಲ. ಜಿಲ್ಲೆಯ ಜನರಿಗಾಗಿ -ಜಾನುವಾರುಗಳಿಗಾಗಿ -ಬೆಳೆಯ ರಕ್ಷಣೆಗಾಗಿ ಕಾವೇರಿ ನೀರು ಉಳಿಸುವ ಹೋರಾಟ. ಆದರೂ ಕಾವೇರಿ ನೀರು ಬಳಸುವ ಮಂದಿ ಈ ಹೋರಾಟಕ್ಕೆ ಕೈ ಜೋಡಿಸಿ -ಬೆಂಬಲ ನೀಡದಿರುವುದು ನಿಜಕ್ಕೂ ವಿಪರ್ಯಾಸ
ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯ ಸರ್ಕಾರ ವಿಶೇಷ ಅಧಿವೇಶನವಾಗಲಿ ಅಥವಾ ಬೆಳಗಾಳಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಾಗಲಿ ಚರ್ಚೆಯಾಗಲಿ ಎಂಬ ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿಯವರ ಬೇಡಿಕೆಗೆ ಜನಪ್ರತಿನಿದಿನಗಳು ಸ್ಪಂದಿಸದಿರವುದು ಯಾಕೆಂದು ತಿಳಿಯುತ್ತಿಲ್ಲ.

ಇಷ್ಟಾದರೂ ಧರಣಿ ನಿರತರು ಸ್ವಲ್ಪವೂ ವಿಚಲಿತರಾಗಿಲ್ಲ- ಭ್ರಮನಿರಸನರಾಗಿಲ್ಲ, ಏಕೆಂದರೆ ಅವರಿಗೆ ಇದೇ ರೀತಿಯ ಹಲವಾರು ಚಳುವಳಿಗಳನ್ನು ಮಾಡಿರುವ ಅನುಭವ ಹಾಗೂ ನಂಬಿಕೆ ಇದೆ. ಹಾಗೂ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ (ಒಂದು ಸಣ್ಣ ಉದಾಹರಣೆ ಎಂದರೆ, ಹೋರಾಟದ ಫಲವಾಗಿಯೇ ಮೈಶುಗರ್ ಕಾರ್ಖಾನೆ ಸರ್ಕಾರದ ಅಧೀನದಲ್ಲಿಯೇ ನಡೆಸುವಂತ್ತಾಗಿದ್ದು )ಯಾರು ಬೆಂಬಲ ನೀಡಲಿ ಅಥವಾ ಟೀಕೆ ಮಾಡಲಿ. ಉದ್ದೇಶ ಈಡೇರುವವರೆಗೆ ಧರಣಿ ನಡೆಸುತ್ತೇವೆ ಎಂಬ ಅಚಲ ನಂಬಿಕೆ ಅವರಲ್ಲಿದೆ

ನೀವೆಂನಂತೀರಾ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!