Friday, November 20, 2026

ಪ್ರಾಯೋಗಿಕ ಆವೃತ್ತಿ

ಮೇ.3ರ ನಾಗಮಂಗಲ ಕಾಂಗ್ರೆಸ್ ಸಭೆಗೆ 45 ಸಾವಿರ ಜನ – ಚಲುವರಾಯಸ್ವಾಮಿ

ಮುಂಬರುವ ಮೇ 3ರಂದು ನಾಗಮಂಗಲದಲ್ಲಿ ನಡೆಯುವ ಕಾಂಗ್ರೆಸ್ ಬಹಿರಂಗ ಸಭೆಗೆ ಕ್ಷೇತ್ರದಾದ್ಯಂತ 45 ಸಾವಿರ ಕಾರ್ಯಕರ್ತರು ಆಗಮಿಸಲಿದ್ದು, ಇತಿಹಾಸ ನಿರ್ಮಾಣವಾಗಲಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ತಿಳಿಸಿದರು.

ನಾಗಮಂಗಲ ಪಟ್ಟಣದಲ್ಲಿ ಗುರುವಾರ ಸಭೆಯಲ್ಲಿ ಮಾತನಾಡಿದ ಅವರು, ಮೇ 3ರ ಕಾಂಗ್ರೆಸ್ ಸಭೆಗೆ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸಬೇಕೆಂದರು.

ಜೆಡಿಎಸ್ ಹಣ ಕೊಟ್ಟರೂ ಜನ ಬರುವುದಿಲ್ಲ
ಜೆಡಿಎಸ್ ಪಕ್ಷದವರು ಮೇ.7ಕ್ಕೆ ಸಭೆ ಹಮ್ಮಿಕೊಂಡಿದ್ದಾರೆ. ಅವರು ಮನೆ ಮನೆ ಬಾಗಿಲಿಗೆ ತೆರಳಿ ಹಣ ಹಂಚಿದರೂ ನಮ್ಮ ಪಕ್ಷದ ಸಭೆಗೆ ಆಗಮಿಸುವಷ್ಟು ಜನರನ್ನು ಜನ ತರಲು ಅವರಿಂದ ಅಸಾಧ್ಯವಾಗದು ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪಕ್ಷಾತೀತವಾಗಿ ರೈತರು, ಕಾರ್ಮಿಕರು, ಮಹಿಳೆಯರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಿದೆ. ಚುನಾವಣೆಗೆ ಇನ್ನು ಕೇವಲ ಹತ್ತು ದಿನಗಳು ಬಾಕಿ ಇದ್ದು, ಈ ಹತ್ತು ದಿನಗಳಲ್ಲಿ ಕಾರ್ಯಕರ್ತರು ಒಮ್ಮತದಿಂದ ಜವಾಬ್ದಾರಿಯುತವಾಗಿ ಕೆಲಸ ಮಾಡಿ, ನೀವು ಕೇವಲ ಮತ ಹಾಕುವವರಲ್ಲ, ಮತ ಹಾಕಿಸುವವರು ಎಂದು ಕಾಂಗೆಸ್ ಮುಖಂಡರು, ಕಾರ್ಯಕರ್ತರಿಗೆ ತಿಳಿಹೇಳಿದರು

ಕಾಂಗ್ರೆಸ್ ಸರ್ಕಾರ ದೇಶಕ್ಕೆ ಹಾಗೂ ರಾಜ್ಯಕ್ಕೆ ಆಸ್ತಿ ಇದ್ದಂತೆ, ಮನಮೋಹನ್ ಸಿಂಗ್ ಅವರ ಆಡಳಿತದ ಅವಧಿಯಲ್ಲಿ ಸುಲಲಿತಾ ಸೌಲಭ್ಯಗಳನ್ನ ಜನರಿಗೆ ಕಲ್ಪಿಸಿಕೊಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ದಿನ ನಿತ್ಯದ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಸಾರ್ವಜನಿಕರ ಮೇಲೆ ಅಪಾರ ಪ್ರಮಾಣ ಹೊರೆಯನ್ನು ಬಿಜೆಪಿ ಹೊರಿಸಿದೆ ಎಂದು ಕಿಡಿಕಾರಿದರು.

ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಹೊನ್ನೇನಹಳ್ಳಿ ಕೃಷ್ಣೇಗೌಡ, ಪ್ರಸನ್ನ, ರಾಜೇಗೌಡ, ದಿವಾಕರ್, ಚಲುವರಾಯಸ್ವಾಮಿ, ಮುಸ್ಲಿಂ ಮುಖಂಡ ಹನ್ಸರ್, ಮಹಿಳಾ ಅಧ್ಯಕ್ಷೆ ವಸಂತಮಣಿ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ