Thursday, September 19, 2024

ಪ್ರಾಯೋಗಿಕ ಆವೃತ್ತಿ

ಯುವ ಜನರು ಜನಪದ ಸಾಹಿತ್ಯ ಅರ್ಥೈಸಿಕೊಳ್ಳಲಿ

ವಿದ್ಯಾರ್ಥಿ ಯುವ ಜನರು ಜನಪದ ಸಾಹಿತ್ಯವನ್ನ ಅರ್ಥೈಸಿಕೊಂಡು ಮುಂದಿನ ತಲೆಮಾರಿಗೆ ಕೊಂಡೊಯ್ಯ ಬೇಕೆಂದು ಸಂತೆಕಸಲಗೆರೆ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಂದ್ರ ತಿಳಿಸಿದರು.

ಮಂಡ್ಯ ತಾಲ್ಲೂಕಿನ ಸಂತೆಕಸಲೆಗೆರೆಯಲ್ಲಿ ಜನಪದ ಮತ್ತು ಬೀದಿ ನಾಟಕ ಕಲಾ ತಂಡಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ ಜನಪದ ಸಂಗೀತೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿಶ್ವದಲ್ಲಿ ಜನಪದ ಕಲಾಪ್ರಕಾರಗಳು ಹಾಗೂ ಇನ್ನಿತರ ವಿವಿಧ ಸಾಹಿತ್ಯವನ್ನ ಅರ್ಥೈಸಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳನ್ನ ನೆರವೇರಿಸುತ್ತಾ ಬಂದಿರುವುದನ್ನು ನಾವು ಗಮನಿಸಿದ್ದೇವೆ. ಜನಪದ ಕ್ಷೇತ್ರಕ್ಕೆ ಅಂತಹ ಮಹತ್ವವಿದೆ ಎಂದರು.

ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟದ ಮೈಸೂರು ವಿಭಾಗದ ಸಂಚಾಲಕ ಶಾಂತರಾಜು ಮಾತನಾಡಿ, ಜನಪದ ಸಾಹಿತ್ಯ ನಿರಿಕ್ಷರಿಗಳಿಂದ ಬಂದ ಬಳುವಳಿಯಾಗಿದ್ದು, ಬಾಯಿಂದ ಬಾಯಿಗೆ ಜೀವನೋಪಯಕ್ಕಾಗಿ ಕಲೆಗಳನ್ನು ಕರಗತ ಮಾಡಿಕೊಂಡಿದ್ದರು. ಪ್ರಸ್ತುತ ಮನರಂಜನೆಗಾಗಿ ಬೇರೆ ಬೇರೆ ಸ್ತರಗಳಲ್ಲಿ ಜನಪದವನ್ನ, ಜನಪದ ಕಲಾ ಪ್ರಕಾರಗಳನ್ನ ಬಳಸಿಕೊಂಡು ಹಬ್ಬ-ಹರಿದಿನ ಜಾತ್ರೆ ಉತ್ಸವಗಳಲ್ಲಿ ಮೆರಗನ್ನು ಹೆಚ್ಚಿಸುವ ಕಾರ್ಯ ನಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಗ್ರಾ. ಪಂ. ಅಧ್ಯಕ್ಷೆ ಸೌಮ್ಯ ನಟರಾಜು ಅಧ್ಯಕ್ಷತೆ ವಹಿಸಿದ್ದರು. ಪರಿಸರ ರೂರಲ್ ಡವಲಪ್‌ಮೆಂಟ್ ಮಂಗಲ ಎಂ.ಯೋಗೇಶ್, ಜನಪದ ಮತ್ತು ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ಅಧ್ಯಕ್ಷ ಬಸವರಾಜ್ ಸಂತೆಕಸಲಗೆರೆ, ಪ್ರಧಾನ ಕಾರ್ಯದರ್ಶಿ ವೈರಮುಡಿ ಹೆಚ್.ಪಿ., ಕಲಾವಿದರಾದ ಶೇಖರ್ ಹನಿಯಂಬಾಡಿ, ನಾಗರಾಜ್ ತಡಗವಾಡಿ, ಮಂಜುಳಾ ಹಾಲದಹಳ್ಳಿ, ಉಮಪತಿ ಮಂಗಲ, ರಾಮಕೃಷ್ಣ ಹನಿಯಂಬಾಡಿ, ಹೊನ್ನೇಶ್, ಕೃಷ್ಣ, ಶ್ವೇತಾ ಹಾಗೂ ರಾಜಣ್ಣ ಸೇರಿದಂತೆ ಮತ್ತಿತರರಿದ್ದರು.

ಇದೇ ಸಂದರ್ಭದಲ್ಲಿ ಕಲಾವಿದರಿಂದ ಜನಪದ ಸಂಗೀತೋತ್ಸವ, ಬೀದಿ ನಾಟಕ ಪ್ರದರ್ಶನ, ಸಾಮಾಜಿಕ ಪಿಡುಗು ನಿರ್ಮೂಲನೆ ಕುರಿತಾಗಿ ಜಾಗೃತಿ ಕಾರ್ಯಕ್ರಮ ಜರುಗಿತು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!