Friday, September 20, 2024

ಪ್ರಾಯೋಗಿಕ ಆವೃತ್ತಿ

ತುಮಕೂರು | ಏಷ್ಯಾದ ಅತೀ ದೊಡ್ಡ ಸೌರ ಘಟಕ ಜಲಾವೃತ

ತುಮಕೂರು ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಪರಿಣಾಮ ಏಷ್ಯಾದ ಅತೀ ದೊಡ್ಡ ಸೌರ ಘಟಕ ಎನ್ನಿಸಿಕೊಂಡಿರುವ  ಪಾವಗಡ ತಾಲೂಕಿನ ಕ್ಯಾತಗಾನ ಚೆರ್ಲು ಬಳಿಯ ಸೋಲಾರ್ ಪಾರ್ಕ್ ಜಲಾವೃತಗೊಂಡಿದೆ. ಸೋಲಾರ್ ಪ್ಯಾನಲ್‌ಗಳು, ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 

ಸುಮಾರು 12,500 ಎಕರೆ ವಿಸ್ತೀರ್ಣದಲ್ಲಿರುವ ಸೋಲಾರ್‌ ಪಾರ್ಕ್‌ನ 30 ಹೆಕ್ಟೇರ್‌ನಷ್ಟು ಪ್ರದೇಶ ಜಲಾವೃತಗೊಂಡಿದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸೋಲಾರ್ ಪಾರ್ಕ್‌ನಿಂದ ವಿದ್ಯುತ್ ಪ್ರವಹಿಸಿ, ಅಪಾಯ ಸಂಭವಿಸಬಹುದೆಂಬ ಭಯ ಜನರಲ್ಲಿ ಕಾಡುತ್ತಿದೆ. 

“ಸೋಲಾರ್‌ ಪಾರ್ಕ್‌ ಬಳಿ ವಿದ್ಯುತ್‌ ಹರಿಯುತ್ತಲೇ ಇದೆ. ಯುವಕನೊಬ್ಬ ನೀರು ತುಂಬಿರುವ ಸೋಲಾರ್ ಪಾರ್ಕ್‌ ಪ್ರದೇಶದಲ್ಲಿ ಈಜು  ಹೊಡೆದಿದ್ದಾನೆ.  ಅನಾಹುತಗಳು ಸಂಭವಸಿದರೆ ಯಾರು ಹೊಣೆ. ಸೌರ ಘಟಕದೊಳಗೆ ಯಾರೂ ಪ್ರವೇಶಿಸದ ರೀತಿ ನೋಡಿಕೊಳ್ಳಬೇಕು. ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು” ಎಂದು ಸ್ಥಳೀಯರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!