ಗುಜರಾತ್ ಪಕ್ಷೇತರ ಶಾಸಕ, ದಲಿತ ನಾಯಕ ಜಿಗ್ನೇಶ್ ಮೆವಾನಿಯನ್ನು ಅಸ್ಸಾಂ ಪೋಲಿಸರು ಬುಧವಾರ ರಾತ್ರಿ ಬಂಧಿಸಿದ್ದಾರೆ. ಶಾಸಕ ಜಿಗ್ನೇಶ್ ಮೆವಾನಿ ವಿರುದ್ದ ಪೋಲಿಸರು ಜಮೀನು ರಹಿತ ಕಾಯ್ದೆಗಳಡಿ ಏಫ್ಐಆರ್ ದಾಖಲಿಸಿದ್ದಾರೆ.
ರಾಷ್ಠ್ರೀಯ ದಲಿತ ಆಧಿಕಾರ್ ಮೋರ್ಚಾ ರಾಜಕೀಯ ಪಕ್ಷದ ಸಂಚಾಲಕರಾಗಿರುವ ಜಿಗ್ನೇಶ್ ಮೆವಾನಿ ಅವರನ್ನು ಗುಜರಾತ್ ನ ಪಾಲಂಪುರ್ ನಲ್ಲಿರುವ ಸರ್ಕೀಟ್ ಹೌಸ್ ನಿಂದ ಬಂಧಿಸಲಾಗಿದೆ. ಆದರೆ ಯಾವ ಕಾರಣಕ್ಕಾಗಿ ಬಂಧಿಸಲಾಗಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ಜಿಗ್ನೇಶ್ ಮೆವಾನಿ ವಿರುದ್ದ ಆಸ್ಸಾಂನಲ್ಲಿ ಕೆಲವು ಪ್ರಕರಣಗಳು ದಾಖಲಾಗಿದೆ ಎಂದು ವರದಿಯಾಗಿದೆ.