Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರೈತ ಚಲನಚಿತ್ರೋತ್ಸವ

ಜಿ.ಎಸ್.ಮೀಡಿಯಾ ಸಂಸ್ಥೆ ಮತ್ತು ಹಸಿರು ಭೂಮಿ ಟ್ರಸ್ಟ್ (ರಿ) ಮಂಡ್ಯ ಇವರ ಸಹಕಾರದಲ್ಲಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ರೈತ ಚಲನಚಿತ್ರೋತ್ಸವವನ್ನು ಮಾರ್ಚ್ 03-03-2023ರಿಂದ 3 ವಾರಗಳ ರವರೆಗೆ ನಡೆಸಲು ನಿರ್ಧರಿಸಿದ್ದೇವೆ ಎಂದು ಹಸಿರು ಭೂಮಿ ಟ್ರಸ್ಟ್ ನ ಅಧ್ಯಕ್ಷರಾದ ನರಹಳ್ಳಿ ಜ್ಞಾನೇಶ್ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಚಿತ್ರೋತ್ಸವದಲ್ಲಿ 7 ವಿಭಿನ್ನ ಗ್ರಾಮೀಣ ಸೊಗಡಿನ ಚಿತ್ರಗಳು ಪ್ರತಿದಿನ ಒಂದರಂತೆ ಪ್ರದರ್ಶನಗೊಳ್ಳಲಿವೆ. ಮೊದಲ ವಾರ ಮಂಡ್ಯ ಮತ್ತು ಪಾಂಡವಪುರ 2ನೇ ವಾರ ಕೆ.ಆರ್.ಪೇಟೆ, ಶ್ರೀರಂಪಟ್ಟಣ, ಮಳವಳ್ಳಿ, 3ನೇ ವಾರ ಮದ್ದೂರು ಮತ್ತು ನಾಗಮಂಗಲದಲ್ಲಿ ಚಿತ್ರೋತ್ಸವ ನಡೆಯಲಿದೆ ಎಂದರು.

ಮಾರ್ಚ್ 3ರ ಶುಕ್ರವಾರ ಬೆಳಿಗ್ಗೆ 9-30ಕ್ಕೆ ಮಹಾವೀರ ಚಿತ್ರಮಂದಿರದಲ್ಲಿ ಚಿತ್ರೋತ್ಸವವನ್ನು   ರೇಷ್ಮೆ ಮತ್ತು ಯುವ ಸಬಲೀಕರಣ ಸಚಿವರಾದ  ಕೆ.ಸಿ.ನಾರಾಯಣಗೌಡರು  ಉದ್ಘಾಟಿಸಲಿದ್ದು,  ಶಾಸಕರಾದ ಎಂ.ಶ್ರೀನಿವಾಸ್‌ ರವರು ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅಥಿತಿಗಳಾಗಿ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಸಿ.ಪಿ.ಉಮೇಶ್,  ಬಿ.ಆರ್.ರಾಮಚಂದ್ರ ಅಧ್ಯಕ್ಷರು ಮನ್‌ಮುಲ್, ಆಶೋಕ್‌ಜಯರಾಮ್‌  ನಿರ್ದೇಶಕರು ರಾಜ್ಯ ಒಕ್ಕಲಿಗರ ಸಂಘ, ಡಾ. ಕೃಷ್ಣ,  ಅಧ್ಯಕ್ಷರು ಪ್ರಚಾರ ಸಮಿತಿ ಜಿಲ್ಲಾ ಕಾಂಗ್ರೇಸ್‌ ಮಂಡ್ಯ ಹಾಗೂ ಚಲನಚಿತ್ರ ನಿರ್ದೇಶಕರಾದ ಡಾ.ವಿ.ನಾಗೇಂದ್ರ ಪ್ರಸಾದ್, ಎ.ಪಿ.ಅರ್ಜುನ್, ಕಾರಂಜಿ ಶ್ರೀಧರ್, ಜಗದೀಶ್ ಕೊಪ್ಪ, ಮಳವಳ್ಳಿ ಸಾಯಿಕೃಷ್ಣ, ವಿಶಾಲ್, ಧೀರಜ್, ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಚಿತ್ರೋತ್ಸವದಲ್ಲಿ  ಮಾತಾಡು ಮಾತಾಡ್ ಮಲ್ಲಿಗೆ, ಪುಟ್ಟಕ್ಕನ ಹೈವೇ, ತರ್ಲೆವಿಲೇಜ್, ಕಿರಂಗೂರಿನ ಗಯ್ಯಾಳಿಗಳು, ಹೆಬ್ಬೆಟ್ ರಾಮಕ್ಕ, ತಲೆದಂಡ ಮತ್ತು ಬನವಾಸಿ ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಎಲ್ಲಾ ಚಿತ್ರಗಳಿಗೆ  ಪ್ರವೇಶ ಉಚಿತವಿರುತ್ತದೆ ಎಂದು ಆಯೋಜಕರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕರಾದ ಶಿವಲಿಂಗೇಗೌಡ, ಸಹ ಕಾರ್ಯದರ್ಶಿ ಮಂಜು, ನಿರ್ದೇಶಕರಾದ ವಿಶಾಲ್ ಧೀರಜ್, ಜಗದೀಶಕೊಪ್ಪ, ಪತ್ರಕರ್ತರಾದ ಕೃಷ್ಣ ಸ್ವರ್ಣಸಂದ್ರ ಉಪಸ್ಥಿತರಿದ್ದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!