Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಮಲ‌ ಹಿಡಿದ ಫೈಟರ್ ರವಿ

ನಾಗಮಂಗಲ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಮಲ್ಲಿಕಾರ್ಜುನ (ಫೈಟರ್ ರವಿ) ಇಂದು ಬೆಳಿಗ್ಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾದರು.

ಇಂದು ಫೈಟರ್ ರವಿ ತಮ್ಮ ಅಸಂಖ್ಯಾತ ಬೆಂಬಲಿಗರು,ಮುಖಂಡರು, ಹಿತೈಷಿಗಳೊಂದಿಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.

ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್,ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ,ಮಾಜಿ ಸಚಿವ ಸಿ.ಪಿ.ಯೋಗೇಶ್ವರ್,ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್ ಮತ್ತಿತರರು ಮಲ್ಲಿಕಾರ್ಜುನ (ಫೈಟರ್ ರವಿ) ಅವರಿಗೆ ಬಿಜೆಪಿ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಬಿಜೆಪಿ ಪಕ್ಷ ಸೇರ್ಪಡೆಯಾದ ಸಂದರ್ಭದಲ್ಲಿ ಕರಡಹಳ್ಳಿ ಗ್ರಾ.ಪಂ.ಸದಸ್ಯ ಚೇತನ್,ತಾಲ್ಲೂಕು ಬಿಜೆಪಿ ಮಂಡಲ ಕಾರ್ಯದರ್ಶಿ ಎಲ್.ಡಿ.ದಾಸಪ್ಪ, ಮುಖಂಡರಾದ ಪ್ರವೀಣ್,ಗೂಳೂರು ಕುಮಾರ್, ಬೆಟ್ಟಹಳ್ಳಿ ಮಹೇಶ್,ಆಬಲವಾಡಿ ಶಿವು,ಬೆಳ್ಳೂರು ಪವನ್,ಚಿಣ್ಯ ನಂದೀಶ್,ಬ್ರಹ್ಮ ದೇವರ ಹಳ್ಳಿ ಲೋಕೇಶ್,ಅರ್ಜುನ್,ಮಂಜು,ಡಿ.ಹೊಸಹಳ್ಳಿ ಅಭಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಫೈಟರ್ ರವಿ ಬಿಜೆಪಿ ಪಕ್ಷ ಸೇರ್ಪಡೆ ಹಿನ್ನಲೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಪ್ರತಿ ಹೋಬಳಿಯಿಂದ ಬಸ್,ಕಾರುಗಳಲ್ಲಿ 500ಕ್ಕೂ ಹೆಚ್ಚು ಬೆಂಬಲಿಗರು, ಹಿತೈಷಿಗಳು,ಅಭಿಮಾನಿಗಳು ತೆರಳಿದ್ದರು.

ಬಿಜೆಪಿಗೆ ಶಕ್ತಿ
ನಾಗಮಂಗಲ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಸಂಘಟನೆ ಸಾಕಷ್ಟು ಕಡಿಮೆಯಿತ್ತು.ಈಗ ಫೈಟರ್ ರವಿ ಅವರ ಸೇರ್ಪಡೆಯಿಂದ ನಾಗಮಂಗಲದಲ್ಲಿ ಬಿಜೆಪಿ ಪಕ್ಷಕ್ಕೆ ಶಕ್ತಿ ಬಂದಿದೆ.ಕಾಂಗ್ರೆಸ್ ಪಕ್ಷದಿಂದ ಚಲುವರಾಯಸ್ವಾಮಿ ಹಾಗೂ ಜೆಡಿಎಸ್ ಪಕ್ಷದಿಂದ ಶಾಸಕ ಸುರೇಶ್ ಗೌಡ ಸ್ಪರ್ಧಿಸಲಿದ್ದಾರೆ.ಈಗ ಬಿಜೆಪಿಯಿಂದ ಫೈಟರ್ ರವಿ ಕಣಕ್ಕೆ ಧುಮುಕಲಿದ್ದು,ಈ ಬಾರಿಯ ಚುನಾವಣೆ ಸಾಕಷ್ಟು ರಂಗೇರಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!