Tuesday, May 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಕೆರಗೋಡು ಹೋಬಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಆರ್. ರಾಮಚಂದ್ರ ಬಿರುಸಿನ ಪ್ರಚಾರ

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಿ.ಆರ್. ರಾಮಚಂದ್ರ ಅವರು ಕೆರಗೋಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.

ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

ವಿವಿಧ ಗ್ರಾಮಗಳಾದ ಹೊನಗಹಳ್ಳಿ ಮಠ,ಹೊಡಾಘಟ್ಟ,ಡಣಾಯಕನಪುರ,ಈಚಗೆರೆ,ಕೀಲಾರ,ಮುದ್ದಂಗೆರೆ, ನಲ್ಲಹಳ್ಳಿ, ಹೊನ್ನಾಯಕನಹಳ್ಳಿ, ಮಾರಗೌಡನಹಳ್ಳಿ,ದೊಡ್ಡ ಬಾಣಸವಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿ.ಆರ್. ರಾಮಚಂದ್ರು, ಪಂಚರತ್ನ ಯೋಜನೆಗಳಲ್ಲಿ ರೈತರಿಗಾಗಿ ಯೋಜನೆಗಳನ್ನು ರೂಪಿಸಲಾಗಿದೆ. ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.ಯಾವುದೇ ಕಾಯಿಲೆ ಬರಲಿ ಎಲ್ಲದಕ್ಕೂ ಸರ್ಕಾರ ಹಣ ನೀಡಲಿದೆ.ರೈತರಿಗೆ ಬಿತ್ತನೆ,ಗೊಬ್ಬರವನ್ನು ತೆಗೆದುಕೊಳ್ಳುವುದಕ್ಕೆ ಹತ್ತು ಸಾವಿರ ನೀಡಲಾಗುವುದು. ರೈತನ ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಎರಡು ಲಕ್ಷ ರೂ.ಪ್ರೋತ್ಸಾಹಧನ ನೀಡುತ್ತೇವೆ.ಅಷ್ಟೇ ಅಲ್ಲದೇ ರೈತರಿಗೆ ಕೃಷಿ ಖರ್ಚಿಗಾಗಿ ವರ್ಷಕ್ಕೆ ಎಕರೆಗೆ ಹತ್ತು ಸಾವಿರ ರೂ.ಗಳಂತೆ ಹತ್ತು ಎಕರೆಯವರೆಗೆ ಸಹಾಯಧನ ನೀಡುತ್ತೇವೆ.ತಾವೆಲ್ಲರೂ ಜೆಡಿಎಸ್ ಪಕ್ಷಕ್ಕೆ ಮತ ನೀಡಿದರೆ ಕುಮಾರ
ಸ್ವಾಮಿ ಮುಖ್ಯಮಂತ್ರಿ ಆಗಲು ಸಾಧ್ಯ. ಅದಕ್ಕಾಗಿ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ನಮ್ಮ ಪಕ್ಷದ ಕಾರ್ಯಕರ್ತರೇ ನಮ್ಮ ಸ್ಟಾರ್ ಪ್ರಚಾರಕರು,ಹಾಗಾಗಿ ಪ್ರಾದೇಶಿಕ ಪಕ್ಷವನ್ನು ನಮ್ಮ ಸ್ಟಾರ್ ಗಳು ಕೈ ಬಿಡುವುದಿಲ್ಲ. ನಾನು ಮತಯಾಚನೆಗೆ ಹೋದ ಕಡೆಯಲೆಲ್ಲ ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಅವರಿಗೆ ಈ ಬಾರಿ ಜೆಡಿಎಸ್ ಪಕ್ಷಕ್ಕೆ ನಮ್ಮ ಮತ ಎಂದು ಭರವಸೆ ನೀಡುತ್ತಿದ್ದಾರೆ.

ಜನರ ವಿಶ್ವಾಸ,ಜೊತೆಗೆ ಗ್ರಾಮಗಳಲ್ಲಿ ಅದ್ದೂರಿ ಸ್ವಾಗತ ನೀಡುತ್ತಿರುವುದು ನೋಡಿದರೆ ಈ ಬಾರಿ ಜನರು ನನ್ನನ್ನು ಕೈ ಹಿಡಿಯುತ್ತಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮನ್ ಮುಲ್ ಉಪಾಧ್ಯಕ್ಷ ಎಂ.ಎಸ್. ರಘುನಂದನ್,ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಮುಖಂಡರಾದ ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಎಲ್ ಕೃಷ್ಣ, ರಾಜು, ವಸಂತರಾಜು ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!