ಮೈಸೂರು ಸಮೀಪದ ಹುಯಿಲಾಳು ಗ್ರಾಮ ವ್ಯಾಪ್ತಿಯ ಬನವಾಸಿ ತೋಟದಲ್ಲಿ ಏ.2 ರಂದು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ”ಬೆಳಕಿನ ಬೇಸಾಯ”ದ ಕ್ರಮದ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಲಿದೆ
ಈ ಕಾರ್ಯಗಾರದಲ್ಲಿ ಕೃಷಿಯ ಯಶಸ್ಸಿಗೆ ಕಾರಣವಾಗುವ 6 ಸಿದ್ದ ಸೂತ್ರಗಳಾದ
1. ಬೆಳಕಿನ ಬೇಸಾಯ
2. ಟ್ರೆಂಚಸ್
3. ಹ್ಯೂಮಸ್ ಹಾಗೂ ಸಾವಯವ ಇಂಗಾಲ
4. ಬೆಳೆಗಳ ಸಂಯೋಜನೆ
5. ಬೆಳೆಗಳ ಮಧ್ಯೆ ಅಂತರ
6. ಜೀವ ಚೈತನ್ಯ ಹಾಗೂ ಸಸ್ಯ ಚೈತನ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು.
ನಮ್ಮ ಕೃಷಿ ಭೂಮಿಯನ್ನು ಆಹಾರ ಬನ (ಫುಡ್ ಫಾರೆಸ್ಟ್ ) ವನ್ನಾಗಿ ಬದಲಾಯಿಸುವ ಮಾದರಿಯನ್ನು ತಿಳಿಸಿ ಕೊಡಲಾಗುವುದು. ಹೆಚ್ಚಿನ ವಿವರಗಳಿಗೆ ಟಿ.ಜಿ.ಅವಿನಾಶ್ ಮೊ.8197856132 ಗೆ ಕರೆ ಮಾಡಿ ನೋಂದಣಿ (ನೋಂದಣಿ ಕಡ್ಡಾಯ) ಮಾಡಿಕೊಳ್ಳಬಹುದು.
(ಬನವಾಸಿ ತೋಟವು ಹುಯಿಲಾಳು ಗ್ರಾಮ ವ್ಯಾಪ್ತಿಯಲ್ಲಿದ್ದು, ಮೈಸೂರು ಸಿಟಿ ಬಸ್ ನಿಲ್ದಾಣದಿಂದ 18 ಕಿಲೋಮೀಟರ್ ದೂರವಿದ್ದು, ಭೋಗದಿ ರಿಂಗ್ ರೋಡ್ ನಿಂದ 6 ಕಿಲೋ ಮೀಟರ್ ಅಂತರದಲ್ಲಿದೆ)




