Friday, September 20, 2024

ಪ್ರಾಯೋಗಿಕ ಆವೃತ್ತಿ

ಅದ್ದೂರಿಯಿಂದ ನಡೆದ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ತೆಪ್ಪೋತ್ಸವ

ಕೆ.ಆರ್.ಪೇಟೆ ತಾಲೂಕಿನ ಜೀವನದಿ ಹೇಮಾವತಿ ನದಿ ದಂಡೆಯಲ್ಲಿರುವ ಭೃಗು ಮಹರ್ಷಿಗಳ ತಪೋಭೂಮಿ ಹೇಮಗಿರಿಯ ದನಗಳ ಜಾತ್ರೆಯ ಅಂಗವಾಗಿ ನಡೆಯುವ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯವರ ತೆಪ್ಪೋತ್ಸವವು ಬುಧವಾರ ರಾತ್ರಿ ಹೇಮಾವತಿ ನದಿಯಲ್ಲಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.

ಸಚಿವರಾದ ಡಾ.ನಾರಾಯಣಗೌಡ, ಮಂಡ್ಯ ಜಿಲ್ಲಾಧಿಕಾರಿ ಡಾ.ಗೋಪಾಲಕೃಷ್ಣ ಹಾಗೂ ತಹಶೀಲ್ದಾರ್ ಎಂ.ವಿ.ರೂಪ, ಅವರು ಉತ್ಸವಮೂರ್ತಿಗಳಿಗೆ ಪೂಜೆ ಸಲ್ಲಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.

ಹೇಮಾವತಿ ನದಿ ದಡದಲ್ಲಿ ನಿರ್ಮಿಸಲಾಗಿದ್ದ ತೆಪ್ಪೋತ್ಸವಕ್ಕೆ ಬಣ್ಣಬಣ್ಣದ ವಿದ್ಯುತ್ ದೀಪಗಳು ಹಾಗೂ 58 ಬಗೆಯ ವಿವಿಧ ಬಗೆಯ ಹೂವುಗಳಿಂದ ಅಲಂಕೃತವಾಗಿದ್ದ ತೆಪ್ಪದಲ್ಲಿ ವಿರಾಜಮಾನವಾಗಿದ್ಧ ಶ್ರೀಕಲ್ಯಾಣವೆಂಕಟರಮಣಸ್ವಾಮಿ, ಶ್ರೀಪದ್ಮಾವತಿ ಹಾಗೂ ಶ್ರೀ ಮಹಾಲಕ್ಷ್ಮಿ ಅಮ್ಮನವರ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ನಂತರ ಬಾಣಬಿರುಸುಗಳ ಪ್ರದರ್ಶನದೊಂದಿಗೆ ತೆಪ್ಪೋತ್ಸವ ಆರಂಭವಾಯಿತು.

ಬಂಡಿಹೊಳೆ, ನಾಟನಹಳ್ಳಿ, ಬೀರವಳ್ಳಿ ಸಾಕ್ಷೀಬೀಡು, ಮಂದಗೆರೆ, ಕುಪ್ಪಳ್ಳಿ, ಮಾಕವಳ್ಳಿ, ವಡ್ಡರಹಳ್ಳಿ ಗ್ರಾಮಗಳ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾಧಿಗಳು ತೆಪ್ಪೋತ್ಸವದಲ್ಲಿ ವಿರಾಜಮಾರನಾಗಿದ್ದ ಕಲ್ಯಾಣ ವೆಂಕಟರಮಣ ಸ್ವಾಮಿಗೆ ಹಾಗೂ ಗಂಗಾಮಾತೆಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.

ತೆಪ್ಪೋತ್ಸವ ನದಿಯಲ್ಲಿ ಆರಂಭವಾದ ಕ್ಷಣ ಮುಗಿಯುವರೆವಿಗೂ ಉಘೇ ವೆಂಕಟರಮಣ, ಉಘೇ ಗೋವಿಂದ, ಉಘೇ ಶ್ರೀನಿವಾಸ ಉಘೇ ಉಘೇ ಎಂಬ ಜಯಘೋಷಗಳು ಭಕ್ತಾಧಿಗಳಿಂದ ಮುಗಿಲು ಮುಟ್ಟಿದ್ದವು. ತಾಲೂಕು ರಾಜಸ್ವ ನಿರೀಕ್ಷಕ ಚಂದ್ರಕಲಾ, ಮುಜರಾಯಿ ಇಲಾಖೆಯ ವಿಷಯ ನಿರ್ವಾಹಕಿ ಪೂರ್ಣಿಮಾ, ಶೇಷಾದ್ರಿ, ಮಾಜಿ ಶಾಸಕ ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಸಮಾಜ ಸೇವಕರಾದ ವಿಜಯ್‌ರಾಮೇಗೌಡ, ಆಲಂಬಾಡಿಕಾವಲು ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಡಿ.ಪಿ.ಪರಮೇಶ್, ದೊದ್ದನಕಟ್ಟೆ ಪಾಂಡು, ಕಟ್ಟೆಕ್ಯಾತನಹಳ್ಳಿ ಪಾಪಣ್ಣ, ಬಂಡಿಹೊಳೆ ಅಶೋಕ್‌ಕುಮಾರ್, ಬಿ.ಜಯರಾಮೇಗೌಡ, ಗ್ರಾ.ಪಂ. ಅಧ್ಯಕ್ಷ ಸುನೀಲ್, ಪಿಡಿಓ ಶಿವಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಕಾಯಿಮಂಜೇಗೌಡ, ಶಿವಕುಮಾರ್, ಬಿ.ಬಿ.ಕಾವಲು ಮೋಹನ್, ಲಕ್ಷಿö್ಮÃಪುರ ಅಕ್ಕಿಮಂಜು, ಕುಮಾರಸ್ವಾಮಿ, ದಶರಥ, ರಂಗನಾಥ, ದೇವರಸೇಗೌಡ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ತೆಪ್ಪೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಗ್ರೇಡ್-೨ ತಹಶೀಲ್ದಾರ್ ವಿಖಾರ್ ಅಹಮದ್, ಶಿರಸ್ತೇದಾರ್ ರವಿ, ಪ್ರಧಾನ ಅರ್ಚಕ ರಾಮಭಟ್ಟ, ವೇದಬ್ರಹ್ಮ ಗೋಪಾಲಕೃಷ್ಣ ಅವಧಾನಿಗಳು, ತಾಲ್ಲೂಕು ಅರ್ಚಕರ ಸಂಘದ ಅಧ್ಯಕ್ಷ ಕೆ.ಎಸ್.ರವಿಚಂದ್ರ, ಕಾರ್ಯದರ್ಶಿ ರಂಗರಾಜು, ಉಪತಹಸೀಲ್ದಾರ್ ಲಕ್ಷ್ಮಿಕಾಂತ್, ರಾಜಸ್ವ ನಿರೀಕ್ಷಕರಾದ ಚಂದ್ರಕಲಾ, ನರೇಂದ್ರ, ಪುರುಷೋತ್ತಮ್, ರಾಜಮೂರ್ತಿ, ಹರೀಶ್, ಗೋಪಾಲಕೃಷ್ಣ, ಬಂಡಿಹೊಳೆ ವೃತ್ತದ ಗ್ರಾಮಲೆಕ್ಕಾಧಿಕಾರಿ ಪೂಜಾಗೌಡ, ಅಗ್ರಹಾರಬಾಚಹಳ್ಳಿ-ಹಿರಿಕಳಲೆ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಸ್ಪೂರ್ತಿ, ಸುನಿಲ್, ಸಚಿವ ನಾರಾಯಣಗೌಡರ ಆಪ್ತಸಹಾಯಕ ದಯಾನಂದ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!