Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಪಕ್ಷೇತರ ಅಭ್ಯರ್ಥಿ ವಿಜಯ್ ಆನಂದ್ ಬೆಂಬಲಿಸಲು ಮನವಿ

ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ಮೊಮ್ಮೊಗ ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರದ ಪಕ್ಷೇತರ ಆಭ್ಯರ್ಥಿ  ಕೆ.ಎಸ್.ವಿಜಯ್ ಆನಂದ್ ಅವರನ್ನು ಕ್ಷೇತ್ರದ ಮತದಾರರು ಪಕ್ಷಬೇಧ ಮರೆತು ಬೆಂಬಲಿಸುವಂತೆ ಪ್ರೊ.ಜಿ.ಟಿ.ವೀರಪ್ಪ ಸೇರಿದಂತೆ ಪಿಇಎಸ್ ಕಾಲೇಜಿನ ಹಲವು ನಿವೃತ್ತ ಉದ್ಯೋಗಿಗಳು ಮನವಿ ಮಾಡಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಚುನಾವಣೆ ಸಂದರ್ಭದ ಮಾಹಿತಿಗಳನ್ನು ಗಮನಿಸಿದಾಗ ಹಲವು ಪಕ್ಷಗಳಲ್ಲಿ 55%, 43%, 35% ಅಭ್ಯರ್ಥಿಗಳು ಅಪರಾಧ ಮೊಕದ್ದಮೆಗಳ ಹಿನ್ನೆಲೆಯವರೆಂದು ತಿಳಿದು ಬರುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಗಣಿ ಅಕ್ರಮ, ಭೂ ಅಕ್ರಮ, ಹಾಲು ನೀರು ಬೆರೆಸಿದ ಅಕ್ರಮ, ಜೂಜು ಅಕ್ರಮಗಳ ಹಿನ್ನೆಲೆಯುಳ್ಳವರು ಅಭ್ಯರ್ಥಿಗಳಾಗಿದ್ದಾರೆ. ಆದ್ದರಿಂದ ಅಪರಾಧಿಕ ಹಿನ್ನೆಲೆಯುಳ್ಳವನ್ನು ತಿರಸ್ಕರಿಸಿ, ವಿಜಯ್ ಆನಂದ್ ಅವರನ್ನು ಬೆಂಬಲಿಸುವಂತೆ ಕೋರಿದರು.

ಇಂಥ ಪರಿಸ್ಥಿತಿಯಲ್ಲಿ ಕೆಲವು ಪಕ್ಷೇತರ ಪ್ರಾಮಾಣಿಕ ಅಭ್ಯರ್ಥಿಗಳಾದರೂ ಗೆದ್ದು ಬಂದರೆ ಕರ್ನಾಟಕದ ಭವಿಷ್ಯ ದೃಷ್ಟಿಯಿಂದ ಒಳ್ಳೆಯದು. ಆದ್ದರಿಂದ ಮಂಡ್ಯ ಜಿಲ್ಲೆಯ ಹಿರಿಯ ಚೇತನ ಕೆ.ವಿ. ಶಂಕರಗೌಡರ ಮೊಮ್ಮಗನಾಗಿ, ಉತ್ತಮ ಪರಿಸರದಿಂದ ಬಂದಂತಹ ಪ್ರಾಮಾಣಿಕ ವ್ಯಕ್ತಿ ವಿಜಯ್ ಆನಂದ್ ಅವರನ್ನು ಚುನಾಯಿಸುವ ಮೂಲಕ ಜನಸೇವೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಡಾ.ಜಿ.ಪಿ.ಶಿವಶಂಕರ್, ಡಾ.ವಿ.ಕೆ.ಕೃಷ್ಣಪ್ಪ, ಪ್ರೊ.ಹೆಚ್.ಜೆ.ನಿಂಗರಾಜು, ಪ್ರೊ.ಹೆಚ್‌.ಎಸ್.ನರಸಿಂಹಮೂರ್ತಿ, ಡಾ.ರಾಮಲಿಂಗಯ್ಯ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ