Thursday, September 19, 2024

ಪ್ರಾಯೋಗಿಕ ಆವೃತ್ತಿ

ಪೊಲೀಸ್ ಕಾರ್ಯ ನಿರ್ವಹಹಣೆಯಲ್ಲಿ ಗೃಹ ರಕ್ಷಕರ ಪಾತ್ರ ಅಪಾರ : ಎನ್.ಯತೀಶ್

ಗೃಹರಕ್ಷಕ ಇಲಾಖೆಯು 1946ರಲ್ಲಿ ಪ್ರಾರಂಭಗೊಂಡು ಗಲಾಟೆಗಳು, ದೊಂಬಿಗಳು ಆದಂತಹ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಗೆ ಸಹಾಯ ಮಾಡುವ ಒಂದು ಸಂಸ್ಥೆಯಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಎನ್.ಯತೀಶ್ ಹೇಳಿದರು.

ಮಂಡ್ಯ ನಗರದ ಭಾನುವಾರ ನಡೆದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗೃಹರಕ್ಷಕ ದಳದ ವತಿಯಿಂದ ನಡೆದ 60ನೇ ಉತ್ಥಾನ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಬಹಳ ನಿಷ್ಠೆಯಿಂದ ಕೆಲಸಗಳನ್ನು ಮಾಡುತ್ತಿದ್ದೀರಿ, ಇದೇ ರೀತಿ ಶಿಸ್ತು ಮತ್ತು ನಿಷ್ಠೆಯಿಂದ ಕೆಲಸ ಮುಂದುವರೆಯಿರಿ ಗೃಹ ರಕ್ಷಕರಿಗೆ ಸಲಹೆ ನೀಡಿದರು.

nudikarnataka.com

ಭಾರತ ಸರ್ಕಾರ ಗೃಹರಕ್ಷಕ ದಳದ ಪಾತ್ರವನ್ನು ಮನಗೊಂಡು ಪ್ರತಿಯೊಂದು ರಾಜ್ಯದಲ್ಲಿಯೂ ಇಂತಹ ಸಂಸ್ಥೆ ಸ್ಥಾಪನೆ ಆಗಬೇಕೆಂದು, ಪ್ರತಿ ರಾಜ್ಯದಲ್ಲಿಯೂ ಪೊಲೀಸ್ ಇಲಾಖೆಗಷ್ಟೇ ಅಲ್ಲದೆ, ಬೇರೆ ಬೇರೆ ಇಲಾಖೆಗಳಿಗೂ ಸಹಕಾರ ದೊರಕಬೇಕು ಎಂಬ ಅಂಶವನ್ನು ಮನಗೊಂಡು, ಗೃಹರಕ್ಷಕರ ಘಟಕ ಪ್ರತಿ ಜಿಲ್ಲೆ, ಪ್ರತಿ ತಾಲೂಕು, ಪ್ರತಿ ರಾಜ್ಯದಲ್ಲೂ 1962 ರಲ್ಲಿ ಪ್ರಾರಂಭಗೊಂಡಿತು ಎಂದು ಹೇಳಿದರು.

ಗೃಹ ರಕ್ಷಕದಳದವರು ಸಹ ಪೊಲೀಸ್ ನವರಂತೆಯೆ ಶ್ರಮ ವಹಿಸಿ ಕೆಲಸ ಮಾಡುತ್ತಾರೆ. ಸಮಾಜದಲ್ಲಿ ಒಳ್ಳೆಯ ಹೆಸರು ಇದೆ. ಗೃಹರಕ್ಷಕದಳದವರು ನಮ್ಮ ಜೊತೆಯಲ್ಲಿ ಭಾಗಿಯಾಗಿ ಮುಂದುವರೆದು ಇಲಾಖೆಗೆ ಒಳ್ಳೆಯ ಹೆಸರು ತಂದು ಕೊಡಲಿ ಎಂದರು.

ಗೃಹ ರಕ್ಷಕದಳದವರು ಸಹ ಪೊಲೀಸ್ ಅವರಂತೆಯೆ ಶ್ರಮ ವಹಿಸಿ ಕೆಲಸ ಮಾಡುತ್ತಾರೆ. ಸಮಾಜದಲ್ಲಿ ಗೃಹ ರಕ್ಷಕ ದಳದವರಿಗೆ ಒಳ್ಳೆಯ ಹೆಸರು ಇದೆ. ಗೃಹ ರಕ್ಷಕ ದಳದವರು ಪೊಲೀಸ್ ಇಲಾಖೆಯ ಜೊತೆಯಲ್ಲಿ ಭಾಗಿಯಾಗಿ ಮುಂದುವರೆದು, ಇಲಾಖೆಗೆ ಒಳ್ಳೆಯ ಹೆಸರು ತಂದು ಕೊಡಲಿ ಎಂದು ಎ.ಎಸ್.ಪಿ.ವೇಣುಗೋಪಾಲ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಿ.ವಿನೋದ್ ಖನ್ನಾ, ಸೀನಿಯರ್ ಪ್ಲಟೂನ್ ಕಮಾಂಡೆಂಟ್ ಯೋಗೇಶ್, ಜಿಲ್ಲಾ ಗೃಹರಕ್ಷಕ ದಳದ ಸಹಾಯಕ ಆಡಳಿತಾಧಿಕಾರಿ ಸೂರ್ಯ ನಾರಾಯಣ ಉಡುಪ, ಡೆಪ್ಯೂಟಿ ಕಮಾಂಡೆಂಟ್ ಎ.ಪುರುಷೋತ್ತಮ ರಾವ್ ಸೇರಿದಂತೆ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!