Tuesday, November 24, 2026

ಪ್ರಾಯೋಗಿಕ ಆವೃತ್ತಿ

ಪಂಚರತ್ನಯಾತ್ರೆಯಲ್ಲಿ ಅಸ್ವಸ್ಥರಾದ ಶಾಸಕ ಡಿ.ಸಿ.ತಮ್ಮಣ್ಣ

ಮದ್ದೂರಿನಲ್ಲಿ ನಡೆದ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಡಿ.ಸಿ.ತಮ್ಮಣ್ಣ ಅವರು ಬಿಸಿಲಿನ ಝಳಕ್ಕೆ ನಲುಗಿ ಹೆಚ್.ಡಿ.ಕೆ ಭಾಷಣ ಮಾಡುತ್ತಿದ್ದ ವೇಳೆಯಲ್ಲೇ ಕುಸಿದು ಬಿದ್ದರು. ಇದನ್ನು ಗಮನಿಸಿದ ಪುತ್ರಿ ಸೌಮ್ಯರಮೇಶ್ ಆತಂಕಗೊಂಡು ತಂದೆಯನ್ನು ಸಂತೈಸಲು ಮುಂದಾದರು.

ಸ್ಥಳದಲ್ಲಿದ್ದ ವೈದ್ಯರೊಬ್ಬರು ಬಂದು ಪರೀಕ್ಷಿಸಿದರು. ಸಕ್ಕರೆ ಅಂಶ ಕ್ಷೀಣಿಸಿದ ಪರಿಣಾಮ ಅಸ್ವಸ್ಥರಾಗಿದ್ದು ಆತಂಕ ಪಡುವ ಅಗತ್ಯವಿಲ್ಲವೆಂದು ಕುಮಾರಸ್ವಾಮಿ ಜನರಲ್ಲಿ ಧೈರ್ಯ ತುಂಬಿದರು. ಅಷ್ಟರಲ್ಲಿ ತಮ್ಮಣ್ಣ ಚೇತರಿಸಿಕೊಂಡರು.

ಅದ್ಧೂರಿ ಸ್ವಾಗತ 

ರಾಜ್ಯಾದ್ಯಂತ ಸಂಚರಿಸುತ್ತಿರುವ ಪಂಚರತ್ನ ರಥಯಾತ್ರೆ ಇಂದು ಮದ್ದೂರು ತಾಲ್ಲೂಕಿನ ಗಡಿಗ್ರಾಮ ಮೆಳ್ಳಹಳ್ಳಿ ಬಳಿ ಆಗಮಿಸಿದಾಗ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ದಳಪತಿಗಳನ್ನು ವಿಜೃಂಭಣೆಯಿಂದ ಸ್ವಾಗತಿಸಿದರು.

ಡೆಕ್ಕನ್ ಏರ್ವೇಸ್ ಸಂಸ್ಥೆಯ ಹೆಲಿಕ್ಯಾಪ್ಟರ್ ಮೂಲಕ ಹೂಮಳೆ ಸುರಿಸುವ ಮೂಲಕ ಜೈಕಾರ ಹಾಕಿ, ಪಕ್ಷದ ಭಾವುಟ ಹಿಡಿದು ಸಂಭ್ರಮದಿಂದ ಪಂಚರತ್ನ ರಥಯಾತ್ರೆಯನ್ನು ಬರಮಾಡಿಕೊಂಡರು. ಸಾವಿರಾರು ಯುವಕರ ಬೈಕ್ ರ್ಯಾಲಿ ಮೂಲಕ ಭಾರತೀನಗರದ ಭಾರತೀಶಿಕ್ಷಣ ಸಂಸ್ಥೆ ಬಳಿಗೆ ಆಗಮಿಸಿದ ರಥಯಾತ್ರೆಯನ್ನು ಅಪಾರ ಜನಸ್ತೋಮ ಸ್ವಾಗತಿಸಿ ಜೆಸಿಬಿ ಮೂಲಕ ರಥಯಾತ್ರೆಯಲ್ಲಿದ್ದ ಗಣ್ಯರಿಗೆ ಹೂವಿನ ಮಳೆಗೆರೆದು ಸಂಭ್ರಮಿಸಿದರು.
ಪೂಜಾಕುಣಿತ, ತಮಟೆ, ನಗಾರಿ ಹಾಗೂ ಡೊಳ್ಳುಕುಣಿತದ ಮೂಲಕ ಪಂಚರತ್ನ ರಥಯಾತ್ರೆಯನ್ನು ಸ್ವಾಗತಿಸಲಾಯಿತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ