Saturday, October 26, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ವಿವಿಧೆಡೆ ಜೆಡಿಎಸ್ ಅಭ್ಯರ್ಥಿ ಬಿ.ಆರ್. ರಾಮಚಂದ್ರು ಪ್ರಚಾರ

ಮಂಡ್ಯ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಅವರು ನಗರದ ವಿವಿಧ ವಾರ್ಡ್ ಗಳಲ್ಲಿ ಮತಯಾಚನೆ ಮಾಡುವ ಮೂಲಕ ಅಧಿಕೃತವಾಗಿ ಪ್ರಚಾರಕ್ಕೆ ಚಾಲನೆ ನೀಡಿದರು.

ಮಂಡ್ಯ ನಗರದ ಬನ್ನೂರು ರಸ್ತೆಯಲ್ಲಿರುವ ಶ್ರೀ ಶನೈಶ್ಚರಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಮುಂಡೇಶ್ವರಿ ನಗರದಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದ ಅವರು, ರಾಜ್ಯದ ಅಭಿವೃದ್ಧಿ ಜಾತ್ಯತೀತ ಜನತಾದಳದಿಂದ ಮಾತ್ರ ಸಾಧ್ಯ. ಅದಕ್ಕಾಗಿ ನನ್ನನ್ನು ಗೆಲ್ಲಿಸುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಮನವಿ ಮಾಡಿದರು.

ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ಇರುವುದರಿಂದ ಆ ರಾಜ್ಯಗಳು ಅಭಿವೃದ್ಧಿಯಲ್ಲಿ ಮುನ್ನಡೆದಿವೆ. ನಮ್ಮ ಸಂಪತ್ತು ಹಾಗೂ ಹಣ ನಮ್ಮಲ್ಲೇ ಇರುತ್ತದೆ. ಅದೇ ರಾಷ್ಟಿçÃಯ ಪಕ್ಷಗಳು ಗೆದ್ದರೆ ಎಲ್ಲವೂ ದೆಹಲಿಯ ನಾಯಕರ ಕೈ ಸೇರುತ್ತದೆ. ಇದರಿಂದ ನಮ್ಮ ರಾಜ್ಯದ ಅಭಿವೃದ್ಧಿ ಅಸಾಧ್ಯ ಎಂದರು.

ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಅವರು ಮಾತನಾಡಿ, ಶಾಸಕ ಎಂ.ಶ್ರೀನಿವಾಸ್ ಅವರೂ ಈಗಲೂ ನಮ್ಮ ನಾಯಕರು. ಆದರೆ, ಅವರು ಟಿಕೆಟ್ ನೀಡಲಿಲ್ಲ ಎಂದು ಸ್ವಾಭಿಮಾನಿ ಪಡೆ ಕಟ್ಟಿಕೊಂಡಿದ್ದಾರೆ. ನಮಗೆ ಪಕ್ಷ ಮುಖ್ಯ. ಆದ್ದರಿಂದ ಪಕ್ಷದ ವರಿಷ್ಠರ ಅಣತಿಯಂತೆ ಬಿ.ಆರ್.ರಾಮಚಂದ್ರು ಅವರನ್ನು ನಾನೂ ಸೇರಿದಂತೆ ಜಾ.ದಳದ ಎಲ್ಲ ನಗರಸಭಾ ಸದಸ್ಯರು ಬೆಂಬಲ ನೀಡಿ ಅವರ ಗೆಲುವಿಗೆ ಪಣತೊಟ್ಟಿದ್ದು, ಅವರನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿ ಅವರ ಕೈ ಬಲಪಡಿಸುತ್ತೇವೆ ಎಂದು ತಿಳಿಸಿದರು.

ಜಾ.ದಳ ನಗರ ಘಟಕದ ಅಧ್ಯಕ್ಷ ಎಸ್.ಪಿ.ಗೌರೀಶ್ ಮಾತನಾಡಿ, ನಮ್ಮನ್ನು ರಾಜಕೀಯವಾಗಿ ಬೆಳೆಸಿದ ಶಾಸಕ ಎಂ.ಶ್ರೀನಿವಾಸ್ ಅವರು ಇಂದಿಗೂ ನಮ್ಮ ಗುರುಗಳು. ಇನ್ನೂ ಕಾಲ ಮಿಂಚಿಲ್ಲ, ಸ್ವಾಭಿಮಾನಿ ಪಡೆಯನ್ನು ಬಿಟ್ಟು, ಮೂರು ಬಾರಿ ಶಾಸಕರಾಗಲು ಕಾರಣವಾಗಿರುವ ಜಾ.ದಳಕ್ಕೆ ಮತ್ತೆ ವಾಪಸ್ ಆಗಿ, ರಾಮಚಂದ್ರು ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಾ.ದಳ ಜಿಲ್ಲಾಧ್ಯಕ್ಷ ಡಿ.ರಮೇಶ್, ನಗರಸಭಾ ಉಪಾಧ್ಯಕ್ಷೆ ಇಷ್ರತ್ ಫಾತಿಮಾ, ಸದಸ್ಯ ಭಾರತೀಶ್, ಕುಮಾರ್, ನಾಗೇಶ, ಮೀನಾಕ್ಷಿ ಪುಟ್ಟಸ್ವಾಮಿ, ಮುಖಂಡ ತುಳಸೀಧರ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!