Tuesday, April 30, 2024

ಪ್ರಾಯೋಗಿಕ ಆವೃತ್ತಿ

ನಾಳೆ ಮೈಸೂರಿನಲ್ಲಿ ಕುವೆಂಪು ಕ್ರಾಂತಿ ಕಹಳೆ -50 ಕಾರ್ಯಕ್ರಮ: ಪ್ರಸನ್ನ ಗೌಡ

ಜಾಗೃತ ಕರ್ನಾಟಕದ ವತಿಯಿಂದ ಕುವೆಂಪು ಅವರ “ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ’ ಮತ್ತು “ವಿಚಾರ ಕ್ರಾಂತಿಗೆ ಆಹ್ವಾನ” ಎಂಬ ಎರಡು ಯುಗಪ್ರವರ್ತಕ ಭಾಷಣಗಳಿಗೆ 50 ವರ್ಷ ತುಂಬುತ್ತಿರುವ ನೆನಪಿನಲ್ಲಿ ”ಕುವೆಂಪು ಕ್ರಾಂತಿ ಕಹಳೆ – 50 ಕವಿವಾಣಿಯಿಂದ ಕರ್ನಾಟಕ ಮಾದರಿಯೆಡೆಗೆ” ಕಾರ್ಯಕ್ರಮವನ್ನು ಫೆ.3ರಂದು ಬೆಳಗ್ಗೆ 10 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ಮುಖಂಡ ಪ್ರಸನ್ನ ಎನ್.ಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತಿ ಬಿ ಟಿ ಲಲಿತಾ ನಾಯಕ್ ಸಮಾರಂಭ ಉದ್ಘಾಟಿಸುವರು. ಕೆ.ವಿ.ನಾರಾಯಣ ಅಧ್ಯಕ್ಷತೆ ವಹಿಸುವರು. ‘ಕುವೆಂಪುರವರ ಎರಡು ಮಹತ್ವದ ಭಾಷಣಗಳ ಸಮಕಾಲೀನ ಆಶಯ’ ಕುರಿತು ಸಾಹಿತಿ ಎಲ್ ಎನ್ ಮುಕುಂದರಾಜ್ ಪ್ರಧಾನ ಭಾಷಣ ಮಾಡುವರು ಎಂದರು.

ಯುವ ಸ್ಪಂದನೆಯಲ್ಲಿ ಚಿತ್ರನಟ ಡಾಲಿ ಧನಂಜಯ್, ಡಾ.ಕಾವೇರಿ- ಕೊಡಗು, ಕಾವ್ಯಶ್ರೀ- ಬೆಂಗಳೂರು, ಬಾಲಾಜಿ ಕುಂಬಾರ್- ಔರಾದ್, ಡಾ.ಮುಸ್ತಫಾ ಕೆ.ಎಚ್- ಮಡಿಕೇರಿ, ಮಹೇಶ.ಸಿ ಮತ್ತು ಧನಲಕ್ಷ್ಮಿ- ಮೈಸೂರು ವಿ.ವಿ ಸಂಶೋಧಕರು ಭಾಗವಹಿಸುವರು ಎಂದರು.

nudikarnataka.com

ಈ ಕಾರ್ಯಕ್ರಮದಲ್ಲಿ ಸಾಹಿತಿ ದೇವನೂರ ಮಹಾದೇವ, ಪ್ರೊ. ಜಯಪ್ರಕಾಶಗೌಡ ಮಂಡ್ಯ। ಚಿಂತಕ ಡಾ.ಕಾಳೇಗೌಡ ನಾಗವಾರ, ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸ್ವಾಮಿ ಆನಂದ್, ಜಗದೀಶ್ ಕೊಪ್ಪ, ಗುರುರಾಜ್ ಮೈಸೂರು, ಪ್ರಭು ಬಿಸ್ಸೇಹಳ್ಳಿ, ಮಹೇಶ್ ಹರವೆ, ಸಬೀಹಾ ಭೂಮಿಗೌಡ, ಭೂಮಿಗೌಡ, ಮಧುಸೂದನ್ ಮೈಸೂರು, ಚಂದ್ರಶೇಖರ್ ಐಜೂರು, ಎಚ್ ಆರ್ ಸ್ವಾಮಿ, ಜಗದೀಶ್ ಜಾಣಜಾಣೆಯರು, ಧನಂಜಯ ಎಲಿಯೂರು, ಎಂ ಕೃಷ್ಣಮೂರ್ತಿ, ರಘುಹೊತ್ತಮ ಹೊ ಬ, ಬಾಲು ವಿ ಎಲ್ ಬೆಂಗಳೂರು ಭಾಗವಹಿಸುವರು ಎಂದು ತಿಳಿಸಿದರು.

ರಾಜೇಶ್ ಎಚ್ ಎನ್ ಬೆಂಗಳೂರು, ಪ್ರೊ. ತಿಮ್ಮೇಗೌಡ, ಪ್ರೊ. ವಿಜಯಲಕ್ಷ್ಮಿ, ಪ್ರೊ. ತಿಮ್ಮಯ್ಯ, ಪ್ರೊ. ಟಿ.ಕೆ. ಕೆಂಪೇಗೌಡ, ಪ್ರೊ. ಇಂದಿರಮ್ಮ, ಲೋಕೇಶ್ ಮೊಸಳೆ, ಸ್ವಾಮಿ ಆನಂದ, ಕೆ.ಪಿ. ಮಹದೇವಯ್ಯ, ಪ್ರೊ ಕಲಾಶ್ರೀ,  ಪ್ರೊ.ಕೃಷ್ಣಗೌಡ, ಉಗ್ರ ನರಸಿಂಹಗೌಡ, ಹಿ.ಶಿ. ರಾಮಚಂದ್ರೇಗೌಡ, ನಂಜುಂಡಯ್ಯ ತಲಕಾಡು, ನಾಗರಾಜ ತಲಕಾಡು, ಉಮೇಶ್ ಆಕಾಶವಾಣಿ, ಪ್ರಸನ್ನ ಕೆ.ಪಿ. ಹುಣಸೂರು, ಚಿಕ್ಕಮಗಳೂರು ಗಣೇಶ್, ಶಿಲ್ಪಶ್ರೀ ಶಿವಕುಮಾರ, ಶಿವಕುಮಾರ ಶಿಲ್ಪಶ್ರೀ, ಸಂತೋಷ್ ನಾಯಕ್, ಡಾ. ಸಿ ರವೀಂದ್ರನಾಥ್, ಜಿ.ಪಿ. ಬಸವರಾಜು, ಸಂತೋಷ ಚೊಕ್ಕಾಡಿ, ಸತೀಶ್ ಜವರೇಗೌಡ, ದೇವನೂರ ಬಸವರಾಜು, ತುಕಾರಾಮ್ ಹಾಗೂ ಸುಧೀರ್ ಕುಮಾರ್ ಮುರೊಳ್ಳಿ ಪಾಲ್ಗೊಳ್ಳುವರು ಎಂದರು.

ಗೋಷ್ಠಿಯಲ್ಲಿ ರೈತಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಕೆಂಪೂಗೌಡ, ಮುಖಂಡರಾದ ಲಿಂಗಪ್ಪಾಜಿ, ಸುರೇಶ್, ವಿಜಯ್ ಕುಮಾರ್ ಹಾಗೂ ಬೊಮ್ಮೇಗೌಡ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!