Saturday, November 21, 2026

ಪ್ರಾಯೋಗಿಕ ಆವೃತ್ತಿ

ಗೌತಮ್ ಅದಾನಿ: ರಾಜಸ್ಥಾನದಲ್ಲಿ 60,000 ಕೋಟಿ ಹೂಡಿಕೆ

ಜೈಪುರ : ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಶುಕ್ರವಾರ ರಾಜಸ್ಥಾನದ ಎರಡು ಜಿಲ್ಲೆಗಳಲ್ಲಿ ತಲಾ ವೈದ್ಯಕೀಯ ಕಾಲೇಜು, ಆಸ್ಪತ್ರೆ ಹಾಗು ಉದಯಪುರದಲ್ಲಿ 60,000 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಕ್ರಿಕೆಟ್ ಸ್ಟೇಡಿಯಂ ತೆರೆಯುವ ಮಹತ್ವದ ಘೋಷಣೆ ಮಾಡಿದ್ದಾರೆ.

ಇಲ್ಲಿ ನಡೆದ ಇನ್ವೆಸ್ಟ್ ರಾಜಸ್ಥಾನ ಶೃಂಗಸಭೆಯಲ್ಲಿ ಭಾಗವಹಿಸಿದ ಗೌತಮ್ ಅದಾನಿ, “ಇಂದು ಶೃಂಗಸಭೆಯಲ್ಲಿ ಭಾಗವಹಿಸಿದ್ದು ನನಗೆ ತುಂಬಾ ಸಂತೋಷವಾಗಿದೆ, ನಾವು 60,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಘೋಷಿಸಿದ್ದೇವೆ ಎಂದಿದ್ದಾರೆ.

ಇದೇವೇಳೆ ಮುಖ್ಯಮಂತ್ರಿ  ಅವರೊಂದಿಗೆ ಮಾತನಾಡುವಾಗ, ನಾವು ಎರಡು ಪ್ರಸ್ತಾಪಗಳಿಗೆ ಅನುಮೋದನೆ ಪಡೆದಿದ್ದೇವೆ. ರಾಜಸ್ಥಾನದಲ್ಲಿ ಎರಡು ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುವುದು ಮತ್ತು ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳಲ್ಲಿ ಸಿವಿಲ್ ಆಸ್ಪತ್ರೆಗಳ ಜೊತೆಗೆ ವೈದ್ಯಕೀಯ ಕಾಲೇಜುಗಳನ್ನು ತೆರೆಯುವ ಮೂಲಕ ಕೊಡುಗೆ ನೀಡಬಹುದು ಎಂದು ಒಪ್ಪಿಗೆ ನೀಡಲಾಗಿದೆ.

ಸಿಎಂ ಗೆಹ್ಲೋಟ್ ಮತ್ತು ವಿಧಾನಸಭಾ ಸ್ಪೀಕರ್ ಸಿ.ಪಿ.ಜೋಶಿ ಅವರೊಂದಿಗೆ ಕಟ್ಟಡ ನಿರ್ಮಾಣದ ಬಗ್ಗೆ ಚರ್ಚಿಸಿದ್ದೇವೆ. ಉದಯಪುರದಲ್ಲಿ ಕ್ರಿಕೆಟ್ ಸ್ಟೇಡಿಯಂ ಅದಾನಿ ಫೌಂಡೇಶನ್ ಮತ್ತು ಅದಾನಿ ಗ್ರೂಪ್ ಪರವಾಗಿ ನಾವು ಕ್ರೀಡಾಂಗಣವನ್ನು ನಿರ್ಮಿಸಲು ಸಂಪೂರ್ಣ ಸಹಕಾರವನ್ನು ನೀಡುತ್ತೇವೆ ಎಂದಿದ್ದಾರೆ.

ಸಿಎಂ ಗೆಹ್ಲೋಟ್ ಮತ್ತು ಗೌತಮ್ ಅದಾನಿ ಇಬ್ಬರೂ ಒಂದೇ ಇ-ವಾಹನದಲ್ಲಿ ಮಾಧ್ಯಮ ಸಂವಾದಕ್ಕೆ ಆಗಮಿಸಿದರು. ಗೆಹ್ಲೋಟ್ ಇ-ರಿಕ್ಷಾ ಚಾಲಕನ ಪಕ್ಕದಲ್ಲಿ ಕುಳಿತರೆ, ಅದಾನಿ, ಟೊರೆಂಟ್ ಗ್ರೂಪ್ ಅಧ್ಯಕ್ಷ ಸುಧೀರ್ ಮೆಹ್ತಾ ಮತ್ತು ಸ್ಪೀಕರ್ ಸಿ.ಪಿ. ಜೋಶಿ ಹಿಂದಿನ ಸೀಟಿನಲ್ಲಿ ಬಂದು ಕುಳಿತರು.

ಅದಾನಿ ಮತ್ತು ಮೆಹ್ತಾ ನಂತರ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ವೈಭವ್ ಗೆಹ್ಲೋಟ್ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ