Thursday, September 19, 2024

ಪ್ರಾಯೋಗಿಕ ಆವೃತ್ತಿ

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಬಂಧನ ಖಂಡಿಸಿ ಪ್ರತಿಭಟನೆ

ಈ ದೇಶದ ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಆಮ್ ಆದ್ಮಿ ಸರ್ಕಾರ ಇಡೀ ದೇಶಕ್ಕೆ ಮಾದರಿಯಾದ ಆಡಳಿತ ನಡೆಸುತ್ತಿದೆ. ಅಪ್ರತಿಮ ನಾಯಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ ಜನಪ್ರಿಯತೆ ಸಹಿಸದ ಕೇಂದ್ರದ ಬಿಜೆಪಿ ಸರ್ಕಾರ, ಸಿಬಿಐ ಮತ್ತು ಇ.ಡಿ. ಯನ್ನು ದುರ್ಬಳಕೆ ಮಾಡಿಕೊಂಡು ದೆಹಲಿಯಲ್ಲಿ ಸರ್ಕಾರಕ್ಕೆ ಕಳಂಕ ತರುವ ಉನ್ನಾರ ನಡೆಸುತ್ತಿದೆ ಎಂದು ಅಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇಂದು ಶ್ರೀರಂಗಪಟ್ಟಣದ ಮಿನಿ ವಿಧಾನಸೌಧ  ಬಳಿ ಪ್ರತಿಭಟನೆ ನಡೆಸಿದರು.

ದೆಹಲಿ ಸರ್ಕಾರದ ಲೋಪಗಳನ್ನು ಮರೆಮಾಚಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಸಿಸೋಡಿ ಅವರನ್ನು ಬಂಧಿಸುವಂತೆ ಸಿಬಿಐ ಮೇಲೆ ಒತ್ತಡ ಏರಿರುವುದು ಸುಳ್ಳಲ್ಲ. ತಮ್ಮ ರಾಜಕೀಯ ವಿರೋಧಿಗಳನ್ನು ಅಡಿಯಲು ಬಿಜೆಪಿ ನಾಯಕರು ವಾಮ ಮಾರ್ಗ ಅನುಸರಿಸುತ್ತಿದ್ದಾರೆ. ಮನೀಶ್ ಸಿಸೋಡಿ ಅವರನ್ನು ಬಂಧಿಸಿದ ಮಾತ್ರಕ್ಕೆ ಎಎಪಿ ಪಕ್ಷದ ವರ್ಚಸ್ಸು ಕುಂದಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಾಲ್ಲೂಕು ಆಡಳಿತ ಮೂಲಕ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ವಕೀಲರಾದ ಸಿ.ಎಸ್. ವೆಂಕಟೇಶ್, ಅಲಕೆರೆ ಆನಂದ್, ಜಯಶಂಕರ್ ಕಡತನಾಳು, ಪಾನಿಪುರಿ ರವಿ, ಅಮ್ರೀನಾ ತಾಜ್, ಶ್ರೀನಿವಾಸ್ ಸಬ್ಬನಕುಪ್ಪೆ, ಚಿಕ್ಕ ತಮ್ಮೇಗೌಡ, ಗೌರಮ್ಮ, ವೆಂಕಟಮ್ಮ, ಚಂದ್ರಶೇಖರ್ ಸೇರಿದಂತೆ ಇತರ ಕಾರ್ಯಕರ್ತರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!