Friday, September 20, 2024

ಪ್ರಾಯೋಗಿಕ ಆವೃತ್ತಿ

ಹನುಮ ಮಾಲಾಧಾರಿಗಳಿಂದ ಅವಾಚ್ಯ ಪದಗಳ ಬಳಕೆ

ಶ್ರೀರಂಗಪಟ್ಟಣದಲ್ಲಿ ನಡೆದ ಸಂಕೀರ್ತನಾ ಯಾತ್ರೆಯಲ್ಲಿ ಭಾಗವಹಿಸಿದ್ದ ಹನುಮ ಮಾಲಾಧಾರಿಗಳು ಅವಾಚ್ಯ ಪದಗಳನ್ನು ಬಳಕೆ ಮಾಡಿದರು. ಮುಸ್ಲಿಂ ಸಮುದಾಯದ ಮನೆ ಮೇಲಿದ್ದ ಹಸಿರು ಬಾವುಟ ಕಿತ್ತೆಸೆದು, ಕೇಸರಿ ಬಾವುಟ ಹಾಕಿ ಮತ್ತೊಂದು ಸಮುದಾಯವನ್ನು ಕೆರಳಿಸುವ ಪ್ರಯತ್ನ ಮಾಡಿದರು.

ಜಾಮೀಯಾ ಮಸೀದಿ ಮುಂಭಾಗ ಬ್ಯಾರಿಕೇಡ್ ಕಿತ್ತೆಸೆದು ಮಸೀದಿಗೆ ನುಗ್ಗುವುದಾಗಿ ಪೋಲಿಸರ ಜೊತೆ ವಾಗ್ವಾದ ನಡೆಸಿದರು. ತಳ್ಳಾಟ, ನೂಕಾಟ ನಡೆಸಿದರು. ಇದನ್ನೆಲ್ಲಾ ಕಂಡ ಶ್ರೀರಂಗಪಟ್ಟಣದ ನಾಗರೀಕರು ಹನುಮ ದೇವರ ಹೆಸರಿನಲ್ಲಿ ಮಾಲಾಧಾರಿಗಳಾದ ಇವರಿಗೆ ಸ್ವಲ್ಪವಾದರೂ ಸಭ್ಯತೆ, ಶಿಸ್ತು, ಸಂಯಮ ಇರಬೇಕಿತ್ತಲ್ಲವೇ..ದೇವರ ಹೆಸರಿನಲ್ಲಿ ಮಾಲೆ ಧರಿಸಿದರ ಬಾಯಲ್ಲಿ ಅವಾಚ್ಯ ಶಬ್ದಗಳು ಹೊರಡುತ್ತಿದ್ದನ್ನು ಕಂಡು ದಿಗ್ಬ್ರಮೆಯಾಗಿದೆ ಇಂತಹ ಘಟನೆಯನ್ನು ನಾನೆಲ್ಲೂ ನೋಡಿಲ್ಲ ಸ್ಥಳೀಯರೊಬ್ಬರು ಆತಂಕ ವ್ಯಕ್ತಪಡಿಸಿದರು.

ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಬಹಳ ಶಿಸ್ತಿನಿಂದ ವ್ರತ ಮಾಡುತ್ತಾರೆ. ಆದರೆ ಹನುಮ ಮಾಲಾಧಾರಿಗಳು ಅವಾಚ್ಯ ಪದ ಬಳಕೆ ಮಾಡುತ್ತಾ, ದಾಂಧಲೆ ಮಾಡುತ್ತಾ, ಗಲಭೆ ಎಬ್ಬಿಸಲು ಬಂದಿದ್ದಾರೇನೋ ಎಂಬಂತೆ ವರ್ತಿಸಿದ್ದು ಸರಿಯಲ್ಲ ಎಂದು ಶ್ರೀರಂಗಪಟ್ಟಣದ ಮಂಜುನಾಥ್ ಹೇಳಿದರು.

ಕಾಲು ಕೆ.ಜಿ ಉಪ್ಪು ಸೂ…ಮಗ ಟಿಪ್ಪು ಎಂದು ಕೂಗಿದ ನಂತರ ಭಾರತ್ ಮಾತಾಗಿ ಜೈ ಎಂದು ಕೂಗುತ್ತಿದ್ದು ಕಂಡು ಬಂತು. ಹೀಗೆ ಕೂಗಿದರೆ ಹನುಮ ಮಾಲಾಧಾರಿಗಳು ಹಾಕಿರುವ ಕಾವಿ ಮಾಲೆಗೆ ಏನು ಬೆಲೆಯಿದೆ. ಹನುಮನ ಹೆಸರಿನಲ್ಲಿ ಇವರು ಸ್ಥಾಪಿಸಲು ಬಂದಿರುವ ಅಜೆಂಡಾ ಏನು? ಎಂಬುದು ಗೊತ್ತಾಗುತ್ತದೆ ಎಂದು ಸ್ಥಳೀಯರೊಬ್ಬರು ಮಾತನಾಡಿಕೊಂಡರು.

ಮಾಲಾಧಾರಿಗಳಾದ ನಂತರ ಅವರಲ್ಲಿ ಸೌಮ್ಯ ಸ್ವಭಾವ ತಾನಾಗಿಯೇ ಬರುತ್ತದೆ. ಆದರೆ ಹನುಮ ಮಾಲಾಧಾರಿಗಳು ಸೂ…ಮಗ ಅಂತ ಜೋರಾಗಿ ಕೂಗುತ್ತಾರೆಂದರೆ ಇವರಿಗೆ ದೇವರಿಗಿಂತ ಕೋಮು ದ್ವೇಷವೇ ಮುಖ್ಯ. ಅದನ್ನು ಜಾರಿಗೆ ತರಲು ಈ ಮಾಲೆ ನೆಪವಷ್ಟೇ. ಆರೇಳು ವರ್ಷಗಳ ಹಿಂದೆ ಇಲ್ಲದ ಹನುಮ ಮಾಲೆ ಇತ್ತೀಚಿಗೆ ಆಚರಣೆ ತಂದಿರುವುದ ಹಿಂದೆ ರಾಜಕೀಯ ಸಂಚಿದೆ, ಬಹಿರಂಗವಾಗಿ ಮತ್ತೊಂದು ಧರ್ಮದವರ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿತ್ತಿರುವುದು ಸಂಘ ಪರಿವಾರದ ಸಂಸ್ಕೃತಿಯನ್ನು ಬಹಿರಂಗ ಮಾಡಿದೆ ಎಂದು ಕೃಷ್ಣೇಗೌಡ ಆಕ್ರೋಶ ವ್ಯಕ್ತಪಡಿದರು. ಅದರಲ್ಲೂ ಬಿಜೆಪಿ ಜಿಲ್ಲಾ ನಾಯಕರು, ಎಂಎಲ್ಎ ಆಗಲು ಬಯಸುವ ನಾಯಕರ ಮುಂದೆ ಸೂಳೆಮಗ ಎಂದು ಕೂಗಿದ್ದು,ಮಾ ಲಾಧಾರಿಗಳ ನೈತಿಕತೆ ಪ್ರಶ್ನಿಸುತ್ತದೆ ಎಂದು ಕೃಷ್ಣೇಗೌಡ ಹೇಳಿದರು.

ಹತ್ತು ಸಾವಿರ ಅಷ್ಟೇ

ಬಿಜೆಪಿ ನಾಯಕರು, ವಿಧಾನಸಭಾ ಚುನಾವಣೆಯ ಸ್ಪರ್ಧಾಕಾಂಕ್ಷಿಗಳು ಒಂದು ಲಕ್ಷ, ಎರಡು ಲಕ್ಷ, ಐವತ್ತು ಸಾವಿರ ಮಂದಿ ಸೇರ್ತಾರೆ ಅಂದಿದ್ದರು. ಆದರೆ ಸೇರಿದ್ದು, 10 ಸಾವಿರ ಮಂದಿ ಅಷ್ಟೇ. ಅದರಲ್ಲೂ ಶಾಲಾ- ಕಾಲೇಜುಗಳ ಯುವಕರು, ಬಾಲಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!