Monday, November 23, 2026

ಪ್ರಾಯೋಗಿಕ ಆವೃತ್ತಿ

ನಾಳೆ ”ಅಸ್ಪೃಶ್ಯರ ರಾಜಕೀಯ ಸಮಾವೇಶ”

ಡಾ.ಅಂಬೇಡ್ಕರ್ ಪೀಪಲ್ ಪಾರ್ಟಿ ವತಿಯಿಂದ ಮಾ.18ರಂದು ಮಧ್ಯಾಹ್ನ 2.30 ಗಂಟೆಗೆ ಮಂಡ್ಯನಗರದ ಕರ್ನಾಟಕ ಸಂಘದ ಆವರಣದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ರಾಜ್ಯಮಟ್ಟದ “ಅಸ್ಪಶ್ಯರ ರಾಜಕೀಯ ಸಮಾವೇಶ” ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಕೃಷ್ಣ ಸಿ.ಎಂ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಮಾರುತಿರಾವ್ ಜಂಬಗಾ ಯಾದಗಿರಿ ಕಾರ್ಯಕ್ರಮದ ಉದ್ಘಾಟಿಸಲಿದ್ದು, ಸಂಸ್ಥಾಪಕ ದೇವಮಿತ್ರ ರಾಯಚೂರು ಅಧ್ಯಕ್ಷತೆ ವಹಿಸುವರು. ವಿವಿಧ ಜಿಲ್ಲೆಗಳಿಂದ ಪಕ್ಷದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.

ರಾಜ್ಯದಲ್ಲಿ ಜೆ.ಡಿ.ಎಸ್, ಕಾಂಗ್ರೆಸ್, ಬಿ.ಜೆ.ಪಿ. (J.C.B) ಪಕ್ಷಗಳು ನೈಜ ಪರಿಶಿಷ್ಟ ಸಮುದಾಯದ ನಾಗರೀಕರಿಗೆ ಕಳೆದ 70 ವರ್ಷಗಳಿಂದ ಅಸ್ಪೃಶ್ಯತೆ ಆಚರಣೆ, ಎಸ್.ಸಿ. ಪಟ್ಟಿಯಲ್ಲಿ ಅನಧಿಕೃತವಾಗಿ ಸೇರ್ಪಡೆಗೊಂಡಿರುವ ಓ.ಬಿ.ಸಿ. ಸ್ಪೃಶ್ಯ ಜಾತಿಗಳಾದ ಬಂಜಾರ, ಲಂಬಾಣಿ, ಭೋವಿ, ವಡ್ಡರ, ಕೊರಮ ಮತ್ತು ಕೊರಚ (ಕೊಲಂಬೋ) ಹಾಗೂ ನಕಲಿ ಎಸ್.ಸಿ.ಜಾತಿ ಪ್ರಮಾಣ ಪತ್ರ ಹಾಗೂ S.C.P ಹಣ ದುರುಪಯೋಗ ಮತ್ತು ಬ್ಯಾಕ್‌ ಲಾಗ್ ಹುದ್ದೆಗಳ ಸಂಬಂಧಿಸಿದಂತೆ ನಿರಂತರವಾಗಿ ಮಾಡುತ್ತಿರುವ ಅನ್ಯಾಯ, ವಂಚನೆ, ದ್ರೋಹ ಕುರಿತು ಪರಿಶಿಷ್ಟ ಜಾತಿ ಮತದಾರರಿಗೆ ಜಾಗೃತಿ ಮೂಡಿಸುವ ಸದುದ್ದೇಶದ ಆಶಯವನ್ನು ಪಕ್ಷವು ಹೊಂದಿದೆ ಎಂದರು.

ಗೋ‍ಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಕುಮಾರ್, ಉಪಾಧ್ಯಕ್ಷ ಕೆ.ಹೆಚ್.ನಟರಾಜು, ಕೆ.ವಿ.ವೆಂಕಟವಚಲಯ್ಯ, ಜಯಂತ್, ಆನಂದ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ