Friday, June 21, 2024

ಪ್ರಾಯೋಗಿಕ ಆವೃತ್ತಿ

ಹಸಿದರಿಗೆ ಅನ್ನಹಾಕುವುದೇ ದೊಡ್ಡ ಧರ್ಮ : ಶ್ರೀಶಿವಬಸವಸ್ವಾಮೀಜಿ

ಹಸಿದರಿಗೆ ಅನ್ನಹಾಕುವುದೇ ದೊಡ್ಡ ಧರ್ಮ ಎಂಬುದು ಎಲ್ಲರ ಅರಿವಾಗಿದೆ ಎಂದು ಬೇಬಿಬೆಟ್ಟದ ಶ್ರೀರಾಮಯೋಗೀಶ್ವರಮಠದ ಪೀಠಾಧ್ಯಕ್ಷ ಶ್ರೀಶಿವಬಸವಸ್ವಾಮೀಜಿ ಹೇಳಿದರು.

ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಸಿದ್ದಗಂಗಾಶ್ರೀಗಳ ಉದ್ಯಾನವನದಲ್ಲಿ ಕಾಯಕಯೋಗಿ ಫೌಂಡೇಶನ್, ಶ್ರೀಸಿದ್ದಗಂಗಾ ಸೇವಾ ಸಮಿತಿ, ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ, ಜಿಲ್ಲಾ ಶರಣರ ಸಂಘಟನೆ, ಸಿದ್ದಗಂಗಾ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 117ನೇ ಜನ್ಮದಿನೋತ್ಸವ ಪ್ರಯುಕ್ತ ಮಹಾದಾಸೋಹ, ರಕ್ತದಾನ, ಕೃತಿ ಬಿಡುಗಡೆ, ಅಭಿನಂದನೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೆಲೆದ ಮೇಲೆ ನೆಡೆದಾಡಿದ ದೇವರು ಎಂದೇ ಭಕ್ತರ ಮನದಲ್ಲಿ ಉಳಿದರುವ ಪರಮಪೂಜ್ಯ ತ್ರಿವಿಧ ದಾಸೋಹಿ ಡಾ.ಶಿವಕುಮಾರಮಹಾಸ್ವಾಮೀಜಿಯವರ ಜನ್ಮದಿನದಿಂದ ಇಷ್ಟೊಂದು ಸೇವಾಕಾರ್ಯ ಮಾಡುತ್ತಿರುವುದೇ ಪುಣ್ಯದ ಕಾರ್ಯ, ಹಸಿದವರಿಗೆ ಅನ್ನನೀಡುವುದೇ ಸರ್ವಧರ್ಮ ಪಾಲಿಸಿದಂತೆ ಎಂದು ನುಡಿದರು.

nudikarnataka.com

ಮಳವಳ್ಳಿ ಧನಗೂರುಮಠದ ಶ್ರೀ ಷಡಕ್ಷರಿದೇಶಿಕೇಂದ್ರ ಶಿವಾಚಾರ್ಯಸ್ವಾಮೀಜಿ ಮಾತನಾಡಿ, ಸಿದ್ದಗಂಗಾಶೀಗಳು ಕಾಯಕ, ದಾಸೋಹ ಮತ್ತು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು, ನಾಡಿನಾದ್ಯಂತ ಸುಮಾರು 10ಸಾವಿರಕ್ಕೂ ಹೆಚ್ಚು ಬಡಮಕ್ಕಳಿಗೆ ಅನ್ನ, ಆಶ್ರಯ ಮತ್ತು ಶಿಕ್ಷಣ ನೀಡ ನೀಡಿದ ಕೀರ್ತಿ ಸಲ್ಲಿಸುತ್ತದೆ ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ರೈತರಿಗೆ ಉಪಯುಕ್ತ ಸಸಿ ಹಾಗೂ ಕಲ್ಪವೃಕ್ಷವನ್ನು ವಿತರಣೆ ಮಾಡಲಾಯಿತು, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ನಡೆಯಿತು. ಬಳಿಕ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ಯಶಸ್ಸಿಯಾಗಿ ನಡೆಯಿತು.ಮಳವಳ್ಳಿಯ ಶ್ರೀಸಿದ್ದಗಂಗಾ ಬಳಗದ ಅಧ್ಯಕ್ಷ ಮಿಲಿಟರಿ ಸುರೇಶ್ ಹಾಗೂ ಪರಿಸರ ಪ್ರೇಮಿ ಕೃಷ್ಣಪ್ಪ ಅವರಿಗೆ ಸಿದ್ದಗಂಗಾಶ್ರೀ ಭಕ್ತಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಶ್ರೀಸಿದ್ದಗಂಗಾ ಸೇವಾ ಸಮಿತಿ ಅಧ್ಯಕ್ಷ ಎಂ.ಆರ್.ಮಂಜುನಾಥ್, ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ ಅಧ್ಯಕ್ಷ ಬೆಟ್ಟಹಳ್ಳಿ ಮಂಜುನಾಥ್, ವಿಶ್ವವಚನ ಫೌಂಡೇಶನ್ ಅಧ್ಯಕ್ಷ ಡಾ.ವಚನಕುಮಾರಸ್ವಾಮಿ, ಜಿಲ್ಲಾ ಶರಣರ ಸಂಘಟನೆಯ ಮಿಲಿಟರಿ ಸುರೇಶ್, ಕಾಡುಕೊತ್ತನಹಳ್ಳಿ ನಂದೀಶ್, ವಿಶ್ವನಾಥ್, ಮಹತೇಶಪ್ಪ, ಶಿವಲಿಂಗಪ್ಪ, ಮಹೇಶ್, ಎಲ್.ಸಂದೇಶ್, ಇಂಜಿನಿಯರ್ ಚಂದ್ರಹಾಸ್ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!