Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಕುಸಿದಿದೆ : ಎಚ್.ಡಿ. ಕುಮಾರಸ್ವಾಮಿ

ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು,ಜೆಡಿಎಸ್ ಪಕ್ಷಕ್ಕೆ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಅಧಿಕಾರ ನೀಡಿದರೆ ಎಲ್ಲರ ಆರೋಗ್ಯ ರಕ್ಷಣೆ ಮಾಡಲಾಗುವುದೆಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಮಿಕ್ಕೆರೆ ಗ್ರಾಮದಲ್ಲಿ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ಜನರಿಗೆ ಕಿಡ್ನಿ ತೊಂದರೆ,ಹೃದಯ ತೊಂದರೆ ಮೊದಲಾದ ದೊಡ್ಡ ಕಾಯಿಲೆ ಬಂದರೆ ಸಾಲ ಮಾಡಬೇಕಾದ ಸಂದರ್ಭವಿದೆ.ಇಲ್ಲಾ ಇರುವ ಸಣ್ಣ ಜಮೀನು ಮಾರುವ ದುಸ್ಥಿತಿ ಇದೆ.ಬಡವರ,ರೈತರ ಆರೋಗ್ಯ ರಕ್ಷಣೆಗಾಗಿ ಜೆಡಿಎಸ್ ಪಕ್ಷ ಶ್ರಮಿಸಲಿದ್ದು,ಜನತೆ ಒಂದು ಬಾರಿ ಆಶೀರ್ವದಿಸಬೇಕೆಂದರು.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 57% ಶಿಕ್ಷಕರ ಕೊರತೆಯಿದೆ.ರೈತ-ಜನಸಾಮಾನ್ಯರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುವುದು. ಪ್ರತಿ ಗ್ರಾಮದಲ್ಲಿ ಯುಕೆಜಿ ಯಿಂದ ಕಾಲೇಜುವರೆಗಿನ ಶಿಕ್ಷಣ ದೊರೆಯುವಂತೆ ಯೋಜನೆ ರೂಪಿಸಿದ್ದೇವೆ ಎಂದರು.

ಕೃಷಿಗೆ ಬ್ಯಾಂಕಿನಿಂದ ಸಾಲ ಪಡೆಯದೆ ಸರ್ಕಾರವೇ ಹಣ ನೀಡುವಂತಹ ರೈತಬಂಧು ಕಾರ್ಯಕ್ರಮ ರೂಪಿಸಿದ್ದೇವೆ.ಯುವಕ- ಯುವತಿಯರು ಸ್ವಾವಲಂಬಿ ವೃತ್ತಿ ನಡೆಸಲು ಉದ್ಯೋಗ ನೀಡಲಾಗುವುದು.ವಯಸ್ಸಾದ ವಯೋವೃದ್ದರಿಗೆ ಪಿಂಚಣಿ ಯೋಜನೆ ಸೇರಿದಂತೆ ಇಂತಹ ಹತ್ತು ಹಲವು ಯೋಜನೆ ಜಾರಿ ಮಾಡಲು ತಾವು ಸಂಪೂರ್ಣ ಐದು ವರ್ಷಗಳ ಸರ್ಕಾರಕ್ಕೆ ಮತದಾರರು ಆರ್ಶಿವಾದ ಮಾಡಲು ಕೋರುತ್ತೇನೆ ಎಂದರು‌.

ಶಾಸಕ ಅನ್ನದಾನಿ,ಜೆಡಿಎಸ್ ಮುಖಂಡರಾದ ವಿಶ್ವನಾಥ್, ಕಂಸಾಗರ ರವಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!