Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಲೇಖಕಿ ಎಚ್.ಆರ್. ಕನ್ನಿಕ ಕೃತಿಗಳ ಲೋಕಾರ್ಪಣೆ: ಮಹಿಳಾ ಸಾಧಕರಿಗೆ ಸನ್ಮಾನ

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮಂಡ್ಯ ಹಾಗೂ ಕನ್ನಿಕಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಮಂಡ್ಯ ಇವರ ವತಿಯಿಂದ ಮಾ.8ರಂದು ಬೆಳಿಗ್ಗೆ 10.30 ಗಂಟೆಗೆ ಮಂಡ್ಯನಗರದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಿಕ ಹೆಚ್.ಆರ್. ರವರ ನಾಲ್ಕು ಕೃತಿಗಳ ಲೋಕಾರ್ಪಣೆ ಮತ್ತು ಮಹಿಳಾ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ.

ಸಮಾರಂಭವದ ಉದ್ಘಾಟನೆಯನ್ನು ಮಹಿಳಾ ಚಿಂತಕಿ ಕೆ.ಎಸ್. ಮಂಜುಳ ನೆರವೇರಿಸುವರು. ಅಧ್ಯಕ್ಷತೆ ಸಾಹಿತಿ ಪ್ರೊ.ವಿ.ಎಸ್. ಶ್ರೀದೇವಿ ವಹಿಸುವರು. ಕನ್ನಿಕ ಅವರ  ‘ಕನ್ನಡದ ಮರೆಯಲಾಗದ ಮಹಿಳಾ ಮಾಣಿಕ್ಯಗಳು’, ‘ಚಿಣ್ಣರ ಚಿಲಿಪಿಲಿ’ ಕೃತಿಗಳನ್ನು ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಕೆಂಪಮ್ಮ ಲೋಕಾರ್ಪಣೆ ಮಾಡಿ, ಅವಲೋಕನ ನಡೆಸುವರು.

ಶ್ರೀಕಾಲಭೈರವೇಶ್ವರ ಕೃಪೆ, ಮರೆಯಲಾಗದ ಮಹಾನುಭಾವರು ಕೃತಿಗಳನ್ನು ಸಹಾಯಕ ಪ್ರಾಧ್ಯಾಪಕರಾದ ಡಾ. ದೇವಿಕಾ ಎನ್.ಎಸ್‌ ಲೋಕಾರ್ಪಣೆಗೊಳಿಸಿ, ಅವಲೋಕನ ನಡೆಸುವರು.

ಮುಖ್ಯಅತಿಥಿಗಳಾ ಮಂಡ್ಯ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮಹಿಳಾ ಸಂಘಟಕರಾದ ನಾಗರೇವಕ್ಕ,  ಕ.ಸಾ.ಪ ಮಂಡ್ಯ ನಗರ ಘಟಕದ ಅಧ್ಯಕ್ಷೆ ಸಿ.ಜೆ. ಸುಜಾತಕೃಷ್ಣ ಭಾಗವಹಿಸುವರು.

ಇದೇ ಸಂದರ್ಭದಲ್ಲಿ ಮಹಿಳಾ ಸಾಧಕರಾದ ಶಿಕ್ಷಕಿ ಡಾ. ಕೆ. ಶಭಾನಾ, ಅನುಪಮ ಬಿ.ಎಸ್, ಅರುಣಕುಮಾರಿ ಕೆ.ಪಿ, ಭವಾನಿ ಲೋಕೇಶ್, ಡಾ. ಅನಿತಾ ಎಂ.ಎಸ್, ರಾಧಿಕಾ ರಾವ್, ಸುನೀತಾ ನಂದಕುಮಾ‌ರ್, ಉಷಾರಾಣಿ, ಉಮಾವತಿ ಎನ್.ಸಿ., ಯಶೋಧಾ ಬಿ.ಡಿ., ಅನಿತಾ ಪಿ., ಆಶಾ ಹನಿಯಂಬಾಡಿ ಹಾಗೂ ಸೌಮ್ಯಶ್ರೀ ಕೆ.ಪಿ ಅವರನ್ನು ಸನ್ಮಾನಿಸಲಾಗುವುದು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯನ್ನು ಮಾಡಲಾಗುವುದು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!