Thursday, September 19, 2024

ಪ್ರಾಯೋಗಿಕ ಆವೃತ್ತಿ

ಕರಾಟೆ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ

ಮಂಡ್ಯ ನಗರದ ಗಾಂಧಿ ಭವನದಲ್ಲಿ ಗೋಜು-ರಿಯೋ ಕರಾಟೆ ಡೊ ಅಕಾಡೆಮಿ, ಇಂಡಿಯಾ ಟೀಮ್‌ ವಿ.ಎಲ್‌.ಎಂ.ಎ.ಎ ಕರಾಟೆ ಟ್ರೈನಿಂಗ್‌ ಸ್ಕೂಲ್‌ ನಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಕ್ತ ಕರಾಟೆ ಕಟಾ ಪಂದ್ಯಾವಳಿ ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ವಿ.ನಾಗರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಮಕ್ಕಳು ಹಲವು ಹೊರಾಂಗಣ ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸುತ್ತಿದ್ದರು. ಗೋಲಿ, ಚಿನ್ನಿದಾಂಡು, ಕಬ್ಬಡಿ ಸೇರಿದಂತೆ ಕ್ರೀಡೆಗಳಲ್ಲಿ ತೊಡಕಿಕೊಳ್ಳುವುದರ ಮೂಲಕ ದೈಹಿಕ ಹಾಗೂ ಮಾನಸಿಕವಾಗಿ ಸದೃ

ವಾಗುತ್ತಿದ್ದರು. ಆದರೇ, ಪ್ರಸ್ತುತ ಮಕ್ಕಳು ಹೊರಾಂಗಣ ಕ್ರೀಡೆಗಳಿಗೆ ಹೆಚ್ಚು ಮಹತ್ವ ನೀಡದೆ, ಕೇವಲ ಮೊಬೈಲ್‌ ಗೇಮ್‌ ಗಳಿಗೆ ಅಂಟಿಕೊಂಡಿರುವುದು ತುಂಬಾ ಆಘಾತಕಾರಿ ವಿಚಾರ. ಪೋಷಕರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.

ಕರಾಟೆ ಕ್ರೀಡೆಯು ಜಪಾನಿನ ಜನಪ್ರಿಯ ಕ್ರೀಡೆಯಾಗಿದ್ದು, ವಿಶ್ವದೆಲ್ಲೆಡೆ ತನ್ನ ಜನಪ್ರಿಯತೆಯನ್ನು ಪಡೆದಿದೆ. ಕಳೆದ 15 ವರ್ಷಗಳಿಂದ ಸತತವಾಗಿ ಮಂಡ್ಯದಲ್ಲಿ ವಿ.ಎಲ್‌.ಎಂ.ಎ.ಎ ಕರಾಟೆ ಟ್ರೈನಿಂಗ್‌ ಸ್ಕೂಲ್‌ ಮಕ್ಕಳಿಗೆ ಗುಣಮಟ್ಟದ ಕರಾಟೆಯನ್ನು ಹೇಳಿಕೊಡುವುದರ ಮೂಲಕ ಮಂಡ್ಯದಲ್ಲಿ ಜನಪ್ರಿಯವಾಗಿದ್ದು, ಪೋಷಕರ ಪ್ರಶಂಸೆಗಳಿಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷ ಎಸ್.ಕೆ.ಶಿವಪ್ರಕಾಶ್‌ ಬಾಬು, ಸ್ಪರ್ಧೆಯ ಆಯೋಜಕ ಲೋಕೇಶ್‌ ಮೊದಲಿಯಾರ್‌, ಸಂಸ್ಥೆಯ ಸದಸ್ಯ ಉಷಾ ಸಂಜಯ್‌, ಶಿವರಂಜನಿ, ವೆಂಕಟೇಶ್‌, ಮನು, ಪ್ರೇಮ್‌ ಕುಮಾರ್‌ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!