Friday, September 20, 2024

ಪ್ರಾಯೋಗಿಕ ಆವೃತ್ತಿ

ಮುಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್


  • ಸಿಜೆಐ ಉದಯ್ ಉಮೇಶ್ ಲಲಿತ್ ಅವರಿಂದ ಉತ್ತರಾಧಿಕಾರಿ ಘೋಷಣೆ

  • ನವೆಂಬರ್ 9ಕ್ಕೆ, 50 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ

ಭಾರತದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದಾರೆ.

ಉನ್ನತ ನ್ಯಾಯಾಲಯದ ನ್ಯಾಯಾಧೀಶರು ನಡೆಸಿದ ಫೂರ್ಣ ನ್ಯಾಯಾಲಯದ ಸಭೆಯಲ್ಲಿ ಈ ಶಿಫಾರಸು ಮಾಡಲಾಗಿದೆ. ನವೆಂಬರ್ 9 ರಂದು ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾಯಮೂರ್ತಿ ಚಂದ್ರಚೂಡ್ ಅವರಿಗೆ ಸಿಜೆಐ ತಮ್ಮ ಶಿಫಾರಸು ಪತ್ರದ ಪ್ರತಿಯನ್ನು ಹಸ್ತಾಂತರಿಸಿದರು.

ಮೇ 13, 2016 ರಂದು ಸುಪ್ರೀಂ ನ್ಯಾಯಾಧೀಶರಾಗಿ ಬಡ್ತಿ ಪಡೆದ ನ್ಯಾಯಮೂರ್ತಿ ಚಂದ್ರಚೂಡ್ ಅವರು ಫೆಬ್ರವರಿ 22, 1978ರಿಂದ ಜುಲೈ 11, 1985 ರವರೆಗೆ ನ್ಯಾಯಾಂಗದ ಮುಖ್ಯಸ್ಥರಾಗಿದ್ದ ಸಿಜೆಐ ವೈ ವಿ ಚಂದ್ರಚೂಡ್ ಅವರ ಪುತ್ರರಾಗಿದ್ಧಾರೆ.

ಸಿಜೆಐ ಲಲಿತ್ ಅವರು 74 ದಿನಗಳ ಅಲ್ಪಾವಧಿಯ ನಂತರ ನವೆಂಬರ್ 8 ರಂದು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಒಂದು ದಿನದ ನಂತರ ಚಂದ್ರಚೂಡ್ ಅವರು ಮುಂದಿನ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಚಂದ್ರಚೂಡ್ ಅವರು ಎರಡು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುತ್ತಾರೆ. ನವೆಂಬರ್ 10, 2024ಕ್ಕೆ ಅವರ ಅಧಿಕಾರವಧಿ ಮುಗಿಯಲಿದೆ. ಅಂದರೆ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರು 65ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ.

ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ನಿಯಂತ್ರಿಸುವ ಮೆಮೊರಾಂಡಮ್ ಆಫ್ ಪ್ರೊಸೀಜರ್ ಪ್ರಕಾರ, ನಿರ್ಗಮಿತ ಸಿಜೆಐ ಅವರು ಕಾನೂನು ಸಚಿವಾಲಯದಿಂದ ಸಂವಹನವನ್ನು ಪಡೆದ ನಂತರ ಉತ್ತರಾಧಿಕಾರಿಯನ್ನು ಹೆಸರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ.

ನ್ಯಾಯಮೂರ್ತಿ ಲಲಿತ್ ಪರಿಚಯ 

ನ್ಯಾಯಮೂರ್ತಿ ಲಲಿತ್ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗುವ ಮೊದಲು ಹೆಸರಾಂತ ಹಿರಿಯ ವಕೀಲರಾಗಿದ್ದರು. ಅವರು ಆಗಸ್ಟ್ 13, 2014 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು. ಲಲಿತ್ ಅವರು ಬಾರ್ ಕೌನ್ಸಿಲ್ ನಿಂದ ನೇರವಾಗಿ ಸುಪ್ರೀಂ ಕೋರ್ಟ್ ಗೆ ಪೀಠಕ್ಕೆ ಏರಿದ ಎರಡನೇ ಸಿಜೆಐ ಆಗಲಿದ್ದಾರೆ.  ಜನವರಿ 1971 ರಲ್ಲಿ 13 ನೇ ಸಿಜೆಐ ಆಗಿದ್ದ ನ್ಯಾಯಮೂರ್ತಿ ಎಸ್‌.ಎಂ.ಸಿಕ್ರಿ ಅವರು ಮಾರ್ಚ್ 1964 ರಲ್ಲಿ ನೇರವಾಗಿ ಉನ್ನತ ನ್ಯಾಯಾಲಯದ ಪೀಠಕ್ಕೆ ಏರಿದ ಮೊದಲ ವಕೀಲರಾಗಿದ್ದರು.

ನವೆಂಬರ್9, 1957 ರಂದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಲಲಿತ್ ಜನನ. ಅವರ ತಂದೆ ಯು.ಆರ್. ಲಲಿತ್ ಅವರು ಬಾಂಬೆ ಹೈಕೋರ್ಟ್ ನಾಗ್ಪುರ ಪೀಠದಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿದ್ದರು ಮತ್ತು ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರಾಗಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!