Thursday, September 19, 2024

ಪ್ರಾಯೋಗಿಕ ಆವೃತ್ತಿ

ಡಿ.11ಕ್ಕೆ ರಾಜ್ಯಮಟ್ಟದ ‘ಮಂಡ್ಯ ಮ್ಯಾರಥಾನ್’ ಸ್ಪರ್ಧೆ

ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕನ್ನಡಕ್ಕಾಗಿ ಓಡು-ಕನ್ನಡಕ್ಕಾಗಿ ಬಾಳು’ ಘೋಷಣೆಯೊಂದಿಗೆ ರಾಜ್ಯಮಟ್ಟದ ‘ಮಂಡ್ಯ ಮ್ಯಾರಥಾನ್’ 5 ಕಿ.ಮೀ. ಓಟಸ್ಪರ್ಧೆಯನ್ನು ಡಿ.11ರಂದು ಬೆಳಿಗ್ಗೆ 6ಗಂಟೆಗೆ ಆಯೋಜಿಸಲಾಗಿದ್ದು, ಮ್ಯಾರಥಾನ್ ಲಾಂಛನವನ್ನು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲ ಕೃಷ್ಣ ಬಿಡುಗಡೆಗೊಳಿಸಿದರು.

ನಗರದ ಪ್ರವಾಸಿಮಂದಿರ ಪಕ್ಕದ ಕೆ.ವಿ.ಶಂಕರಗೌಡ ರಸ್ತೆಯಿಂದ ತಹಸೀಲ್ದಾರ್ ಕಚೇರಿ, ಜಿಲ್ಲಾ ಕಾರಾಗೃಹ, ಕ್ಯಾತುಂಗೆರೆ ಬಡಾವಣೆ ಮಾರ್ಗವಾಗಿ ಬೇವಿನಹಳ್ಳಿ ಗ್ರಾಮದ ಪ್ರವೇಶದ್ವಾರದವರೆಗೆ (5ಕಿ.ಮೀ.) ಮಂಡ್ಯ ಮ್ಯಾರಥಾನ್ ಓಟದ ಸ್ಪರ್ಧೆ ನಡೆಯಲಿದೆ  ಆಯೋಜಿಸಲಾಗಿದೆ ಎಂದು ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ತಿಳಿಸಿದರು.

‘ಮಂಡ್ಯ ಮ್ಯಾರಥಾನ್’ ಓಟ ಸ್ಪರ್ಧೆಯನ್ನು ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಆರೋಗ್ಯದ ಅರಿವು ಮೂಡಿಸುವ ಉದ್ದೇಶದಿಂದ ನಡೆಸಲಾಗುತ್ತಿದ್ದು, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಕ್ರೀಡಾಪಟುಗಳು, ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಎನ್‌ಎಸ್‌ಎಸ್ ಹಾಗೂ ಸಂಘ ಸಂಸ್ಥೆಗಳ ಸ್ವಯಂ ಸೇವಕರು, ಗ್ರಾಮೀಣ ಪ್ರದೇಶದ ಯುವಕರು ಈ ಓಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಪಾಲ್ಗೊಳ್ಳುವ ಎಲ್ಲಾ ಸ್ಪರ್ಧಿಗಳಿಗೂ ಟೀ-ಶರ್ಟ್ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು. ಪುರುಷ, ಮಹಿಳೆ ಹಾಗೂ ಹಿರಿಯ ನಾಗರೀಕರ ವಿಭಾಗದಲ್ಲಿ ಸ್ಪರ್ಧಿಗಳು ಭಾಗವಹಿಸಬಹುದು. ಪ್ರಥಮ ವಿಜೇತರಿಗೆ 10 ಸಾವಿರ ರೂ., ದ್ವಿತೀಯ 7,500 ರೂ., ತೃತೀಯ 5,000 ರೂ. ನಗದು ಬಹುಮಾನ ನೀಡಲಾಗುವುದು.

ಆಸಕ್ತರು ತಮ್ಮ ಹೆಸರನ್ನು ಮೊ.9740011624, 9980605484, 914857552 ಸಂಖ್ಯೆಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದರು. ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಎಡಿಸಿ ಡಾ.ನಾಗರಾಜು, ಅಖಂಡ ಕರ್ನಾಟಕ ರಕ್ಷಣಾ ಸೇವಾ ದಳ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್, ಕೋ.ಪು.ಗುಣಶೇಖರ್, ಬಿ.ಎಸ್.ಅನುಪಮಾ, ಭೀಮೇಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!