Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೀ ಬೋರ್ಡ್ ವಾದಕ ಕೆ.ಮಂಜುನಾಥ್ ನಿಧನ

ಮಂಡ್ಯ (ಸಿಪಿವಿ) ಕಳೆದ 35 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ತಮ್ಮ ಕೀಬೋರ್ಡ್ ವಾದನದಿಂದ ಖ್ಯಾತರಾಗಿದ್ದ ಕೆ.ಮಂಜುನಾಥ್ ( 54) ಅನಾರೋಗ್ಯ ದಿಂದ ನಿಧನರಾದರು.

ತೀವ್ರ ಅನಾರೋಗ್ಯ ಪೀಡಿತರಾಗಿದ್ದ ಮಂಜುನಾಥ್ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ವಿಫಲಗೊಂಡು ಇಂದು ನಿಧನರಾಗಿದ್ದಾರೆ. ಮೃತರಿಗೆ ಪತ್ನಿ,ಇಬ್ಬರು ಮಕ್ಕಳಿದ್ದಾರೆ.

ಮಂಡ್ಯ ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳಲ್ಲೂ ತಮ್ಮದೇ ಆದ ವಿಶಿಷ್ಟವಾದ ಛಾಪಿನಿಂದ ಖ್ಯಾತರಾಗಿದ್ದ ಮಂಜುನಾಥ್ ಕಲಾವಿದರ ಕುಟುಂಬದಿಂದ ಬಂದವರಾಗಿದ್ದರು.  ತಂದೆ ತಬಲ ಕೃಷ್ಣಪ್ಪ ಎಂದೇ ಪ್ರಖ್ಯಾತ ರಾಗಿದ್ದರು.

ಸುಗಮ ಸಂಗೀತ, ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಕೀ ಬೋರ್ಡ್ ವಾದಕರಾಗಿ ಪ್ರಸಿದ್ದರಾಗಿದ್ದ ಮಂಜುನಾಥ್ ನಿಧನಕ್ಕೆ ಗಮಕಿ ಕಲಾಶ್ರೀ ವಿದ್ಯಾಶಂಕರ್, ಹಿರಿಯ ಮೃದಂಗ ವಾದಕ ಎಸ್.ಸುದರ್ಶನ್, ಶಾಸ್ತ್ರೀಯ ಸಂಗೀತ ಗಾಯಕ ಪುರುಷೋತ್ತಮ್, ಹಿರಿಯ ತಬಲ ಕಲಾವಿದರಾದ ಗಣೇಶ್, ವೆಂಕಟೇಶ, ಗುಂಡಣ್ಣ ಲೋಕಾಭಿ, ನಾಟಕದ ನಿರ್ದೇಶಕ ಗುರುಮೂರ್ತಿ,ರಾಮಚಂದ್ರ , ಷಣ್ಮುಖ, ನವೀನ್ ಸಿ, ದೇವರಾಜ್ ,ಗಾಯಕ ಗಾಮನಹಳ್ಳಿ ಸ್ವಾಮಿ, ರಂಗರತ್ನ ಕಲಾವಿದರ ಸಂಘ, ಕಲಾವಿದ ಸಂಪಳ್ಳಿ , ಬಸವರಾಜ್, ಸಾಹಿತಿ ಡಾ.ಹೆಬ್ರಿ, ನೃತ್ಯ ಗುರು ಪ್ರಕಾಶ್ ಅಯ್ಯರ್, ಗಾಯಕ ರವಿ ಬೆಂಗಳೂರು, ಕಲಾ ಪೋಷಕ ಬಿ.ಎಂ.ಅಪ್ಪಾಜಪ್ಪ
ಸೇರಿದಂತೆ ನೂರಾರು ಮಂದಿ ರಂಗ ಕಲಾವಿದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ನಡೆಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!