Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಿಂಬಾಬ್ವೆ ವಿರುದ್ದ ಗೆದ್ದ ಭಾರತ : ಸೆಮಿಫೈನಲ್ ಗೆ ಎಂಟ್ರಿ


  • 71 ರನ್‌ಗಳ ಭಾರೀ ಅಂತರದಿಂದ ಭರ್ಜರಿ ಗೆಲುವು

  • ಸೂರ್ಯಕುಮಾರ್ ಯಾದವ್ ನೆರವಿನಿಂದ ಜಯ ಗಳಿಸಿದ ಭಾರತ

ಟಿ-20 ವಿಶ್ವಕಪ್ 2022ರ ಸೂಪರ್ 12 ಹಂತದ ಅಂತಿಮ ಪಂದ್ಯದಲ್ಲಿ ಭಾರತ ತಂಡವು ಜಿಂಬಾಬ್ವೆ ವಿರುದ್ಧ 71 ರನ್‌ಗಳ ಭಾರೀ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಗ್ರೂಪ್ 2ರ ಪಟ್ಟಿಯಲ್ಲಿ ಅಗ್ರಸ್ಥಾನದಿಂದ(8 ಅಂಕ) ಸೆಮೀಸ್​ಗೆ ಎಂಟ್ರಿ ಕೊಟ್ಟಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ ತಂಡವು 17.2 ಓವರ್ ಗಳಲ್ಲಿ 10 ವಿಕೆಟ್ ಕಳೆದುಕೊಂಡು, 115 ರನ್ ಗಳಿಸಿತು. ಈ ಮೂಲಕ ಭಾರತ 71 ರನ್ ಗಳಿಂದ ಜಯಭೇರಿ ಬಾರಿಸಿದೆ.

ಭಾರತದ ಉತ್ತಮ ಮೊತ್ತ

ಭಾರತ ತಂಡ 20 ಓವರ್ ಗಳಲ್ಲಿ5 ವಿಕೆಟ್‌ ನಷ್ಟಕ್ಕೆ 186 ರನ್ ಗಳಿಸಿತು. ಭಾರತದ ಪರ ಕೆ.ಎಲ್.ರಾಹುಲ್ ಮತ್ತು ಸೂರ್ಯ ಕುಮಾರ್ ಯಾದವ್ ಆಕರ್ಷಕ ಅರ್ಧ ಶತಕ ಸಿಡಿಸಿದರು. ಕೆ.ಎಲ್.ರಾಹುಲ್ 35 ಎಸೆತಗಳಲ್ಲಿ 3 ಫೋರ್. 3 ಸಿಕ್ಸ್ ಸಹಿತ 51 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 4 ಸಿಕ್ಸ್, 6 ಬೌಂಡರಿಗಳ ನೆರವಿನಿಂದ ಅಜೇಯರಾಗಿ 61 ರನ್ ಗಳಿಸಿದರು. ಉಳಿದಂತೆ ನಾಯಕ ರೋಹಿತ್ ಶರ್ಮಾ 15 ರನ್, ವಿರಾಟ್ ಕೊಹ್ಲಿ 26 ರನ್, ರಿಷಭ್ ಪಂತ್ 3 ರನ್ ಮತ್ತು ಹಾರ್ದಿಕ್ ಪಾಂಡ್ಯ 18 ರನ್ ಗಳಿಸಿದರು.

187 ರನ್ ಗಳ ಗುರಿ ಪಡೆದ ಜಿಂಬಾಬ್ವೆ ಆಟಗಾರರು ಕೇವಲ 115 ರನ್ ಗಳಿಸಿ, ತಮ್ಮೆಲ್ಲಾ ವಿಕೆಟ್ ಕಳೆದುಕೊಂಡರು. ಜಿಂಬಾಬ್ವೆ ಪರ ಸಿಕಂದರ್ ರಾಜಾ 34 ರನ್ ಮತ್ತು ರಾಯನ್ 35 ರನ್ ಗಳಿಸಿದರು. ಜಿಂಬಾಬ್ವೆ ಆಟಗಾರರಿಗೆ ಯಾವುದೇ ಹಂತದಲ್ಲಿಯೂ ಟಾರ್ಗೆಟ್​ ಕಡೆ ಮುನ್ನುಗ್ಗಲು ಭಾರತದ ಬೌಲರ್​ಗಳು ಅವಕಾಶವನ್ನೇ ನೀಡಲಿಲ್ಲ. ಭಾರತದ ಪರ ಅಶ್ವಿನ್​ 3 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಹಾಗೂ ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ತಲಾ 1 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಮಿಂಚಿದರು.

ಭಾರತಕ್ಕೆ ಇಂಗ್ಲೆಂಡ್​ ಎದುರಾಳಿ

ಜಿಂಬಾಬ್ವೆ ವಿರುದ್ಧ ಗೆದ್ದ ಭಾರತ, ಗ್ರೂಪ್ 2ರಲ್ಲಿ ಅಗ್ರಸ್ಥಾನದ ಗಳಿಸುವ ಮೂಲಕ ಸೆಮೀಸ್​ಗೆ ಎಂಟ್ರಿ ನೀಡಿದೆ. ಇದರಿಂದಾಗಿ ಗ್ರೂಪ್ 1ರಲ್ಲಿ 2ನೇ ಸ್ಥಾನದಲ್ಲಿರುವ ಇಂಗ್ಲೆಂಡ್​ ತಂಡವನ್ನು ಭಾರತ ಸೆಮೀಸ್​ನಲ್ಲಿ ನವೆಂಬರ್ 10ರಂದು ಎದುರಿಸಲಿದೆ. ಅದರಂತೆ ಅಂತಿಮವಾಗಿ ಸೆಮೀಸ್​ ಪಟ್ಟಿ ಸಿದ್ಧವಾಗಿದ್ದು, ನವೆಂಬರ್ 9ರಂದು ಪಾಕಿಸ್ತಾನ ತಂಡವು ನ್ಯೂಜಿಲ್ಯಾಂಡ್​ ತಂಡವನ್ನು ಎದುರಿಸಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!