Wednesday, September 18, 2024

ಪ್ರಾಯೋಗಿಕ ಆವೃತ್ತಿ

ಪರಿಸರ ಸಂರಕ್ಷಣೆಗಾಗಿ 25 ದಿನ ಮೀಸಲಿಟ್ಟ ವಿಶ್ವಸಂಸ್ಥೆ

ಪ್ರಾಕೃತಿಕ ಸಂಪತ್ತು ಉಳಿಸಿ ಬೆಳೆಸಿದರೆ ಮಾತ್ರ ಜೀವಸಂಕುಲಗಳು ಬದುಕುವುದು ಮತ್ತು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಲಭಿಸುವುದು. ಹಾಗಾಗಿ ವಿಶ್ವಸಂಸ್ಥೆಯು ಎಲ್ಲಾ ರಾಷ್ಟ್ರಗಳಲ್ಲೂ ವಾರ್ಷಿಕ 25 ದಿನಗಳನ್ನು ಪರಿಸರ ಸಂರಕ್ಷಣೆ ಮತ್ತು ಸಸ್ಯ ಸಂಪತ್ತು ವೃದ್ಧಿಗಾಗಿ ಘೋಷಣೆ ಮಾಡಿದೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ. ಹನುಮಂತು ಹೇಳಿದರು.

ನಗರದಲ್ಲಿರುವ ಮರೀಗೌಡ ಬಡಾವಣೆಯ ಗಣೇಶ ದೇವಸ್ಥಾನದ ಆವರಣದಲ್ಲಿ ಕೃಷಿಕ ಲಯನ್ಸ್ ಸಂಸ್ಥೆ, ಮಹಿಳಾ ಸರ್ಕಾರಿ ಕಾಲೇಜು ಎನ್ ಎಸ್ ಎಸ್ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಆಯೋಜಿಸಿದ್ದ ವಿಶ್ವ ಪರಿಸರ ದಿನದ ಪ್ರಯುಕ್ತ ಔಷಧಿ ವನ ನಿರ್ಮಾಣಕ್ಕೆ ಚಾಲನೆ ಹಾಗೂ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶ್ವ ಪರಿಸರ ದಿನ, ವಿಶ್ವ ಭೂಮಿ ದಿನ, ವಿಶ್ವ ಜಲ, ಸಾಗರ, ಪ್ರಾಣಿ-ಪಕ್ಷಿ, ಜೀವವೈವಿಧ್ಯಮಯ ಸಂರಕ್ಷಣೆ ದಿನ ಹೀಗೆ ಹತ್ತು ಹಲವು ದಿನಾಚರಣೆಗಳನ್ನು ಮೀಸಲಿರಿಸಿದೆ. ಇಂತಹ ದಿನಗಳಲ್ಲಿ ಸರ್ಕಾರ, ಸಂಘ-ಸಂಸ್ಥೆಗಳು, ವಿದ್ಯಾರ್ಥಿ ಸಮೂಹ ಪಾಲ್ಗೊಂಡು ಜಾಗೃತಿಗೊಳ್ಳುವುದು ಮತ್ತು ಅರಿವು ಮೂಡಿಸುವುದಾಗಿದೆ ಎಂದು ನುಡಿದರು.

ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಇಂದಿನ ಕಲುಷಿತ ವಾತಾವರಣದ ಶುದ್ಧಿಗಾಗಿ ಔಷಧಿ ಸಸ್ಯಗಳು ಅತ್ಯವಶ್ಯ.ಭಾರತೀಯ ಆಯುರ್ವೇದ ಔಷಧವು ಪ್ರಪಂಚದಾದ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಸ್ಯ ಸಂಪತ್ತು ಹೆಚ್ಚಾದಷ್ಟು ರೋಗ ಮತ್ತು ತಾಪಮಾನ ನಿಯಂತ್ರಣದಲ್ಲಿರುತ್ತದೆ ಎಂದು ತಿಳಿಸಿದರು.

ಕೋವಿಡ್-19ರ ದಿನಗಳಲ್ಲಿ ಬಹುಪಾಲು ವಿದೇಶಗಳು ಸಂಪೂರ್ಣವಾಗಿ ತತ್ತರಿಸಿದವು. ಅಪಾರ ಪ್ರಾಣಹಾನಿಗೂ ಒಳಗಾಗಿವೆ, ಕಾರಣ ಅಲ್ಲಿನ ಔಷಧ ಸಸ್ಯ ಸಂಪತ್ತು ಇಲ್ಲದಿರುವುದು ಪ್ರಮುಖ ಕಾರಣವಾಗಿದೆ, ಭಾರತದೇಶದಲ್ಲಿ ಮನೆ ಮನೆಯಲ್ಲೂ ತುಳಸಿ, ಅಮೃತಬಳ್ಳಿ, ಅರಳಿಮರ, ಬೇವಿನ ಮರಗಳಿದ್ದರಿಂದ ಪ್ರಾಣಹಾನಿ ಕಡಿಮೆಯಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ದಶರಥ, ಡಾ. ಕೆಂಪಮ್ಮ, ಪ್ರೊ.ನಾಗೇಂದ್ರ, ಶಿವರಾಮ್, ನಗರಸಭಾ ಸದಸ್ಯ ಕುಮಾರ್, ಕಾರಾಗೃಹ ಅಧೀಕ್ಷಕ ಲೋಕೇಶ್, ಕೃಷಿಕ ಲಯನ್ಸ್ ಸಂಸ್ಥೆ ಉಪಾಧ್ಯಕ್ಷ ಮೋಹನ್‌ಕುಮಾರ್, ದೇವಾಲಯದ ಆಡಳಿತಮಂಡಳಿಯ ಅಶೋಕ್, ಶಿವರಾಮು, ರೆಡ್‌ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ, ಬೃಂದಾ, ವೈದ್ಯಾಧಿಕಾರಿ ಡಾ.ಶಶಿಕಲಾ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!