Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೇಂದ್ರ ಶಿಕ್ಷಣ ಬಜೆಟ್ | ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವ ಪ್ರಯತ್ನಗಳನ್ನು ಗಾಳಿಗೆ ತೂರಲಾಗಿದೆ! : AIDSO

2022-23ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಶಿಕ್ಷಣಕ್ಕಾಗಿ ಒಟ್ಟು ವೆಚ್ಚದ ಶೇಕಡಾವಾರು ಬಜೆಟ್ ಹಂಚಿಕೆಯು ಕಳೆದ ಏಳು ವರ್ಷಗಳಲ್ಲಿ 10.4% ರಿಂದ 9.5%ಕ್ಕೆ ಇಳಿದಿದೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ನ ಮಂಡ್ಯ ಜಿಲ್ಲಾ ಸಂಚಾಲಕಿ ಚಂದ್ರಕಲಾ ದೂರಿದ್ದಾರೆ.

ಶಿಕ್ಷಣಕ್ಕಾಗಿ ಒಟ್ಟು ವಿನಿಯೋಗ 1,12,000 ಕೋಟಿ ಇದೆ. ಇದು ಕಳೆದ ವರ್ಷಕ್ಕಿಂತ ಹೆಚ್ಚಿರಬಹುದು, ಆದರೆ ಇದು ಒಟ್ಟು ಬಜೆಟ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಾತ್ರ ಎಂಬುದನ್ನು ಮರೆಯಬಾರದು. ಅವರದೇ ನೀತಿಯಾದ NEP 2020ಯು ಶಿಫಾರಸು ಮಾಡಿರುವ ‘ ಶಿಕ್ಷಣಕ್ಕೆ GDP ಯ 6% ನಷ್ಟು ಸಹ ಈ ಬಜೆಟ್ ಸಮೀಪಿಸಿಲ್ಲ ಎಂಬುದು ವಾಸ್ತವವಾಗಿದೆ.

ಕರ್ನಾಟಕವೊಂದರಲ್ಲೇ 37 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೋಗುತ್ತಿಲ್ಲ. ದೇಶದಾದ್ಯಂತ ಅವರ ಸಂಖ್ಯೆ ಕೋಟಿಗಟ್ಟಲೆ ಇದೆ. ಹೀಗಿದ್ದರೂ, ಶೈಕ್ಷಣಿಕ ಶುಲ್ಕವನ್ನು ಕಡಿಮೆ ಮಾಡುವ ಮೂಲಕ ಅಥವಾ ಅತಿರೇಕದ ವ್ಯಾಪಾರೀಕರಣವನ್ನು ತಡೆಗಟ್ಟುವ ಮೂಲಕ ದಾಖಲಾತಿಯನ್ನು ಹೆಚ್ಚಿಸಲು ಯಾವುದೇ ಪ್ರಯತ್ನವಿಲ್ಲ ಮತ್ತು ಅದರ ಕುರಿತು ಯಾವುದೇ ನಿರ್ದಿಷ್ಟ ಕ್ರಮಗಳು ಇಲ್ಲ!. ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಲು ಯಾವುದೇ ನಿರ್ದಿಷ್ಟ ನಿಧಿಗಳಿಲ್ಲ. ಬದಲಿಗೆ, ಸರ್ಕಾರದ ಅಧ್ಯಯನವೇ ಹೇಳಿದಂತೆ, ಕಲಿಕೆಯ ನಷ್ಟಕ್ಕೆ ಕಾರಣವಾದ ಡಿಜಿಟಲೀಕರಣವನ್ನು ಶೈಕ್ಷಣಿಕ ಕಲಿಕೆಯಲ್ಲಿ ಸಂಪೂರ್ಣ ತುರುಕಿಸುವ ಶತ ಪ್ರಯತ್ನ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಜೆಟ್‌ನಿಂದ ಯಾವುದೇ ಘೋಷಣೆ ನಡೆದಿಲ್ಲ! ಇದುವರೆಗಿನ ಎಲ್ಲಾ ಬಜೆಟ್‌ಗಳಂತೆ ಪ್ರಸ್ತುತ ಬಜೆಟ್ ನಲ್ಲಿಯೂ ಸಹ ಶಿಕ್ಷಣವನ್ನು ನಿರ್ಲಕ್ಷಿಸಲಾಗಿದೆ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವ ಮತ್ತು ಖಾಸಗೀಕರಣಕ್ಕೆ ಕಡಿವಾಣ ಹಾಕುವ ಪ್ರಯತ್ನಗಳನ್ನು ಗಾಳಿಗೆ ತೂರಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!