Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೌದ್ಧಿಕ ವಿಕಾಸಕ್ಕೆ ಪಠ್ಯೇತರ ಚಟುವಟಿಕೆ ಅಗತ್ಯ : ಅರವಿಂದ್

ಪ್ರಸ್ತುತ ದಿನಗಳಲ್ಲಿ ಆಧುನಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ, ವಿದ್ಯಾರ್ಥಿಗಳ ಬೌದ್ದಿಕ ವಿಕಾಸಕ್ಕೆ ಕ್ರೀಡೆ, ಸಾಂಸ್ಕೃತಿಕ ಕಲೆ, ಸೃಜನಾತ್ಮಕ ಕೌಶಲತೆಗಳು ಅಗತ್ಯ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.

ಮಂಡ್ಯ ನಗರದಲ್ಲಿರುವ ಕಲಾಮಂದಿರದಲ್ಲಿ ಅಮೇಜಿಂಗ್ ನೃತ್ಯ ಶಾಲೆ ಆಯೋಜಿಸಿದ್ದ ವಾರ್ಷಿಕೋತ್ಸವ ಮತ್ತು ಅಭಿನಂದನೆ ಹಾಗೂ ನೃತ್ಯ ಪ್ರದರ್ಶನ ಸಮಾರಂಭವನ್ನು ಗಣ್ಯರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ಮಂಡ್ಯ ನಗರದಲ್ಲಿ ನೃತ್ಯ ತರಬೇತಿದಾರ ನಿಶ್ಚಯ್ ಉತ್ತಮ ನೃತ್ಯ ಶಿಕ್ಷಕ, ಅಂತರಾಷ್ಟ್ರೀಯ ಮಟ್ಟದಲ್ಲಿ ನೃತ್ಯ ಪಟುಗಳನ್ನು ಪರಿಚಯಿಸಿ ಜಿಲ್ಲೆಗೆ ಕೀರ್ತಿ ತರುತ್ತಿದ್ದಾರೆ, ಇಂತಹ ಪ್ರತಿಭೆಗಳು ಜಿಲ್ಲೆಗೆ ಅವಶ್ಯವಿದೆ, ಸಾಧನೆ ಮಾಡುವವರಿಗೆ ಮಾರ್ಗದರ್ಶಕರು ಅತ್ಯವಶ್ಯಕ ಎಂದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಡಾ.ಹೆಚ್.ಕೃಷ್ಣ ಮಾತನಾಡಿ, ಸಾಂಸ್ಕೃತಿಕ, ಕ್ರೀಡೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ತುಂಬ ಶಾಂತಿ, ನೆಮ್ಮದಿಯಿಂದ ಇರುತ್ತಾರೆ, ಸದಾ ಹಸನ್ಮುಖಿಗಳಾಗಿ ಉಲ್ಲಾಸದಿಂದ ಇರುತ್ತಾರೆ, ಹಾಗಾಗಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಅಮೇಜಿಂಗ್ ನೃತ್ಯ ಶಾಲೆಯ ಅಧ್ಯಕ್ಷ ನಿಶ್ಚಯ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವಿಕುಮಾರ್ ಚಾಮಲಾಪುರ, ಕಲಾಪೋಷಕ ಬಿ.ಎಂ.ಅಪ್ಪಾಜಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್‌ಜಯರಾಂ, ಪಶುವೈದ್ಯಾಧಿಕಾರಿ ಡಾ.ಸುರೇಶ್, ಬೆಳಕು ಲಯನ್ಸ್ ಸಂಸ್ಥೆ ಅಧ್ಯಕ್ಷ ಶೇಖರ್ ಹೊಸಹಳ್ಳಿ, ಸಾಹಿತ್ಯ ಲಯನ್ ಸಂಸ್ಥೆ ಅಧ್ಯಕ್ಷ ಎಚ್.ಕೆ.ಅನಿಲ್, ಕನ್ನಡಸೇನೆ ಕರ್ನಾಟಕ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷ ಮಂಜುನಾಥ್, ಲಯನ್ ಪುನೀತ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!