Friday, September 20, 2024

ಪ್ರಾಯೋಗಿಕ ಆವೃತ್ತಿ

ವಿಕಲಚೇತನರಿಗೆ 5 ಸಾವಿರ ಮಾಸಾಶನ ಕೊಡಿ

ಅಗತ್ಯ ಬೆಲೆಗಳು ಹೆಚ್ಚಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ವಿಕಲ ಚೇತನರು ಜೀವನ ಮಾಡುವುದೇ ಕಷ್ಟಕರವಾಗಿದ್ದು, ಜೀವನ ನಡೆಸಲು ಬೇರೆಯವರನ್ನು ಆವಲಂಬಿಸಬೇಕಾಗಿರುವುದರಿಂದ ವಿಕಲಚೇತನರಿಗೆ 5 ಸಾವಿರ ರೂ.ಮಾಸಾಶನ ನೀಡಬೇಕೆಂದು ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ಎನ್ ನಾಗರಾಜು ಆಗ್ರಹಿಸಿದರು.

ಮಳವಳ್ಳಿ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವತಿಯಿಂದ ನಡೆದ ತಾಲ್ಲೂಕು ವಿಕಲಚೇತನರ 3ನೇ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿಕಲ ಚೇತನರೂ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಘಟಿತರಾಗಬೇಕು. ಸಂಘ ದೊಡ್ಡ ಶಕ್ತಿಯಾಗಿ ಬೆಳೆದರೇ ಸರ್ಕಾರದಿಂದ ಸೌಲಭ್ಯಗಳನ್ನು ಸುಲಭವಾಗಿ ಪಡೆಯಬಹುದಾಗಿದೆ ಎಂದರು. ಕೊರೊನಾ ಸಂದರ್ಭದಲ್ಲಿ ವಿವಿಧ ಸಂಘಗಳಿಗೆ ನಿರುದ್ಯೋಗ ವೇತನವನ್ನು ಬಿಡುಗಡೆ ಮಾಡಲಾಯಿತು.

ಆದರೇ ವಿಕಲಚೇತನರಿಗೆ ವೇತನ ನೀಡಬೇಕೆಂದು ಹೋರಾಟ ನಡೆಸಿದರೂ ಕೂಡ ಪ್ರಯೋಜನವಾಗಲಿಲ್ಲ. ಅದ್ದರಿಂದ ವಿಕಲಚೇತನರು ದೊಡ್ಡ ಮಟ್ಟದಲ್ಲಿ ಸಂಘಟಿತರಾಗಬೇಕೆಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾದು, ದೊಡ್ಡ ಮರೀಗೌಡ, ಯಶಸ್ವಿ, ಮಹದೇವಪ್ಪ, ಚಿಕ್ಕಮರಿಗೌಡ, ಸಿ.ಕುಮಾರಿ, ಶಿವಮಲ್ಲಯ್ಯ ನಂದೀಶ್ ಶಿವನಂಜೇಗೌಡ, ರಮೇಶ್ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!