Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಐವರಿಂದ ನಾಮಪತ್ರ ವಾಪಸ್: ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳು

ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಒಟ್ಟು 27 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಿದ್ದು, 08 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿದ್ದವು, ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು (ಏ.8) 5 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದು, ಅಂತಿಮ ಕಣದಲ್ಲಿ 14 ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕುಮಾರ ತಿಳಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾದ ಚಿಕ್ಕನಂಜಾಚಾರಿ, ಕೆ. ಶಿವಾನಂದ, ಲೋಲ, ಯೋಗೇಶ್ ಮತ್ತು ಶಿವನಂಜಪ್ಪ ನಾಮಪತ್ರಗಳನ್ನು ಸೋಮವಾರ ಹಿಂಪಡೆದರು.

ಅಂತಿಮ ಕಣದಲ್ಲಿರುವ 14 ಅಭ್ಯರ್ಥಿಗಳಿಗೆ ಚಿನ್ಹೆಗಳ ಹಂಚಿಕೆ

ಅಂತಿಮ ಕಣದಲ್ಲಿವರ ಪೈಕಿ ಪಕ್ಷೇತರ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ. ಮಾನ್ಯತೆ ಪಡೆದ ಪಕ್ಷದ ಅಭ್ಯರ್ಥಿಗಳಾದ ಎಚ್.ಡಿ.ಕುಮಾರಸ್ವಾಮಿ(ಜೆಡಿಎಸ್), ವೆಂಕಟರಮಣೇಗೌಡ(ಸ್ಟಾರ್ ಚಂದ್ರು(ಕಾಂಗ್ರೆಸ್), ಎಸ್.ಶಿವಶಂಕರ್(ಬಿಎಸ್ಪಿ) ಮತ್ತು ನೋಂದಾಯಿತ ರಾಜಕೀಯ ಪಕ್ಷದ ಅಭ್ಯರ್ಥಿಗಳಾದ ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಕೆ.ಆರ್.ಚಂದ್ರಶೇಖರ್(ಬ್ಯಾಟರಿ ಟಾರ್ಚ್), ಕರುನಾಡ ಪಾರ್ಟಿ ಬಿ.ಪಿ.ಬೂದಯ್ಯ(ಬ್ಯಾಟ್ಸ್‌ಮನ್), ಪೂರ್ವಾಂಚಲ್ ಮಹಾ ಪಂಚಾಯತ್ ಪಾರ್ಟಿಯ ಎಚ್.ಡಿ.ರೇವಣ್ಣ ಅವರಿಗೆ ಡೀಸೆಲ್ ಪಂಪ್ ಚಿನ್ಹೆಯನ್ನು ನೀಡಲಾಗಿದೆ.

ಉತ್ತಮ ಪ್ರಜಾಕೀಯ ಪಾರ್ಟಿಯ ಎಸ್ ಲೋಕೇಶ್ (ಆಟೋ ರಿಕ್ಷಾ), ಪಕ್ಷೇತರ ಅಭ್ಯರ್ಥಿಗಳಾದ ಎಸ್.ಅರವಿಂದ್ (ಗ್ಯಾಸ್ ಸಿಲಿಂಡರ್), ಚನ್ನಮಾಯಿಗೌಡ (ಹೊಲಿಗೆ ಯಂತ್ರ), ಕೆ.ಚಂದನ್‌ಗೌಡ(ಟ್ರಕ್). ಎನ್‌.ಬಸವರಾಜು (ತೆಂಗಿನತೋಟ), ಸಿ.ಟಿ.ಬೀರೇಶ್(ದೂರದರ್ಶನ), ಡಿ.ರಾಮಯ್ಯ(ಕಬ್ಬು ರೈತ) ಮತ್ತು ಎನ್.ರಂಜಿತಾ ಅವರಿಗೆ ವಜ್ರದ ಚಿನ್ಹೆಯನ್ನು ನೀಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!