Thursday, September 19, 2024

ಪ್ರಾಯೋಗಿಕ ಆವೃತ್ತಿ

ಉಜ್ಬೇಕಿಸ್ತಾನ್‌ ದಲ್ಲಿ 29 ಮಕ್ಕಳನ್ನು ಬಲಿ ಪಡೆದ ಕೆಮ್ಮಿನ ಸಿರಪ್ ಗಳು : ಔಷಧಿಗಳನ್ನು ಬಳಸದಂತೆ WHO ಸೂಚನೆ

ಉಜ್ಬೇಕಿಸ್ತಾನ್‌ನಲ್ಲಿ 29 ಮಕ್ಕಳ ಸಾವಿನ ನಂತರ ಮಕ್ಕಳಿಗೆ ಕೊಡಲಾಗುತ್ತಿದ್ದ ಭಾರತದಲ್ಲಿ ತಯಾರಾಗುತ್ತಿದ್ದ ಎರಡು ಕೆಮ್ಮಿನ ಸಿರಪ್‌ ಗಳನ್ನು ಬಳಸದಂತೆ ವಿಶ್ವ ಆರೋಗ್ಯ ಸಂಸ್ಥೆಯು (WHO)ಸೂಚನೆ ನೀಡಿದೆ.

ಭಾರತದಲ್ಲಿ ಮರಿಯನ್‌ ಬಯೋಟೆಕ್‌ ಮತ್ತು ಫಾರ್ಮಾಸ್ಯುಟಿಕಲ್‌ ಕಂಪನಿಯು ತಯಾರಿಸುತ್ತಿದ್ದ ಎರಡು ಕೆಮ್ಮಿನ ಸಿರಪ್‌ ನ ಸೇವನೆಯಿಂದ ಈ ಮಕ್ಕಳು ಅಸುನೀಗಿದ್ದಾರೆ ಎಂದು ಉಜ್ಬೇಕಿಸ್ತಾನ್‌ ಆರೋಗ್ಯ ಸಂಸ್ಥೆಯು ಹೇಳಿಕೆ ನೀಡಿತ್ತು.

AMBRONOL ಸಿರಪ್‌ ಮತ್ತು DOK-1 ಮ್ಯಾಕ್ಸ್‌ ಸಿರಪ್‌ ಹೆಸರಿನ ಇವು ಅತಿಯಾಗಿ ಡೈಥಿಲೀನ್‌ ಗ್ಲೈಕೋಲ್‌ ಹೊಂದಿರುವುದರಿಂದ ದೇಹಕ್ಕೆ ಸ್ವೀಕಾರಾರ್ಹವಲ್ಲ ಎಂದು WHO ವರದಿ ನೀಡಿದೆ. ಈ ವರದಿಯನ್ನು ಪರಿಗಣನೆಗೆ ತೆಗ್ದುಕೊ‍ಳ್ಳದ ಭಾರತದ ಕಂಪನಿಯು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

WHO ನಿಷೇಧ ಹೇರಿದರೂ ಕೂಡ ಈವರೆಗೂ ತಯಾರಕರು ಈ ಉತ್ಪನ್ನಗಳ ಸುರಕ್ಷತೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೇ ಇರುವುದು, ಮತ್ತು ಅನೌಪಚಾರಿಕವಾಗಿ ಮಾರುಕಟ್ಟೆಗೆ ಪ್ರವೇಶ ನೀಡಿ ಮಾರಾಟ ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ನಿಷೇಧ ಹೇರಲಾದ ಆ ಶಿರಪ್‌ ಗಳು 21% ಹೆಚ್ಚಿನ ಅಧಿಕ ಪ್ರಮಾಣದ DEG ಅನ್ನು ಒಳಗೊಂಡಿದೆ ಎಂದು ಈ ಹಿಂದೆ ವೈರ್‌ ಮಾಧ್ಯಮ ವರದಿ ಮಾಡಿತ್ತು. ಆ ಸಿರಪ್‌ ಗಳಿಂದ ನಮ್ಮ ದೇಶದಲ್ಲಿಯೂ ಸುಮಾರು 70 ಮಕ್ಕಳ ಸಾವಾಗಿದೆ ಎಂದು ಗ್ಯಾಂಬಿಯಾ ಸಂಸತ್ತು ವರದಿ ನೀಡಿತ್ತು. ಆದರೆ ಭಾರತ ಸರ್ಕಾರ ಮಾತ್ರ ಈವರೆಗೂ ಆ ವರದಿಯ ಬಗ್ಗೆ ಚಕಾರವೆತ್ತಿಲ್ಲ.

ಈ ಎಲ್ಲಾ ಬೆಳವಣಿಗೆಯ ಬಗ್ಗೆ ನೋಯ್ಡಾದ ಡ್ರಗ್‌ ಇನ್ಸ್ಪೆಕ್ಟರ್‌ ವೈಭವ್‌ ಬಬ್ಬರ್‌ ಪ್ರತಿಕ್ರಿಯೆ ನೀಡಿದ್ದು, ನಮಗೆ ಸಾಕಷ್ಟು ದಾಖಲೆಗಳನ್ನು ಪರಿಗಣಿಸಿ ರಾಜ್ಯ ಪರವಾನಗಿ ಪ್ರಾಧಿಕಾರದಿಂದ ಶೊಕಾಸ್‌ ನೋಟಿಸ್‌ ನೀಡಲಾಗಿದೆ. ಕಂಪನಿಯ ಎಲ್ಲಾ ಔಷಧಗಳ ತಯಾರಿಕೆಯನ್ನು ನಿಲ್ಲಿಸಲಾಗಿದೆ ಎಂದು ANI ಗೆ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!