Thursday, November 19, 2026

ಪ್ರಾಯೋಗಿಕ ಆವೃತ್ತಿ

ಕದಲೂರು ಉದಯ್ ಬಂದು ನೋಡಲಿ:ಹರಳಕೆರೆ ರೋಗಿಯ ಅಳಲು

ಮದ್ದೂರು ತಾಲ್ಲೂಕಿನ ಹರಳಕೆರೆ‌ ಗ್ರಾಮದಲ್ಲಿ ರೋಗಿಯೊಬ್ಬ ತಾನು ಉದಯಣ್ಣನ ಅಭಿಮಾನಿ, ನಾನು ಅವರನ್ನು ನಾಳೆ ಸಂಜೆ ಒಳಗೆ ನೋಡಬೇಕು, ಉದಯ್ ಅಣ್ಣಾ ಬಂದು ಭೇಟಿ ಮಾಡಬೇಕು ಎಂದು ಫೇಸ್ ಬುಕ್ ನಲ್ಲಿ ಅಳಲು ತೋಡಿ ಕೊಂಡಿದ್ದಾನೆ.ಈ ವಿಡಿಯೋ ಫೇಸ್ ಬುಕ್ ನಲ್ಲಿ‌ ಹೆಚ್ಚು ವೈರಲ್ ಅಗುತ್ತಿದೆ.

ಹರಳಕೆರೆ ಗ್ರಾಮದ ರೋಗಪೀಡಿತ ವ್ಯಕ್ತಿ ತಾನು ಮಾತಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಗೊಳಿಸಿದ್ದಾನೆ. ಈ ಮೂಲಕ‌ ತನ್ನ ಖಾಯಿಲೆಗೆ ವೈದ್ಯಕೀಯ ನೆರವು ಕೇಳಲೋ ಇಲ್ಲಾ, ತನ್ನ ಕುಟುಂಬಕ್ಕೆ ಜೀವನಾಧಾರ ಕಲ್ಪಿಸಿ ಕೊಡುವಂತೆ ಕೋರಿಕೊಳ್ಳಲೋ ಅಥವಾ ತನ್ನಂತಹ ಅನೇಕ ರೋಗಪೀಡಿತ ಜನರ ಕಣ್ಣೀರು ಒರೆಸುತ್ತಿರುವ ಕದಲೂರು ಉದಯ್ ಅವರನ್ನು ಭೇಟಿ ಮಾಡುವ ಹಂಬಲವೋ.

ಏನೇ ಇರಲಿ ಈ ರೋಗಿಯ ಭೇಟಿ ಮಾಡಿ ಆತನ ಸಂಕಷ್ಟ ಕೇಳಿ ಬರಲು ನುಡಿ ಕರ್ನಾಟಕ. ಕಾಮ್ ಈ ವರದಿ ಮೂಲಕ‌ ಕದಲೂರು ಉದಯ್ ಅವರ ಗಮನ ಸೆಳೆಯುತ್ತಿದೆ.

ಇಂದು ಮದ್ದೂರು ತಾಲ್ಲೂಕಿನಲ್ಲಿರುವ ಬಹುತೇಕ ರೋಗಪೀಡಿತರಿಗೆ ಕದಲೂರು ಉದಯ್ ಅವರು ನೆರವಿನ ಹಸ್ತ ಚಾಚುತ್ತಾರೆ ಎಂಬ ವಿಷಯ ಜನ ಜನಿತವಾಗಿರುವುದು, ಗುಡಿ ಗೋಪುರ ಕಟ್ಟುವವರು, ಸಮುಧಾಯ ಭವನ, ಶಾಲೆ ಕಟ್ಟಡ, ನೀರಿನ ವ್ಯವಸ್ಥೆ ಇಲ್ಲದವರು, ಧರ್ಮಕ್ಷೇತ್ರಗಳ ದರ್ಶನ ಬಯಸುವವರು, ಹೀಗೆ ನಾನಾ ರೀತಿಯ ನೆರವು ಬಯಸುವ ಜನರೆಲ್ಲರ ಮನಸ್ಸಿಗೆ ಥಟ್ಟನೆ ನೆನಪಾಗುವುದು ಕದಲೂರು ಉದಯ್.ಇವೆಲ್ಲ ಹರಳಕೆರೆಯ ಈ ರೋಗಪೀಡಿತ ವ್ಯಕ್ತಿಗೆ ಪ್ರೇರಣೆ ನೀಡಿರಬಹುದು.

ಈ ಕ್ಷೇತ್ರದಲ್ಲಿ ಎಂಪಿ, ಎಂಎಲ್ಎ, ಎಂಎಲ್ಸಿಗಳು ಇದ್ದರೂ ಹೀಗೇಕೇ? ಎಂದು ವಿಡಿಯೊ ನೋಡಿ ಜನ ಚರ್ಚೆ ಮಾಡುತ್ತಿದ್ದಾರೆ. ಸ್ವತಃ ಉದಯ್ ಅವರೇ ನಾನು ಸ್ವಂತ ಹಣದಿಂದ ಸಮಾಜ ಸೇವೆ ಮಾಡುತ್ತಿದ್ದೇನೆ. ಈ ಸೇವೆಯ ವಿಸ್ತಾರಕ್ಕೆ ನನಗೆ ಅಧಿಕಾರ ಬೇಕು.ಹಾಗಾಗಿ ಅವಕಾಶ ಕೊಡಿ ಎನ್ನುತ್ತಿದ್ದಾರೆ.

ಅಂದರೆ ಯಾವುದು ಮೊದಲು? ಅಧಿಕಾರವಾ? ಸಮಾಜ ಸೇವೆಯ ಮನಸ್ಸಾ? ಜನರ ನೋವಿಗೆ ಸ್ಪಂದಿಸುವುದಾ? ಹಾಲಿ ಅಧಿಕಾರದಲ್ಲಿರುವವರು ನೊಂದವರಿಗೆ ಆಶಾಕಿರಣವಾಗಿ ಗೋಚರಿಸುತ್ತಿಲ್ಲವೇಕೆ? ಹಾಲಿ ಇರುವ ವ್ಯವಸ್ಥೆಯಡಿ ಇಂತಹ ನೊಂದವರ ನೆರವಿಗೆ ನಿಲ್ಲುವ ಅವಕಾಶಗಳು ಜನಪ್ರತಿನಿಧಿಗಳಿಗೆ ಇಲ್ಲವೇ? ಎಲ್ಲಾ ಜನರ ಭದ್ರತೆ, ಸುರಕ್ಷತೆ, ಜೀವನ‌ಮಾರ್ಗ, ಸೃಜನೆ ಮಾಡುವುದು, ಘನತೆ ಮತ್ತು ಸ್ವಾಭಿಮಾಮದ ಬದುಕು ಕಟ್ಟಿಕೊಡುವುದು ಸರ್ಕಾರಗಳ ಸರ್ಕಾರವನ್ನು ಪ್ರತಿನಿಧಿಸುವ ಜನ ಪ್ರತಿನಿಧಿಗಳ ಜವಾಬ್ದಾರಿ ಅಲ್ಲವೇ?

ಯುವಜನರು, ವಿಚಾರವಂತರು ಕನಿಷ್ಠ ಚುನಾವಣೆಯ ಹೊತ್ತಿನಲ್ಲಾದರೂ ಇಂತಹ ಚರ್ಚೆಗೆ ಚಾಲನೆ ನೀಡಿ ನಿರಂತರ ಗೊಳಿಸಬಾರದೇಕೆ?  ಜನಪ್ರತಿನಿಧಿಗಳು ಇಂತಹ  ಅಸಹಾಯಕರ ನಡುವೆ ನೆರವಿಗೆ ಬರದಿದ್ದರೆ, ಪ್ರಜಾಪ್ರಭುತ್ವದ ಆಶಯ ಉಳಿಯಬಲ್ಲದೇ…?

ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಬೇಕಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ