Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಹುಲ್ ಗಾಂಧಿಗೆ ಜೊತೆಯಾದ ಆರ್.ಬಿ.ಐ ಮಾಜಿ ‍ಗರ್ವನರ್ ರಘುರಾಮ್ ರಾಜನ್

ಕಾಂಗ್ರೆಸ್ ನ ಯುವ ನೇತಾರ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಬುಧವಾರ ರಾಜಸ್ಥಾನ ತಲುಪಿದೆ. ಈ ಯಾತ್ರೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(RBI)ಮಾಜಿ ಗರ್ವನರ್ ರಘುರಾಮ್ ರಾಜನ್ ಭಾಗವಹಿಸಿ ರಾಹುಲ್ ಗಾಂಧಿ ಜೊತೆಯಲ್ಲಿ ಹೆಜ್ಜೆ ಹಾಕಿದರು.

“>

 

ಇಂದು ಬೆಳಗ್ಗೆ ರಾಜಸ್ಥಾನದ  ಸವಾಯ್ ಮಾದೋಪುರ್ ಭಡೋತಿಯಿಂದ ಯಾತ್ರೆ ಆರಂಭವಾಯಿತು, ರಾಜನ್ ಸ್ವಲ್ಪ ಹೊತ್ತು ರಾಹುಲ್ ಜತೆ ಹೆಜ್ಜೆ ಹಾಕಿದರು. ರಘುರಾಮ್ ರಾಜನ್ ಅವರು ಮೋದಿ ಸರ್ಕಾರದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳ ಬಗ್ಗೆ ಈ ಹಿಂದೆ ಕಳವಳ ವ್ಯಕ್ತಪಡಿಸಿದ್ದರು. ಭಾರತದ ಭವಿಷ್ಯವು ಉದಾರವಾದಿ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ಬಲಪಡಿಸುವುದರಲ್ಲಿ ಅಡಗಿದೆ. ಏಕೆಂದರೆ ಅದು ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಅವಶ್ಯಕವಾಗಿದೆ ಎಂದು ಅವರು ಪ್ರತಿಪಾದಿಸಿದ್ದರು.

ನೋಟು ರದ್ಧತಿ ಟೀಕಿಸಿದ್ದ ರಘರಾಮ್ ರಾಜನ್ 

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ನೋಟು ರದ್ಧತಿ ನಿರ್ಧಾರವನ್ನು ರಘರಾಮ್ ರಾಜನ್ ಟೀಕಿಸಿದ್ದರು, ಆರ್ಥಿಕ ಹಿಂಜರಿತಕ್ಕೆ ಮೋದಿ ಸರ್ಕಾರದ ರಾಜಕೀಯ ಮತ್ತು ಸಾಮಾಜಿಕ ನೀತಿಗಳೇ ಕಾರಣ ದೂರಿದ್ದರು. ಅವರು ಈಗ ಭಾರತ್ ಜೋಡೋ ಯಾತ್ರೆಯಲ್ಲಿ ರಾಜನ್ ಭಾಗಿಯಾಗಿರುವುದು ವಿಶೇಷವಾಗಿದೆ. ದೇಶದ ಐಕ್ಯತೆಯ ಗುರಿಯೊಂದಿಗೆ ಕಾಂಗ್ರೆಸ್ ಹಮ್ಮಿಕೊಂಡಿರುವ ಈ ಭಾರತ್ ಜೋಡೋ ಯಾತ್ರೆಯಲ್ಲಿ ಹಲವು ಸಮಾನ ಮನಸ್ಕರು ಪಕ್ಷಬೇಧ ಮರೆತು ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ್ದಾರೆ.

ರಾಜಸ್ಥಾನದಲ್ಲಿ 10 ದಿನಕ್ಕೆ ಕಾಲಿಟ್ಟ ಯಾತ್ರೆ

ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ 10 ನೇ ದಿನಕ್ಕೆ ಕಾಲಿಟ್ಟಿದೆ. ಬಮನ್ ವಾಸ್ ವಿಧಾನಸಭಾ ಕ್ಷೇತ್ರದಲ್ಲಿರುವ ಭಡೋತಿ ಗ್ರಾಮದಿಂದ ಆರಂಭವಾದ ಈ ಯಾತ್ರೆ ಇಂದು ಸುಮಾರು 25 ಕಿಮೀ ಕ್ರಮಿಸಲಿದೆ.

ಮೊದಲ ವಿರಾಮದ ನಂತರ ಯಾಕ್ರೆ ದೌಸಾ ಜಿಲ್ಲೆಗೆ ಪ್ರವೇಶಿಸಲಿದ್ದು, ಭಗ್ದಿ ಗ್ರಾಮದಲ್ಲಿ ನಿಲುಗಡೆಯಾಗಲಿದೆ. ಭಾರತ್ ಜೋಡೋ ಯಾತ್ರೆ ಪ್ರವೇಶಿಸುತ್ತಿರುವ ಐದನೇ ಜಿಲ್ಲೆಯಾಗಲಿದೆ ದೌಸಾ. ಈ ಯಾತ್ರೆ ಮುಂದುವರಿದಂತೆ ಗೋವಿಂದ್ ದೋತಸರ, ಅಶೋಕ್ ಗೆಹ್ಲೋಟ್, ಸಚಿನ್ ಪೈಲಟ್ ಮತ್ತು ಇತರ ನಾಯಕರು ಇದರಲ್ಲಿ ಭಾಗಿಯಾಗಲಿದ್ದಾರೆ. ಭಗ್ದಿ ಗ್ರಾಮದಲ್ಲಿ ರಾಹುಲ್ ನುಕ್ಕಡ್ ಸಭಾ ಉದ್ದೇಶಿಸಿ ಮಾತನಾಡಲಿದ್ದಾರೆ.

ಕಳೆದ ಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಇಲ್ಲಿಯವರೆಗೆ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಹಾದು ರಾಜಸ್ಥಾನವನ್ನು ತಲುಪಿದೆ, ಈ ಯಾತ್ರೆಯು ಇತ್ತೀಚೆಗೆ 100 ದಿನ ಪೂರೈಸಿದ್ದು, ಅಂತಿಮವಾಗಿ ಕಾಶ್ಮೀರ ತಲುಪಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!