Friday, September 20, 2024

ಪ್ರಾಯೋಗಿಕ ಆವೃತ್ತಿ

ಅಪ್ಪಟ ಕನ್ನಡಾಭಿಮಾನಿ ಕುಪ್ಪೆದಡ ಶಿವನಂಜು

ಇವರ ಕನ್ನಡಾಭಿಮಾನದ ಬಗ್ಗೆ ಹೇಳಲು ಮಾತುಗಳು ಸಾಲುವುದಿಲ್ಲ,ಇವರ ನಡೆ-ನುಡಿ ಎಲ್ಲದರಲ್ಲೂ ಕನ್ನಡ ಭಾಷೆಯ ಕಂಪಿದೆ.ಇವರ ಜೀವನದ ಕಣಕಣದಲ್ಲೂ ಕನ್ನಡ ಭಾಷೆಯ ನಂಟಿದೆ.ಇವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ…
ಅವರೇ ನಮ್ಮ ಶ್ರೀರಂಗಪಟ್ಟಣ ತಾಲೂಕಿನ ಕುಪ್ಪೆದಡ ಗ್ರಾಮದ ನಿವಾಸಿ ಶಿವನಂಜು.

ಇವರ ಕನ್ನಡದ ಅಭಿಮಾನಕ್ಕೆ ದೊಡ್ಡ ಕುರುಹಾಗಿ ನಿಂತಿದೆ ಕನ್ನಡದ ಬಾವುಟದಲ್ಲಿರುವ ಕೆಂಪು ಮತ್ತು ಅರಿಶಿಣದ ಬಣ್ಣದ ಮನೆ. ಬಹುಶಃ ಕನ್ನಡದ ಬಾವುಟದ ಬಣ್ಣದ ಮನೆ ಎಲ್ಲಿ ಹುಡುಕಿದರೂ ಸಿಗುವುದಿಲ್ಲ.ಎಲ್ಲರ ಮನೆಯ ಗೋಡೆಗೆ ತರೇಹವಾರಿ ಬಣ್ಣ ಹೊಡೆಸಿರುತ್ತಾರೆ.ಆದರೆ ನಮ್ಮ ಕನ್ನಡಾಭಿಮಾನಿ ಶಿವನಂಜಣ್ಣ ಮಾತ್ರ ತಮ್ಮ ನಡೆ-ನುಡಿಯಲ್ಲಿ ಕನ್ನಡ ಭಾಷೆಯನ್ನು ಉಸಿರಾಗಿಸಿಕೊಂಡ ಕಾರಣ ಅವರು ವಿಶಿಷ್ಟ ವ್ಯಕ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

ಮನೆಯ ಹೊರಗೆ ಇಷ್ಟಾದರೆ ಮನೆಯ ಒಳಗೆ ಕನ್ನಡಾಂಭೆ ಗರ್ಭಗುಡಿ ನಿರ್ಮಿಸಿ ಅಲ್ಲಿ ಪ್ರತಿನಿತ್ಯ ಕನ್ನಡತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸುತ್ತಾ ಬರುತ್ತಿದ್ದಾರೆ.

ಮನೆಯ ತುಂಬಾ ಕನ್ನಡದ ಪ್ರಸಿದ್ಧ ಕವಿಗಳ ಭಾವಚಿತ್ರಗಳನ್ನು ಅಳವಡಿಸಿ,ಕನ್ನಡದ ಕಂಪನ್ನು ಆಳವಡಿಸಿರುವುದಲ್ಲದೆ, ಕನ್ನಡದ ಸಾಹಿತಿಗಳ ಸೂಕ್ತಿಗಳನ್ನು ಮನೆಯ ಗೋಡೆಗಳಿಗೆ ಬರೆಸುವ ಮೂಲಕ ಕನ್ನಡದ ಕಂಪನ್ನು ಬೀರಿದ್ದಾರೆ.

ನವೆಂಬರ್ ತಿಂಗಳಿನಲ್ಲಿ ಮನೆಯ ಮುಂದೆ ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ನೆರೆ ಹೊರೆಯವರಿಗೆ ಸಿಹಿ ಹಂಚಿ ಕನ್ನಡ ಭಾಷೆಯ ಅಭಿಮಾನವನ್ನು ಬಿತ್ತುತ್ತಿದ್ದಾರೆ.ಜನರು ಕೂಡ ಕನ್ನಡ ಭಾಷೆಯ ಬಗ್ಗೆ ಭಾರೀ ಅಭಿಮಾನ ಹೊಂದಿರುವ ಶಿವನಂಜು ಅವರನ್ನು ನಮ್ಮ ಬಣ್ಣದ ಮನೆ ಶಿವನಂಜಣ್ಣ ಎಂದು ಪ್ರೀತಿಯಿಂದ ಕರೆದು ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡಾಭಿಮಾನಿ ಬಣ್ಣದ ಮನೆ ಶಿವನಂಜು ಅವರ ಕನ್ನಡ ಪ್ರೀತಿಗೆ ನುಡಿ ಕರ್ನಾಟಕ.ಕಾಮ್ ಅಭಿನಂದನೆ ತಿಳಿಸುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!