Thursday, September 19, 2024

ಪ್ರಾಯೋಗಿಕ ಆವೃತ್ತಿ

ಕ್ಯಾನ್ಸರ್ ಜಾಗೃತಿ – ಜಂತುಹುಳು ನಿರ್ಮೂಲನಾ ದಿನಾಚರಣೆ

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಆರಕ್ಷಕ ಇಲಾಖೆಯ ಸಂಯುಕ್ತಶ್ರಯದಲ್ಲಿ ಕ್ಯಾನ್ಸರ್ ಜಾಗೃತಿ ಮತ್ತು ಜಂತುಹುಳು ನಿವಾರಣಾ ದಿನ ಹಾಗೂ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಆರೋಗ್ಯ ಮೇಳ ಮತ್ತು ಸೈಕಲ್ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಎನ್ ಧನಂಜಯ ಮಾತನಾಡಿ, ಆರೋಗ್ಯ ಇಲಾಖೆ ವತಿಯಿಂದ ಫೆಬ್ರವರಿ 14 ರಂದು ಕ್ಯಾನ್ಸರ್ ಜಾಗೃತಿ ಮತ್ತು ಜಂತುಹುಳು ನಿರ್ಮೂಲನಾ ದಿನಾಚರಣೆ ಅ೦ಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಸೈಕಲ್ ಜಾಥಾ ಮೂಲಕ ಜನ ಜಾಗೃತಿಯನ್ನು ಹಮ್ಮಿಕೊಂಡಿದ್ದು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿವಿಧ ಐ.ಇ.ಸಿ ಪರಿಕರಗಳ ಸಹಾಯದಿಂದ ಜಾಗೃತಿ ಮೂಡಿಸಲಾಗುವುದು. ಆರೋಗ್ಯ ಮೇಳವನ್ನು ಸಾರ್ವಜನಿಕರು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಳ್ಳಬೆಕೇಂದು ತಿಳಿಸಿದರು.

ಪ್ರತೀ ತಿಂಗಳ 14 ನೇ ತಾರೀಕಿನಂದು ಈ ಆರೋಗ್ಯ ಮೇಳ ಕಾರ್ಯಕ್ರಮವು ಎಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ನಡೆಯಲಿದೆ. ಪ್ರತಿ ತಿಂಗಳು ಒನ್ನೊಂದು ವಿಷಯಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತೇವೆ, ಈ ತಿಂಗಳು ಕ್ಯಾನ್ಸರ್ ಹಾಗೂ ಜಂತುಹಳುವಿನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಎಂದರು.

‘ಸ್ವಾಸ್ಥ್ಯ ಮನ, ಸ್ವಚ್ಛ ಮನೆ’ ಎಂಬ ಘೋಷವಾಕ್ಯ ಅನುಸಾರ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಎಲ್ಲಾ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ತಿಳುವಳಿಕೆ ನೀಡುವುದು ಮತ್ತು ಆರೋಗ್ಯ ಮತ್ತು ಕ್ಷೇಮಕೇಂದ್ರಗಳಲ್ಲಿ ದೊರಕುವ ಆರೋಗ್ಯ ಸೇವೆಗಳ ಬಗ್ಗೆ ತಿಳಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 267 ಆರೋಗ್ಯ ಕ್ಷೇಮ ಕೇಂದ್ರ ತೆರೆದಿದ್ದೇವೆ. 3 ರಿಂದ 4 ಸಾವಿರ ಜನಸಂಖ್ಯೆಗೆ ಒಬ್ಬರು ಸಮುದಾಯ ಆರೋಗ್ಯ ಅಧಿಕಾರಿಯನ್ನು ನೇಮಕ ಮಾಡಿದ್ದೇವೆ, ಸಾರ್ವಜನಿಕರಿಗೆ ಗ್ರಾಮೀಣ ಮಟ್ಟದಲ್ಲಿ ಅವರ ಮನೆ ಬಾಗಿಲಿಗೆ ಔಷಧಿ ದೊರೆಯುವ ಹಾಗೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು ಎಂದರು.

ಕ್ಯಾನ್ಸರ್ ಅತಿ ಬೇಗ ಹರಡುತ್ತಿರುವ ಕಾಯಿಲೆ. ಆದ್ದರಿಂದ ಕ್ಯಾನ್ಸರ್ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಹಾಗೂ ನಮ್ಮ ರಕ್ತ ಹೀನತೆ ಕಾಡುವುದಕ್ಕೆಜಂತುಹುಳು ಪ್ರಮುಖ ಕಾರಣ ಆದ್ದರಿಂದ ಸಾರ್ವಜನಿಕರು ಸ್ವಚ್ಚತೆಯನ್ನು ಕಾಪಾಡಬೇಕು. 6 ತಿಂಗಳಿಗೊಮ್ಮ ಜಂತು ಹುಳಿವಿನ ಮಾತ್ರೆಯನ್ನು ತೆಗೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್, ಆರೋಗ್ಯ ಶಿಕ್ಷಣಾಧಿಕಾರಿ ವೇಣುಗೋಪಾಲ್, ತಂಬಾಕು ನಿಯಂತ್ರಣ ಅಧಿಕಾರಿ ತಿಮ್ಮರಾಜು, ಆರೋಗ್ಯ ಸಿಬ್ಬಂದಿ ವರ್ಗದವರಾದ ಶಿವಸ್ವಾಮಿ, ಚಿಕ್ಕಣ್ಣ ಸೇರಿದಂತೆ ಇನ್ನಿತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!