Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯಲ್ಲಿ ಸಾಮಾಜಿಕ ಪಿಡುಗು ಹೆಚ್ಚಳ : ಡಾ.ಶಿಲ್ಪಾ

ಮಂಡ್ಯ ಜಿಲ್ಲೆಯಲ್ಲಿ ಸಾಮಾಜಿಕ ಪಿಡುಗಳು ಹೆಚ್ಚಾಗಿವೆ, ಹೆಣ್ಣುಭ್ರೂಣ ಹತ್ಯೆ, ಬಾಲ್ಯವಿವಾಹ ಹೆಚ್ಚಾಗಿ ನಡೆಯುತ್ತಿವೆ ಎಂದು ಡಾ.ಶಿಲ್ಪಾ ಆತಂಕ ವ್ಯಕ್ತಪಡಿಸಿದರು.

ವಿಮೋಚನ ಮಹಿಳಾ ಸಂಘಟನೆ ಮಂಡ್ಯ ಶಾಖೆಯು ಮಂಡ್ಯ ತಾಲ್ಲೂಕಿನ ಸಾತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ, ಹೆಣ್ಣು ಭ್ರೂಣಹತ್ಯೆ ತಡೆ ಕಾಯ್ದೆ ಕುರಿತ  ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಭ್ರೂಣಹತ್ಯೆ ವಿಚಾರದಲ್ಲಿ ಮಂಡ್ಯಜಿಲ್ಲೆಯೂ ಕುಖ್ಯಾತಿಗೆ ಒಳಗಾಗಿದೆ. ಇಂತಹ ಅಪಖ್ಯಾತಿಯಿಂದ ಹೊರಬರಲು ಎಲ್ಲರಲ್ಲೂ ಜಾಗೃತಿ ಮೂಡಿಸುವುದು ಅಗತ್ಯ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೃತ್ತ ಮೇಲ್ವಿಚಾರಕಿ ಸುನೀತಾ ಮಾತನಾಡಿ, ಕರೋನಾ ಸಂದರ್ಭದಲ್ಲಿ ಹೆಚ್ಚು ಬ್ಯಾಲ ವಿವಾಹ ನಡೆದಿದ್ದವು, ಪೋಷಕರು ಕಡಿಮೆ ಖರ್ಚು ಜನ ಸೇರಲ್ಲಾ ಅಂತಹ ಮದುವೆ ಮಾಡಿದರೂ ಅಧಿಕಾರಿಗಳು ಬರುವುದಿಲ್ಲ ಎಂದು ತಿಳಿದಿದ್ದರು. ಸಾರ್ವಜನಿಕರು ಇಂತಹ ಘಟನೆಗಳು ತಮ್ಮ ಸುತ್ತಮುತ್ತ ನಡೆಯುತ್ತಿರುವುದು ಗಮನಕ್ಕೆ ಬಂದಾಗ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದರು.

ವಿಕಸನ ಸಂಸ್ಥೆ ಸಂಯೋಜಕಿ ಮಾನಸ ಮಾತನಾಡಿ, ಲಿಂಗ ತಾರತಮ್ಯ ಕುಟುಂಬದಲ್ಲಿ ಹೆಚ್ಚು ನಡೆಯುತ್ತದೆ, ಲೈಂಗಿಕ ದೌರ್ಜನ್ಯಗಳ ಸಂಖ್ಯೆ ಹೆಚ್ಚಾಗಿದೆ, ವಿದ್ಯಾರ್ಥಿಗಳು ಇಂತಹ ಘಟನೆಗಳ ನಡೆದಾಗ ಪ್ರತಿಭಟಿಸಬೇಕು ಎಂದು ತಿಳಿಸಿದರು.

ವಿಮೋಚನ ಮಹಿಳಾ ಸಂಘಟನೆಯ ಜನಾರ್ಧನ್ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತಿವೆ, ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಹಲವಾರು ಸಮಸ್ಯೆಗಳು ಕಾಡುತ್ತಿವೆ, ಮದುವೆಯಾಗಲು ಹೆಣ್ಣು ಮಕ್ಕಳ ಕೊರೆತೆ ಉಂಟಾಗಿ ಹೆಣ್ಣು ಮಕ್ಕಳ ಮೇಲೆ ಹಲವಾರು ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿವೆ ಎಂದು ತಿಳಿಸಿದರು.

ಮುಖ್ಯಶಿಕ್ಷಕ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ಹರೀಶ್, ಶಿಕ್ಷಕಿ ಇಂಪನ ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!