Thursday, September 19, 2024

ಪ್ರಾಯೋಗಿಕ ಆವೃತ್ತಿ

ಪಡ್ಡೆ ಹೈಕಳ ”ಪದವಿ ಪೂರ್ವ” ವರ್ಷಾಂತ್ಯಕ್ಕೆ ಬೆಳ್ಳಿ ತೆರೆಗೆ

ಪದವಿ ಪೂರ್ವ ಕಾಲೇಜಿನ ಹಂತದಲ್ಲಿ ಉಂಟಾಗುವ ಸ್ನೇಹ, ಪ್ರೀತಿ, ಪ್ರೇಮ, ಆಕರ್ಷಣೆ, ಮಾನವೀಯತೆ  ಭಾವನೆಗಳ ಅಭಿವ್ಯಕ್ತಿಯನ್ನೇ ಕಥಾ ಹಂದರವಾಗಿ ಹೊಂದಿರುವ ಪದವಿ ಪೂರ್ವ ಚಿತ್ರ ಬಹುತೇಕ ಹೊಸ ಪ್ರತಿಭೆಗಳಿಂದಲೇ ಆಕರ್ಷಣಿಯವಾಗಿದ್ದು, ಡಿ.30ಕ್ಕೆ ಬೆಳ್ಳಿ ತೆರೆಗೆ ಬರಲು ಸಜ್ಜಾಗಿಸಿದೆ.

ಕುಡಿಮೀಸೆಯ ಯುವಕ ಪೃಥ್ವಿ ಶ್ಯಾನಬೋಗ್ ನಾಯಕನಾಗಿರುವ ಈ ಚಿತ್ರದಲ್ಲಿ ಹೊಸಮುಖ ಅಂಜಲಿ ಅನಿಸ್ ನಾಯಕಿಯಾಗಿ ಜೊತೆಯಾಗಿದ್ದಾರೆ. ₹ 3 ಕೋಟಿ ಬಜೆಟ್ ನಲ್ಲಿ ಖ್ಯಾತ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಹಾಗೂ ರವಿ ಶಾಮನೂರ್ ಚಿತ್ರ ನಿರ್ಮಿಸಿದ್ದಾರೆ.

nudikarnataka.com

ಇದು ಪಕ್ಕ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಅಭಿನಯಿಸಿರುವ ಚಿತ್ರವಾಗಿದೆ. ಚಿತ್ರವು 90 ರ ದಶಕದ ಪ್ರೇಮಕಥೆಯನ್ನೊಳಗೊಂಡಿದೆ. ಚಿತ್ರದಲ್ಲಿ 5 ಹಾಡುಗಳಿದ್ದು, ಈಗಾಗಲೇ ಹೊಸನಗರ, ಮಂಗಳೂರು ಹಾಗೂ ಕನಕಪುರದಲ್ಲಿ ಚಿತ್ರೀಕರಣ ಮುಗಿಸಿದೆ ಎಂದು ಚಿತ್ರ ನಿರ್ದೇಶಕ ಪರಿಪ್ರಸಾದ್ ಮಂಡ್ಯದಲ್ಲಿ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು.

ಚಿತ್ರದ ತಾರಾಗಣದಲ್ಲಿ ಹೊಸ ಪ್ರತಿಭೆಗಳಾದ ವಿಜಯ್ ಕಿರಣ್, ವೆಂಕಟ್, ರಜನಿಸ್ ಮತ್ತಿತರರಿದ್ದಾರೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!