Thursday, September 19, 2024

ಪ್ರಾಯೋಗಿಕ ಆವೃತ್ತಿ

ಸೆಸ್ಕ್ ನಿರ್ಲಕ್ಷ್ಯ : ಬಲಿಗಾಗಿ ಕಾದು ನಿಂತ ವಿದ್ಯುತ್ ಕಂಬ

ವಿದ್ಯುತ್ ಸರಬಾರಾಜು ಕಂಪನಿಯ ನಿರ್ಲಕ್ಷ್ಯದಿಂದಾಗಿ ಮಂಡ್ಯನಗರದ ನಂದಾ ಚಿತ್ರಮಂದಿರದ ಹಿಂಭಾಗದ ಇಂದಿರಾ ಬಡಾವಣೆಯ ಒಂದನೇ ಮುಖ್ಯರಸ್ತೆಯಲ್ಲಿನ ವಿದ್ಯುತ್ ಕಂಬ ಶಿಥಿಲಗೊಂಡು ಮುರಿದು ಬೀಳುವ ಸ್ಥಿತಿಗೆ ತಲುಪಿದೆ.

ಕಳೆದ ಎರಡು ವರ್ಷಗಳಿಂದ ಈ ಕಂಬವನ್ನು ಬದಲಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ನಿರಂತರ ಮಾಹಿತಿ ಮತ್ತು ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಿದ್ಯುತ್ ಕಂಬ ಒಂದು ಭಾಗಕ್ಕೆ ವಾಲಲು ಶುರುವಾಗಿದೆ. ಸ್ಥಳೀಯ ನಿವಾಸಿಗಳು ಅನಾಹುತ ತಪ್ಪಿಸುವ ಸಲುವಾಗಿ ಮರದ ಕಂಬವನ್ನು ಆಸರೆಯಾಗಿ ಕೊಟ್ಟು ವಿದ್ಯುತ್ ಕಂಬ ಬೀಳದಂತೆ ತಡೆದಿದ್ದಾರೆ.

ಈ ಕೂಡಲೇ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಎಚ್ಚೆತ್ತು ಇಂದಿರಾ ಬಡಾವಣೆ ವಾಸಿಗಳಿಗೆ ಮುಂದೆ ಒದಗಬಹುದಾದಂತಹ ಅಪಾಯವನ್ನು ತಪ್ಪಪಿಸಬೇಕು, ಇಲ್ಲವಾದರೆ ಸೆಸ್ಕ್ ವಿರುದ್ಧ ಬಡಾವಣೆಯ ನಿವಾಸಿಗಳು ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅಲ್ಲಿನ ನಿವಾಸಿಗಳು ನುಡಿ ಕರ್ನಾಟಕ.ಕಾಂಗೆ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!