Thursday, September 19, 2024

ಪ್ರಾಯೋಗಿಕ ಆವೃತ್ತಿ

ಸೈಬರ್ ಕ್ರೈಂ ತಡೆಗಟ್ಟಲು ಅರಿವು ಅಗತ್ಯ : ಎಸ್ಪಿ

ದೇಶ ವ್ಯಾಪಿ ಹೆಚ್ಚಾಗುತ್ತಿರುವ ಸೈಬರ್ ಕ್ರೈಮ್ ತಡೆಗಟ್ಟಲು ಬ್ಯಾಂಕ್ ಮತ್ತು ಪೊಲೀಸ್ ಇಲಾಖೆ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.

ಮಂಡ್ಯದ ಬ್ಯಾಂಕ್ ಆಫ್ ಬರೋಡ ಟ್ರೈನಿಂಗ್ ಸೆಂಟರ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಭದ್ರತಾ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಮಂಡ್ಯ ಜಿಲ್ಲೆಯ ಬ್ಯಾಂಕುಗಳಲ್ಲಿ ಇರುವ ಭದ್ರತೆ ಬಗ್ಗೆ ಮಾಹಿತಿ ಪಡೆದು, ಪರಿಶೀಲನೆ ಮಾಡಿದರು. ನಂತರ ಬ್ಯಾಂಕ್ ನಲ್ಲಿ ಎಲ್ಲಾ ರೀತಿಯ ಭದ್ರತೆಗೆ ಹೆಚ್ಚಿನ ಒತ್ತು ನೀಡಬೇಕು. ಎಲ್ಲಾ ಬ್ಯಾಂಕ್ ನಲ್ಲಿ ಭದ್ರತಾ ಸಿಬ್ಬಂದಿಗಳನ್ನು ನೇಮಿಸಬೇಕು, ಅಲ್ಲದೇ ಬ್ಯಾಂಕ್ ಮತ್ತು ಪೊಲೀಸ್ ಇಲಾಖೆ ನಡುವೆ ಉತ್ತಮ ಬಾಂದವ್ಯ ಇದ್ದರೆ ಗ್ರಾಹಕರಿಗೆ ಸಹಾಯವಾಗುತ್ತದೆ ಎಂದರು.

ಯಾವುದೇ ಸಮಸ್ಸೆ ಇದ್ದರು 112 ಗೆ ಕರೆ ಮಾಡಿ ಹಾಗೂ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರು ಹತ್ತಿರದ ಪೊಲೀಸ್ ಠಾಣೆಗೆ ತಮ್ಮ ಮೊಬೈಲ್ ನಂಬರ್ ನೀಡಿದರೆ ರಾತ್ರಿ ಹೊತ್ತು ಪೊಲೀಸರು ಬೀಟ್ ಮಾಡುವ ಬಗ್ಗೆ ಮೊಬೈಲ್ ಗೆ ಮಾಹಿತಿ ಬರುತ್ತದೆ ಎಂದರು.

ಸಭೆಯಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕ ದೀಪಕ್, RBI ನ ಮ್ಯಾನೇಜರ್ ಫಜಲ್ ಅಹಮದ್ ಹಾಗೂ ವಿಬ್ಸೆಟಿ ಮುಖ್ಯಸ್ಥ ವಿವೇಕ್ ಹಾಗೂ ಎಲ್ಲಾ ಬ್ಯಾಂಕ್ ನ ಮುಖ್ಯಸ್ಥರು ಭಾಗವಹಿಸಿದ್ದರು. ಸಭೆಯ ನಂತರ ಜಿಲ್ಲಾಮಟ್ಟದ ಹಣಕಾಸು ನಿರ್ವಹಣೆ ಸಮಿತಿ ಸಭೆ ಕೂಡ ನಡೆಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!