Thursday, September 19, 2024

ಪ್ರಾಯೋಗಿಕ ಆವೃತ್ತಿ

ದೇವಾಲಯಗಳ ಸೃಷ್ಠಿಗೆ ವಿಶ್ವಕರ್ಮರ ಕೊಡುಗೆ ಅಪಾರ

ಪ್ರಮುಖ ವಾಸ್ತು ಶಿಲ್ಪಗಳು ಹಾಗೂ ದೇವಾಲಯಗಳ ಸೃಷ್ಠಿಗೆ ವಿಶ್ವಕರ್ಮರ ಕೊಡುಗೆ ಅಪಾರ ಎಂದು ಅರೆಮಾದನಹಳ್ಳಿ ವಿಶ್ವಕರ್ಮ ಮಹಾಸಂಸ್ಥಾನದ 18ನೇ ಮಠಾಧಿಪತಿ ಶ್ರೀ ಶಿವಸುಜ್ಞಾನತೀರ್ಥ ಸ್ವಾಮಿ ಹೇಳಿದರು.

ನಾಗಮಂಗಲ ಪಟ್ಟಣದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ತಾಲ್ಲೂಕು ಎಸ್.ಎಸ್.ಕೆ. ವಿಶ್ವಕರ್ಮ ಸಮಾಜದವತಿಯಿಂದ ಆಯೋಜಿಸಿದ್ದ ಪಾದಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಸಮಾಜದ ಏಳಿಗೆಗಾಗಿ ವಿಶ್ವಕರ್ಮ ಜನಾಂಗ ಶ್ರಮಿಸಬೇಕಿದೆ, ನಮ್ಮ ಸಮಾಜದ ಬಗ್ಗೆ ಆಡಳಿತ ಸರ್ಕಾರ ಹಾಗೂ ಶಾಸಕರು ಅನುದಾನ ಮತ್ತು ಸವಲತ್ತುಗಳನ್ನು ನೀಡುವುದರ ಮೂಲಕ ಜೀವಂತವಾಗಿರಿಸಬೇಕು ಎಂದರು.

ದೇವಾಲಯಗಳ ಸೃಷ್ಠಿ ಮಾಡಿದ ಕೀರ್ತಿ ಅಮರಶಿಲ್ಪಿ ಜಕಣಾಚಾರಿ ಅವರದ್ದಾಗಿದೆ, ಅಂತಹ ಶಿಲ್ಪಿವನ್ನು ಇಂದಿನ ಸಮಾಜ ಕೇವಲ ಕಾಲ್ಪನಿಕ ವ್ಯಕ್ತಿಯಂತೆ ಬಿಂಬಿಸುತ್ತಿರುವುದು ವಿತುಂಬಾ ನೋವನ್ನುಂಟು ಮಾಡಿದೆ ಎಂದರು.

ಶಾಸಕ ಕೆ.ಸುರೇಶ್ ಗೌಡ ಮಾತನಾಡಿ, ಸಮಾಜಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದೆ, ಈ ಸಮಾಜದ ಉನ್ನತಿಗಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಸ್ವಾಮೀಜಿಗಳನ್ನು ಮೆರವಣಿಗೆಯಲ್ಲಿ ದೇವಾಲಯಕ್ಕೆ ಕರೆತರಲಾಯಿತು. ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!