Friday, November 20, 2026

ಪ್ರಾಯೋಗಿಕ ಆವೃತ್ತಿ

ಮಹಿಳಾ ಆಯೋಗಕ್ಕೆ ಮಣಿಪುರಕ್ಕೆ ಹೋಗುವುದಕ್ಕೆ ಧೈರ್ಯವಿಲ್ಲವೇ ? : ಕಾಂಗ್ರೆಸ್ ಪ್ರಶ್ನೆ

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಕಾಂಗ್ರೆಸ್ ಆಡಳಿತದ ಕರ್ನಾಟಕಕ್ಕೆ ಬಂದು ನಿರ್ಭೀತಿಯಿಂದ ಉಡುಪಿ ಕಾಲೇಜು ಪ್ರಕರಣವನ್ನು ಪರಿಶೀಲಿಸಿದ್ದಾರೆ, ಆದರೆ ಮಹಿಳೆಯರನ್ನು ಬೆತ್ತಲೆಗೊಳಿಸಿದ, ನೂರಾರು ಅತ್ಯಾಚಾರಗಳು ನಡೆದಿರುವ ಬಿಜೆಪಿ ಆಡಳಿತದ ಮಣಿಪುರಕ್ಕೆ ಹೋಗುವುದಕ್ಕೆ ಧೈರ್ಯ ಇಲ್ಲವೇ ಅಥವಾ ಇಚ್ಛೆ ಇಲ್ಲವೇ? ರಾಷ್ಟ್ರೀಯ ಮಹಿಳಾ ಆಯೋಗವು ಮಣಿಪುರದ ವಿಚಾರದಲ್ಲಿ ಕಣ್ಮುಚ್ಚಿ ಕುಳಿತಿರುವುದೇಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

“>

ಇರುವೆಯನ್ನು ಆನೆ ಎಂದು ನಂಬಿಸಲು ಹೊರಟಿದ್ದ ಬಿಜೆಪಿ ಹಾಗೂ ಬಿಜೆಪಿಯ ಟೂಲ್ ಕಿಟ್ ಗ್ಯಾಂಗಿನ ಕನಸಿಗೆ ಮತ್ತೊಮ್ಮೆ ತಣ್ಣೀರು ಎರಚಿದ್ದಾರೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಹಾಗೂ ಬಿಜೆಪಿ ನಾಯಕಿ ಖುಷ್ಬು ಎಂದು ಕಾಂಗ್ರೆಸ್ ಟೀಕಿಸಿದೆ.

ಉಡುಪಿ ಕಾಲೇಜಿನ ಘಟನೆಯು ಷಡ್ಯಂತ್ರವಲ್ಲ, ವಿದ್ಯಾರ್ಥಿನೀಯರ ಮೊಬೈಲ್ ಗಳಲ್ಲಿ ಯಾವುದೇ ವಿಡಿಯೋಗಳು ಪತ್ತೆಯಾಗಿಲ್ಲ, ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋ ಹರಿಬಿಡಲಾಗಿದೆ, ಪೊಲೀಸರು ಸಮರ್ಪಕ ತನಿಖೆ ನಡೆಸಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಡಬೇಕು. ಇದನ್ನು ಕೇವಲ ಹುಡುಗಾಟಿಕೆಯ ಘಟನೆಯಾಗಿಯಷ್ಟೇ ನೋಡಬೇಕು ಹೊರತು ರಾಜಕೀಯಕ್ಕೆ ಬಳಸಬಾರದು ಎಂಬ ಸ್ವತಃ ಬಿಜೆಪಿ ನಾಯಕಿಯ ಸಂದೇಶವನ್ನು ಬಿಜೆಪಿಗರು ಅರಗಿಸಿಕೊಳ್ಳಲು ಸಾಧ್ಯವೇ! ಸರ್ಕಾರವನ್ನು ವಿರೋಧಿಸಲು ವಿಷಯಗಳಿಲ್ಲದೆ ಕಂಗಲಾಗಿರುವ ಬಿಜೆಪಿ ಈಗ ಬಾತ್ ರೂಮಿನ ರಾಜಕೀಯಕ್ಕೆ ಹೊರಟಿದೆ! ಎಂದು ಬಿಜೆಪಿಯ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ