Friday, September 20, 2024

ಪ್ರಾಯೋಗಿಕ ಆವೃತ್ತಿ

ಮಕ್ಕಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನೀತಿ ಕಲಿಸಿ

ಬೆಳೆಯುವ ಮಕ್ಕಳಿಗೆ ಸಾಂಸ್ಕೃತಿಕ ಕಲಿಕಾ ಕೌಶಲತೆ ಜೊತೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನೀತಿಗಳನ್ನು ಕಲಿಸಿದರೆ ಅವರು ಉತ್ತಮ ಪ್ರಜೆಯಾಗಲು ಪ್ರೇರಣೆಯಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಶಾಖೆಯ ಕಮಿಷನರ್ ನಾಗಮ್ಮ ಹೇಳಿದರು.

ಮಂಡ್ಯ ನಗರದ ಬಾಲಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಜಿಲ್ಲಾ ಶಾಖೆ ಆಯೋಜಿಸಿದ್ದ ಅಂನಗವಾಡಿ ಕಾರ್ಯಕರ್ತೆಯರಿಗೆ 3 ದಿನಗಳ ಬನ್ನಿ ಲೀರ‍್ಸ್ ಮೂಲ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ಪಾಲ್ಗೊಂಡು ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಅಂಗವಾಡಿ ಮಕ್ಕಳಿಂದಲೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನೀತಿಗಳ ಕಲಿಕೆಗೆ ಸರ್ಕಾರ ಮುಂದಾಗಿದೆ. ಮಗುವಿಗೆ ಮನೆಯೇ ಮೊದಲ ಪಾಠಶಾಲೆಯಾಗಿ ನಂತರ ಅಂಗನವಾಡಿ ಕಲಿಕಾ ಕೇಂದ್ರದಲ್ಲಿ ಅಕ್ಷರ ಅಭ್ಯಾಸ ಮಾಡಲು ಮುಂದಾಗುತ್ತವೆ, ಅಂಗವಾಡಿ ಕಾರ್ಯಕರ್ತೆಯರು 2ನೇ ತಾಯಿ, ಟೀಚರ್‌ ಆಗಿ ನಿಲ್ಲುತ್ತಾರೆ ಎಂದರು.

ಕಳೆದ ಹತ್ತಾರು ವರ್ಷಗಳಿಂದ ಶಾಲೆ-ಕಾಲೇಜು ವಿದ್ಯಾರ್ಥಿ ದಿಸೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಲಿಕೆ ಆರಂಭವಾಗುತ್ತಿತ್ತು, ಸನ್ನಡತೆ, ಸದ್ಭಾವನೆ, ಶಿಸ್ತು, ಪ್ರೀತಿ ಮತ್ತು ಸೇವಾ ಮನೋಭಾವನೆ ಬೆಳೆಸುವ ಮೂಲಕ ವಿದ್ಯಾರ್ಥಿಗಳನ್ನು ಸುಸಂಸ್ಕೃತ ನಾಗರಿಕರಿಕರನ್ನಾಗಿ ಬೆಳೆಸಲು ಶ್ರಮಿಸಲಾಗುತಿತ್ತು, ಈಗ ಅಂಗನವಾಡಿ ಕಲಿಕಾ ಕೇಂದ್ರದಿಂದಲೇ ತರಬೇತಿ ನೀಡುತ್ತಿರುವುದು ಉತ್ತಮ ಎಂದು ನುಡಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಶಾಖೆಯ ಎಡಿಸಿ ನಾಗರೇವಕ್ಕ ಮಾತನಾಡಿ, ಇಂದಿಗೆ 112 ವರ್ಷಗಳೇ ಕಳೆದಿವೆ. ಗಂಡು ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ಕಾರ್ಯಕ್ರಮದಲ್ಲಿ ಇಂದು ಹೆಣ್ಣೂ ಸಾಧನೆಯ ಉತ್ತುಂಗಕ್ಕೆ ಏರಿದ್ದು,  112 ವರ್ಷಗಳ ಇತಿಹಾಸಕ್ಕೆ ಹೊಸ ಹುರುಪು ಬಂದಿದೆ, ವಿಸ್ತಾರಗೊಳ್ಳುತ್ತ ಸಾಗುತ್ತಿದೆ ಎಂದು ಸ್ಮರಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಶಾಖೆಯ ಎಡಿಸಿ ಪದ್ಮಾವತಿ ಮಾತನಾಡಿ, ಬ್ರಿಟಿಷ್ ಆರ್ಮಿ ಅಧಿಕಾರಿ ರಾಜರ್ಟ್ ಬೇಡನ್ ಪಾವೆಲ್ ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕ. ಫೆಬ್ರವರಿ22, 1857 ರಲ್ಲಿ ಲಂಡನ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಕೌಟ್ಸ್ ಚಳುವಳಿ ಆರಂಭವಾಗಿತ್ತು. ಭಾರತದಲ್ಲಿ 1909 ರಲ್ಲಿ ಸ್ಕೌಟ್ಸ್ ಆರಂಭವಾಯಿತು. ಪ್ರಸ್ತುತ ರಾಜ್ಯದಲ್ಲಿ 4.5 ಲಕ್ಷ ಸ್ಕೌಟ್ಸ್ ಮತ್ತು ಗೈಡ್ಸ್ ಇದ್ದಾರೆ. ವಿಶ್ವದಲ್ಲಿ 325 ದಶಲಕ್ಷ ಸ್ಕೌಟ್ಸ್ ಇದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಶಾಖೆಯ ತರಬೇತಿದಾರರಾದ ಪದ್ಮಶ್ರೀನಿವಾಸ್ ಅವರಿಂದ 3 ದಿನಗಳ ಕಾಲ ತರಬೇತಿ ಪಡೆದ ಅಂಗವಾಡಿ ಕಾರ್ಯಕರ್ತೆಯರಿಗೆ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು. ಯೋಗ ತರಬೇತಿದಾರರಾದ ಲಕ್ಷ್ಮಿ ಸಂಪನ್ಮೂಲವ್ಯಕ್ತಿಯಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಕೆ.ಸಿ.ನಾಗಮ್ಮ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಶಾಖೆಯ ಕಾರ್ಯದರ್ಶಿ ಶಿವರಾಮೇಗೌಡ, ಗೈಡ್ಸ್ ನಿಹಾಲ್ ಮತ್ತು ಶಿಶು ಅಭಿವೃದ್ಧಿ ಯೋಜನೆ ಸಹಾಯಕರು, ಮೇಲ್ವಿಚಾರಕರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!